ನಟ ವರುಣ್ ಧವನ್ ಕಣ್ಣಮುಂದೆಯೇ ಪ್ರಾಣ ಬಿಟ್ಟ ಕಾರು ಚಾಲಕ ಮನೋಜ್!
ಸ್ಟಾರ್ ನಟ ನಟಿಯರು ತಮಗಿಂತಲೂ ತಮಗಾಗಿ ದಿನನಿತ್ಯ ದುಡಿಯುವ ವ್ಯಕ್ತಿಗಳನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅಂಥವರ ಮೇಲೆ ಸಾಕಷ್ಟು ಪ್ರೀತಿ ಇಟ್ಟುಕೊಳ್ಳುವ ಸ್ಟಾರ್ ನಟ ನಟಿಯರು ಅವರ ಕಷ್ಟಕ್ಕೆ ಬೇಗ ನೆರವಾಗುತ್ತಾರೆ. ಅಂಥವರು ದೂರವಾದಾಗ ಆಗುವ ನೋವು ಹೇಳತೀರದು. ಇದೀಗ ಅಂಥದ್ದೇ ಪರಿಸ್ಥಿತಿ ಬಾಲಿವುಡ್‌ನ ಖ್ಯಾತ ನಟ ವರುಣ್ ಧವನ್‌ಗು ಉಂಟಾಗಿದೆ. ವರುಣ್ ಧವನ್ ಕಾರು ಚಾಲಕ ಜನವರಿ 18ಕ್ಕೆ ಮೃತಪಟ್ಟಿದ್ದು, ವರುಣ್ ಧವನ್‌ಗೆ ಇದು ಸಾಕಷ್ಟು ನೋವುಂಟು ಮಾಡಿದೆ.
ಬಾಲಿವುಡ್ ನಟ ವರುಣ್ ಧವನ್ ಕಾರು ಚಾಲಕ ಮನೋಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿದು ನಟ ವರುಣ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ವರುಣ್ ಧವನ್ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾರು ಚಾಲಕ ಮನೋಜ್ ವರುಣ್ ಧವನ್ ಕಣ್ಣ ಮುಂದೆಯೇ ಸಾವನ್ನಪ್ಪಿದ್ದಾರೆ. ಜನವರಿ 18ರಂದು ವರುಣ್ ಧವನ್‌ರನ್ನು ಮನೋಜ್ ಶೂಟಿಂಗ್ ಜಾಗಕ್ಕೆ ಡ್ರಾಪ್ ಮಾಡಿದ್ದಾರೆ. ಆಡ್ ಶೂಟ್‌ನಲ್ಲಿ ವರುಣ್ ಧವನ್ ಭಾಗಿ ಆಗಬೇಕಿತ್ತು. ಡ್ರಾಪ್ ಮಾಡಿದ ಸಂದರ್ಭವೇ ಮನೋಜ್ ಅವರಿಗೆ ಎದೆ ನೋವು ಕಾಣಿಸಿಕೊಂಡು, ತೀವ್ರ ನೋವಿನಿಂದ ಒದ್ದಾಡುತ್ತಾರೆ. ಇದನ್ನು ಗಮನಿಸಿದ ವರುಣ್ ಧವನ್ ಕೂಡಲೇ ಮನೋಜ್ ಅವರನ್ನು ಆಸ್ಪತ್ರೆಗೆ ರವಾನಿಸುತ್ತಾರೆ.
ಆಡ್ ಶೂಟ್ ಎಲ್ಲವನ್ನು ನಿಲ್ಲಿಸಿ ಮನೋಜ್ ಜೊತೆ ವರುಣ್ ಧವನ್ ಕೂಡ ತೆರಳಿದ್ದಾರೆ. ಮುಂಬೈನ ಖಾಸಗೀ ಆಸ್ಪತ್ರೆಗೆ ಮನೋಜ್ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಆದರೇ ಆಸ್ಪತ್ರೆ ತಲುಪುವ ಮುನ್ನವೇ ಮನೋಜ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂದರ್ಭ ವರುಣ್ ಧವನ್ ಮನನೊಂದು ಕುಟುಂಬ ಸದಸ್ಯರಿಗೆ ಮಾಹಿತಿ ಮುಟ್ಟಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಸುದ್ದಿ ತಿಳಿದು ವರುಣ್ ಧವನ್ ತಂದೆ ಡೇವಿಡ್ ಕರೆ ಮಾಡಿ ಮಗನಿಗೆ ಸಮಾಧಾನ ಕೂಡ ಮಾಡಿದ್ದಾರೆ.

