ವರುಣ್ ಧವನ್ ಹಾಗೂ ನತಾಶಾ ದಲಾಲ್ ದಂಪತಿಗೆ ಹೆಣ್ಣು ಮಗು...!
ಬಾಲಿವುಡ್‌ನ ಹ್ಯಾಂಡ್ಸಮ್ ನಾಯಕ ವರುಣ್ ಧವನ್ ತಂದೆಯಾಗಿದ್ದಾರೆ. ಅವರ ಪತ್ನಿ ನತಾಶಾ ದಲಾಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವರುಣ್ ಧವನ್ ತಂದೆ ಡೇವಿಡ್ ಧವನ್ ಈ ಸುದ್ದಿಯನ್ನ ಖಚಿತಪಡಿಸಿದ್ದು ವರುಣ್ ಧವನ್ ಹಾಗೂ ನತಾಶಾ ದಲಾಲ್ ದಂಪತಿಗೆ ಶುಭಕೋರಿದ ಎಲ್ಲರಿಗೂ ಧನ್ಯವಾದವನ್ನೂ ಕೂಡ ಡೇವಿಡ್ ಧವನ್ ತಿಳಿಸಿದ್ದಾರೆ.
ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಜೊತೆ 2021ರಲ್ಲಿ ಅಲಿಭಾಗ್ನಲ್ಲಿ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಸಪ್ತಪದಿಯನ್ನ ತುಳಿದಿದ್ದ ವರುಣ್ ಧವನ್, ಕಳೆದ ಫೆಬ್ರವರಿ 18ರಂದು ತಂದೆಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದರು. ನತಾಶಾ ಅವರ ಬೇಬಿ ಬಂಪ್‌ಗೆ ಮುತ್ತು ಕೊಡುವ ಬ್ಲಾಕ್ ಅಂಡ್ ವೈಟ್ ಫೋಟೋ ಶೇರ್ ಮಾಡುವ ಮೂಲಕ ವರುಣ್ ಧವನ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

ಸದ್ಯ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ವರುಣ್ ತಂದೆ ಡೇವಿಡ್ ಧವನ್ ತಾತನಾದ ಬಗ್ಗೆ ಖುಷಿ ಹಂಚಿಕೊಂಡಿದ್ದು, ಸದ್ಯ ವರುಣ್ ಹಾಗೂ ಪತ್ನಿ ನತಾಶಾಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.
ಇನ್ನೂ ಬಾಲಿವುಡ್‌ನ ಸ್ಟಾರ್ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಕರಣ್ ಜೋಹರ್ ಕೂಡ ವರುಣ್ ಧವನ್ ಮತ್ತು ನತಾಶಾ ದಲಾಲ್‌ಗೆ ಶುಭಾಶಯವನ್ನ ಕೋರಿದ್ದಾರೆ.ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ 'ನನ್ನ ಮಗುವಿಗೆ ಹೆಣ್ಣು ಮಗುವಾಗಿದೆ. ಶುಭಾಶಯಗಳು ವರುಣ್ ಧವನ್ ಹಾಗೂ ನತಾಶಾ ದಲಾಲ್' ಎಂದಿದ್ದಾರೆ.

ಅಂದ್ಹಾಗೇ ವರುಣ್ ಧವನ್ ಅವರಿಗೆ ಹೆಣ್ಣು ಮಗು ಆಗಬೇಕೆಂಬ ಆಸೆ ಇತ್ತು. ಹಿಂದೊಮ್ಮೆ ಕರಣ್ ಜೋಹರ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಖುದ್ದು ವರುಣ್ ಧವನ್ ಈ ಮಾತನ್ನ ಹೇಳಿದ್ದರು. ಶಾಹಿದ್ ಅವರಲ್ಲಿ ಇರುವುದು ನಿಮ್ಮಲ್ಲಿ ಏನು ಇಲ್ಲ ಎಂದು ಪ್ರಶ್ನಿಸಿದ್ದರು. ಆಗ ವರುಣ್ ಅವರು ಕೂಡಲೇ ಅವರ ಬಳಿ ಮಗಳು ಇದ್ದಾಳೆ. ಆದರೆ ಅವರ ಮಗಳ ನನಗೆ ಬೇಡ. ನನಗೆ ನನ್ನದೇ ಆದ ಮಗಳು ಬೇಕು ಎಂದಿದ್ದರು. ಈ ಮೂಲಕ ತಮಗೆ ಪುತ್ರಿಯೇ ಆಗಬೇಕೆಂದು ಹೇಳಿದ್ದರು. ಆ ಆಸೆ ಕೊನೆಗೂ ಈಗ ಈಡೇರಿದೆ.
ಉಳಿದಂತೆ ವರುಣ್ ಧವನ್ ಅವರು 'ಬೇಬಿ ಜಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ. ಕಲೀಶ್ವರನ್ ಅವರು ಇದನ್ನು ನಿರ್ದೇಶಿಸುತ್ತಿದ್ದ, ಮುರದ್ ಖೇತಾನಿ ಇದನ್ನು ನಿರ್ಮಿಸುತ್ತಿದ್ದಾರೆ. ಪ್ರಿಯಾ ಅಟ್ಲೀ ಹಾಗೂ ಜ್ಯೋತಿ ದೇಶಪಾಂಡೆ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಇದಲ್ಲದೇ ವರುಣ್ ಧವನ್ ಶೀಘ್ರದಲ್ಲೇ ಅವರ ಮುಂಬರುವ ಚಿತ್ರವನ್ನೂ ಶುರು ಮಾಡಲಿದ್ದಾರೆ. ವರುಣ್ ಧವನ್ ಮತ್ತು ಸಮಂತಾ ಅಭಿನಯದ ಸಿಟಾಡೆಲ್ ವೆಬ್ ಸರಣಿ ಅಮೆಜಾನ್ ಪ್ರೈಮ್‌ನಲ್ಲಿ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ. ದಿ ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಈ ವೆಬ್ ಸರಣಿಯನ್ನ ನಿರ್ದೇಶಿಸಿದ್ದಾರೆ. ಸದ್ಯಕ್ಕೆ ಹೆಣ್ಣು ಮಗುವಿಗೆ ತಂದೆ-ತಾಯಿ ಆದ ವರುಣ್ ಧವನ್ ಮತ್ತು ನತಾಶಾಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.


Click it and Unblock the Notifications











