For Quick Alerts
  ALLOW NOTIFICATIONS  
  For Daily Alerts

  ವರುಣ್ ಧವನ್ ಮದುವೆಯಾಗುತ್ತಿರುವ ನತಾಶಾ ದಲಾಲ್ ಯಾರು? ಹಿನ್ನೆಲೆ ಏನು?

  |

  ಬಾಲಿವುಡ್ ಯುವನಟ ವರುಣ್ ಧವನ್ ತಮ್ಮ ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ವಿವಾಹವಾಗುತ್ತಿದ್ದಾರೆ. ಮುಂಬೈ ನ ಅಲಿಭಾಗ್‌ನಲ್ಲಿ ಅದ್ಧೂರಿಗಾಗಿ ಮದುವೆ ಸಂಭ್ರಮ ಈಗಾಗಲೇ ಪ್ರಾರಂಭವಾಗಿದೆ.

  ಸದ್ದಿಲ್ಲದೆ ಮುಗಿದುಹೋಯ್ತು ವರುಣ್ ಧವನ್ ಮದುವೆ | Filmibeat Kannada

  ವರುಣ್ ಧವನ್ ಹೆಸರು ಹಲವು ನಟಿಯರೊಟ್ಟಿಗೆ ಕೇಳಿ ಬಂದಿತ್ತು ಆದರೆ ಎಲ್ಲರಿಗೂ ಅಚ್ಚರಿ ಮೂಡಿಸಿ ಸಿನಿಮಾದೊಂದಿಗೆ ಸಂಬಂಧವೇ ಇರದಿದ್ದ ನತಾಶಾ ಗೆ ಹೃದಯ ಕೊಟ್ಟರು ವರುಣ್ ಧವನ್.

  ವರುಣ್ ಧವನ್ ಕೆಲ ತಿಂಗಳ ಮುನ್ನಾ ತಾವು ನತಾಶಾ ದಲಾಲ್ ಜೊತೆ ಪ್ರೀತಿಯಲ್ಲಿರುವುದಾಗಿ ಹೇಳಿದ್ದರು. ಇಬ್ಬರೂ ಜೊತೆಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಆಗಿನಿಂದಲೂ ಯಾರು ಈ ನತಾಶಾ ದಲಾಲ್ ಎಂಬ ಪ್ರಶ್ನೆ ಎದ್ದಿತ್ತು.

  ಉದ್ಯಮಿ ರಾಜೇಶ್ ದಲಾಲ್ ಪುತ್ರಿ

  ಉದ್ಯಮಿ ರಾಜೇಶ್ ದಲಾಲ್ ಪುತ್ರಿ

  ನತಾಶಾ ದಲಾಲ್ ಖ್ಯಾತ ಉದ್ಯಮಿ ರಾಜೇಶ್ ದಲಾಲ್ ಪುತ್ರಿ. ನತಾಶಾ ತಾಯಿಯ ಹೆಸರು ಗೌರಿ ದಲಾಲ್, ಅವರೂ ಸಹ ಉದ್ಯಮಿಯೇ. ನತಾಶಾ ಅವರದ್ದು ಉದ್ಯಮಿಗಳ ಕುಟುಂಬ. ಸ್ವತಃ ನತಾಶಾ ಸಹ ಸ್ವಂತ ಫ್ಯಾಷನ್ ಬ್ರ್ಯಾಂಡ್ ಅನ್ನು ಹೊಂದಿದ್ದಾರೆ. ಅದರ ಹೆಸರು 'ನತಾಶಾ ದಲಾಲ್ ಲೇಬಲ್'.

  ವರುಣ್ ಧವನ್-ನತಾಶಾ ಶಾಲಾ ಸಹಪಾಠಿಗಳು

  ವರುಣ್ ಧವನ್-ನತಾಶಾ ಶಾಲಾ ಸಹಪಾಠಿಗಳು

  ನತಾಶಾ ತನ್ನ ಬಹುತೇಕ ಶಿಕ್ಷಣ ಮುಗಿಸಿದ್ದು ಮುಂಬೈ ನಲ್ಲಿಯೇ. ಆದರೆ ಫ್ಯಾಷನ್ ಡಿಸೈನ್‌ನಲ್ಲಿ ಪದವಿ ಪಡೆದಿದ್ದು ನ್ಯೂಯಾರ್ಕ್‌ನಲ್ಲಿ. ವರುಣ್ ಧವನ್ ಹಾಗೂ ನತಾಶಾ ಒಟ್ಟಿಗೆ ಶಾಲೆ ಕಲಿತವರು. ಇಬ್ಬರೂ ಆರನೇ ತರಗತಿಯಲ್ಲಿಯೇ ಗೆಳೆಯರಾಗಿದ್ದರು.

  ಒಟ್ಟಿಗೆ ಓದಿದರೂ ಪ್ರೀತಿ ಮೊಳೆತಿದ್ದು ತಡವಾಗಿ

  ಒಟ್ಟಿಗೆ ಓದಿದರೂ ಪ್ರೀತಿ ಮೊಳೆತಿದ್ದು ತಡವಾಗಿ

  ವರುಣ್-ನತಾಶಾ ಇಬ್ಬರೂ ಶಾಲಾ ಸಹಪಾಠಿಗಳಾದರೂ ಸಹ ಇಬ್ಬರ ನಡುವೆ ಪ್ರೀತಿ ಮೊಳೆತಿದ್ದು ತಡವಾಗಿಯೇ. ಶಾಲೆ, ಕಾಲೇಜುಗಳೆಲ್ಲಾ ಮುಗಿದ ಬಳಿಕ ಹಲವು ವರ್ಷಗಳ ನಂತರ ಇಬ್ಬರೂ ಒಂದು ಸಂಗೀತ ಕಾರ್ಯಕ್ರಮದಲ್ಲಿ ಭೇಟಿಯಾದರು. ಅಲ್ಲಿಂದ ಮತ್ತೆ ಸ್ನೇಹ ಚಿಗುರಿತು.

  ಬಾಲಿವುಡ್ ಪ್ರವೇಶಕ್ಕೆ ಮುನ್ನವೇ ಪ್ರೀತಿ

  ಬಾಲಿವುಡ್ ಪ್ರವೇಶಕ್ಕೆ ಮುನ್ನವೇ ಪ್ರೀತಿ

  ವರುಣ್ ಧವನ್ ಬಾಲಿವುಡ್‌ನಲ್ಲಿ ತಮ್ಮ ಮೊದಲ ಸಿನಿಮಾದಲ್ಲಿ ನಟಿಸುವ ಮುನ್ನವೇ ಇಬ್ಬರೂ ಪ್ರೀತಿಯಲ್ಲಿದ್ದರು. ವರುಣ್ ತಮ್ಮ ಮೊದಲ ಸಿನಿಮಾ ಮಾಡಿದಾಗಲೇ ವರುಣ್ ಜೊತೆಗೆ ನತಾಶಾ ಹೆಸರು ಕೇಳಿಬಂದಿತ್ತು.

  ಪ್ರೀತಿ ವಿಷಯ ಗುಟ್ಟಾಗಿಟ್ಟಿದ್ದ ಜೋಡಿ

  ಪ್ರೀತಿ ವಿಷಯ ಗುಟ್ಟಾಗಿಟ್ಟಿದ್ದ ಜೋಡಿ

  ನತಾಶಾ-ವರುಣ್ ಧವನ್ ಇಬ್ಬರೂ ಬಹಳ ವರ್ಷ ತನ್ನ ಪ್ರೀತಿ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಒಮ್ಮೆ ವರುಣ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ತಾವು ನತಾಶಾ ಅನ್ನು ವಿವಾಹವಾಗುವುದಾಗಿ ಹೇಳಿದ್ದರು. ಕೊನೆಗೆ 2019 ರ ಅಂತ್ಯದಲ್ಲಿ ನತಾಶಾ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರೀತಿ ವಿಷಯ ಬಹಿರಂಗಗೊಳಿಸಿದರು.

  English summary
  Actor Varun Dhawan marrying Natasha Dalal. Who is Natasha Dalal what is her background.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X