ವರುಣ್ ಧವನ್ ಮೊದಲಿನಿಂದಲೂ ಮನೋಜ್ ಅವರ ಬಳಿ ಉತ್ತಮ ಒಡನಾಟವನ್ನು ಹೊಂದಿದ್ದರು. ಒಂದಲ್ಲ ಎರಡಲ್ಲಾ ಸುಮಾರು 15 ವರ್ಷಗಳಿಂದ ಮನೋಜ್ ವರುಣ್ ಧವನ್ ಅವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. 15 ವರ್ಷದಿಂದಲೂ ಕೆಲಸವನ್ನು ನಿಷ್ಠೆಯಿಂದಲೇ ಮಾಡುತ್ತಿದ್ದ ಮನೋಜ್ ಅವರನ್ನು ಕಂಡರೇ ಇಡೀ ಕುಟುಂಬಕ್ಕೆ ಪ್ರೀತಿಯಂತೆ. ಕಷ್ಟ ಅಂದರೇ ಸಾಕು ಮನೋಜ್ ಕುಟುಂಬಕ್ಕೆ ಹಣದ ನೆರವನ್ನು ಕೂಡ ಮಾಡುತ್ತಿದ್ದರು ವರುಣ್ ಧವನ್. ಹೀಗೆ ಕುಟುಂಬದಲ್ಲಿ ಒಬ್ಬರಂತೆ ಇದ್ದ ಮನೋಜ್‌ರನ್ನು ಕಳೆದುಕೊಂಡು ಈಗ ವರುಣ್ ಧವನ್ ಕುಟುಂಬ ದುಃಖತಪ್ತವಾಗಿದೆ.
ಮನೋಜ್ ಸಾವಿನ ನಂತರ ಅವರ ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ವರುಣ್ ಧವನ್ ತೆಗೆದುಕೊಂಡಿದ್ದಾರಂತೆ. ಮನೋಜ್ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ, ಮನೆಯ ನಿರ್ವಹಣೆ ಜವಾಬ್ದಾರಿ ಇನ್ಮುಂದೆ ವರುಣ್ ಅವರದ್ದು ಎಂಬ ಬಗ್ಗೆ ವರದಿ ಆಗಿದೆ. ತಮ್ಮ ಜೊತೆ ಬಹಳ ಅನ್ಯೋನ್ಯವಾಗಿದ್ದ ಮನೋಜ್ ಅವರ ಕುಟುಂಬದ ಜವಬ್ದಾರಿ ಹೊತ್ತು ವರುಣ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೆ ಅಲ್ಲದೇ ಅಂತಿಮ ವಿಧಿ ವಿಧಾನದ ಎಲ್ಲಾ ಜವಬ್ದಾರಿಯನ್ನು ವರುಣ್ ಧವನ್ ಕುಟುಂಬವೇ ನೋಡಿ ಕೊಂಡಿದೆ.
ಮನೋಜ್ ಸಾವಿನ ನೋವಿನಲ್ಲಿ ಇರುವ ವರುಣ್ ಧವನ್ ಕೊಂಚ ದಿನ ಶೂಟಿಂಗ್‌ಗು ಗೈರಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ನೋವಿನಿಂದ ಹೊರಬಂದ ನಂತರ ಶೂಟಿಂಗ್‌ನಲ್ಲಿ ಭಾಗಿ ಆಗಲು ವರುಣ್ ಧವನ್ ನಿರ್ಧರಿಸಿದ್ದು, ಒಂದು ವಾರದ ಬಳಿಕ ಆಡ್ ಶೂಟ್ ಮತ್ತು ಸಿನಿಮಾ ಚಿತ್ರೀರಣದಲ್ಲಿ ಭಾಗಿ ಆಗಲಿದ್ದಾರೆ.
ಇನ್ನು ವರುಣ್ ಧವನ್ ಬಾಲಿವುಡ್‌ನ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಅವರು ಒಪ್ಪಿಕೊಂಡಿರುವ ಭೇಡಿಯಾ ಸಿನಿಮಾದ ಚಿತ್ರೀಕರಣ ಇನ್ನೇನು ಆರಂಭವಾಗೋದ್ರಲ್ಲಿ ಇದೆ. ಅಮರ್ ಕೌಶಿಕ್ ಭೇಡಿಯಾ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ವರುಣ್ ಧವನ್ ಜೊತೆ ಕೃತಿ ಸನೋನ್, ಅಭಿಷೇಕ್ ಬ್ಯಾನರ್ಜಿ ಕೂಡ ಪಾತ್ರವರ್ಗದಲ್ಲಿ ಇರಲಿದ್ದಾರೆ.


Click it and Unblock the Notifications










