ಚಡ್ಡಿ- ಬನಿಯಾನ್ನಲ್ಲೇ ದೇವಸ್ಥಾನಕ್ಕೆ ಬಂದ ವರುಣ್ ಧವನ್ ; ಭುಗಿಲೆದ್ದ ಆಕ್ರೋಶ
ಹಿಂದೂ ಸಂಸ್ಕೃತಿ ಅಂದರೆ ಬರೀ ