For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರದ್ಧಾ ಮದುವೆಯ ಬಗ್ಗೆ ಸುಳಿವು ನೀಡಿದ ನಟ ವರುಣ್ ಧವನ್

  |

  ಬಾಲಿವುಡ್ ನಟ ವರುಣ್ ಧವನ್ ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ಇತ್ತೀಚಿಗಷ್ಟೆ ಹಸೆಮಣೆ ಏರಿದ್ದಾರೆ. ಮದುವೆ ಬಳಿಕ ವರುಣ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಮದುವೆ ಶುಭಾಶಯ ಕೋರಿದ ಬಾಲಿವುಡ್ ಗಣ್ಯರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

  ವರುಣ್ ಧವನ್ ದಂಪತಿ ಅಲಿಬಾಗ್ ನಿಂದ ಮುಂಬೈಗೆ ವಾಪಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ವರುಣ್ ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪರ್ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ಶ್ರದ್ಧಾ ಕಪೂರ್ ರೂಮರ್ ಬಾಯ್ ಫ್ರೆಂಡ್ ರೋಹನ್ ಶ್ರೇಷ್ಠಾ ವರುಣ್ ಧವನ್ ದಂಪತಿಗೆ ಶುಭಾಶಯ ತಿಳಿಸಿದ್ದರು.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ

  ವರುಣ್ ಮತ್ತು ನತಾಶಾ ಫೋಟೋ ಶೇರ್ ಮಾಡಿ, 'ಅಭಿನಂದನೆಗಳು ವರುಣ್ ಧವನ್ ಮತ್ತು ನತಾಶಾ. ವರುಣ್ ತುಂಬಾ ಅದೃಷ್ಟವಂತ ವ್ಯಕ್ತಿ' ಎಂದು ಬರೆದುಕೊಂಡಿದ್ದಾರೆ. ರೋಹನ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ವರುಣ್ 'ನಿಜಕ್ಕೂ ನೀವು ಕೂಡ ಮದುವೆಗೆ ಸಿದ್ಧರಾಗಿದ್ದೀರಾ ಎಂದು ಭಾವಿಸಿದ್ದೇನೆ' ಎಂದು ಹೇಳಿದ್ದಾರೆ.

  ಅಂದಹಾಗೆ ಶ್ರದ್ಧಾ ಕಪೂರ್ ಕಳೆದ ಕೆಲವು ವರ್ಷಗಳಿಂದ ಸೆಲೆಬ್ರಿಟಿ ಛಾಯಾಗ್ರಾಹಕ ರೋಹನ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಅಲ್ಲದೆ ಇಬ್ಬರಿಗೂ ನಿಶ್ಚಿತಾರ್ಥ ನಡೆದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಶ್ರದ್ಧಾ ಆಗಲಿ ಅಥವಾ ರೋಹನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  2020ರಲ್ಲಿ ಶ್ರದ್ಧಾ ಕಪೂರ್ ಸಂದರ್ಶನವೊಂದರಲ್ಲಿ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದರು. ಸದ್ಯ ಸಿನಿಮಾಗಳು ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಯೋಚಿಸಲು ಸಮಯವಿಲ್ಲ ಎಂದು ಹೇಳುವ ಮೂಲಕ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.

  ಇದುನ್ನ ನಾವಿಬ್ರು ಮಾಡೋಣ ಅಂತ ನಾನೇ ಐಂದ್ರಿತಾಗೆ ಹೇಳಿದ್ದು | Filmibeat Kannada

  ಇನ್ನು ಶ್ರದ್ಧಾ ಕಪೂರ್ ತಂದೆ ಶಕ್ತಿ ಕಪೂರ್ ಸಹ ಮಗಳ ಮದುವೆ ವಿಚಾರ ಕೇಳಿ ಕೆಂಡಾಮಂಡಲ ಆಗಿದ್ದರು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದರು. ಇನ್ನೂ 4-5 ವರ್ಷ ಮದುವೆ ಯೋಚನೆ ಮಾಡಿಲ್ಲ. ಸಿನಿಮಾಗಳ ಬಗ್ಗೆ ಗಮನ ಹರಿಸಿದ್ದಾರೆ ಎಂದು ಹೇಳಿದ್ದರು. ಆದರೀಗ ವರುಣ್ ಧವನ್ ಸ್ಟೇಟಸ್ ಶ್ರದ್ಧಾ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನುವ ಸುಳಿವು ನೀಡಿದ್ದಾರೆ.

  English summary
  Bollywood Actor Varun Dhawan hints about Shraddha Kapoor and Rohan Shrestha marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X