ಬಾಲಿವುಡ್‌ನ ಈ ಸಿನಿಮಾ ನೋಡಿ ಆಡಿಕೊಂಡು ನಗುತ್ತಿದ್ದಾರೆ ನೆಟ್ಟಿಗರು
ಸಾಮಾಜಿಕ ಜಾಲತಾಣದ ಈ ಕಾಲದಲ್ಲಿ ಯಾವುದೇ ವಿಷಯದ ಬಗ್ಗೆಯೂ ಜನರ ನೇರ ಅಭಿಪ್ರಾಯ ಕ್ಷಣಮಾತ್ರದಲ್ಲಿ ದೊರಕಿಬಿಡುತ್ತದೆ. ಸಿನಿಮಾಗಳ ಬಗ್ಗೆಯೂ ಅಷ್ಟೆ.
ವಿಮರ್ಶಕರು ಏನೇ ಹೇಳಲಿ ಸಿನಿಮಾ ಬಗ್ಗೆ ಜನರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದೇ ಮುಖ್ಯವಾಗುತ್ತದೆ. ಅಂತೆಯೇ ಇತ್ತಿಚೆಗೆ ಬಿಡುಗಡೆ ಆಗಿರುವ ಬಾಲಿವುಡ್‌ನ ಒಂದು ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ನೆಗೆಟಿವ್ ಅಭಿಪ್ರಾಯಗಳು ವ್ಯಕ್ತವಾಗಿವೆ. ಅದೇ 'ಕೂಲಿ ನಂ1' ಸಿನಿಮಾ.
1995 ರಲ್ಲಿ ಗೋವಿಂದಾ, ಕರಿಶ್ಮಾ ಕಪೂರ್ ನಟನೆಯ 'ಕೂಲಿ ನಂ1' ಸಿನಿಮಾ ಬಿಡುಗಡೆ ಆಗಿ ಭಾರಿ ಹಿಟ್ ಆಗಿತ್ತು. ಆ ಸಿನಿಮಾವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದರು. ಈಗ ಅದೇ ಸಿನಿಮಾವನ್ನು ಅದೇ ಡೇವಿಡ್ ಧವನ್, ತಮ್ಮ ಪುತ್ರ ವರುಣ್ ಧವನ್ ಅನ್ನು ನಾಯಕನನ್ನಾಗಿಸಿ ಮತ್ತೆ ನಿರ್ಮಿಸಿದ್ದಾರೆ. ಆದರೆ ಈ ಬಾರಿ ಹೀನಾಯವಾಗಿ ಸೋಲು ಕಂಡಿದೆ ಸಿನಿಮಾ.
ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲಿ ಸಿನಿಮಾ ಬಗ್ಗೆ ವ್ಯಂಗ್ಯದ ಪೋಸ್ಟ್‌ಗಳು, ಮೂದಲಿಕೆ ಪೋಸ್ಟ್‌ಗಳು ತುಂಬಿ ಹೋಗಿವೆ. ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಬೆರಳೆಣಿಕೆಯಷ್ಟೆ ಎನ್ನಬಹುದೇನೋ.

ಅದರಲ್ಲಿಯೂ ಸಿನಿಮಾದ ದೃಶ್ಯವೊಂದರಲ್ಲಿ ವರುಣ್ ಧವನ್, ರೈಲು ಹಳಿಯ ಮೇಲೆ ಕುಳಿತ ಮಗುವೊಂದನ್ನು ಕಾಪಾಡಲು ವೇಗವಾಗಿ ಚಲಿಸುತ್ತಿರುವ ರೈಲಿನ ಮೇಲೆ ಓಡುತ್ತಿರುವ ದೃಶ್ಯವನ್ನು ವಿಪರೀತವಾಗಿ ಟ್ರೋಲ್ ಮಾಡಲಾಗುತ್ತಿದೆ.
Recommended Video
ಸಿನಿಮಾದ ಕತೆಯಿಂದ ಹಿಡಿದು, ಮುಖ್ಯ ನಟರನ್ನೂ ಸೇರಿಸಿ ನಟನೆ, ಕತೆಯಲ್ಲಿನ ಅಪಸವ್ಯಗಳು, ಗೊಂದಲಗಳು, ಪ್ರಾಕ್ಟಿಕಲ್ ಅಲ್ಲದ ಲಾಜಿಕ್‌ಗಳು ಎಲ್ಲವನ್ನೂ ವ್ಯಂಗ್ಯ ಮಾಡಲಾಗುತ್ತಿದೆ.


Click it and Unblock the Notifications











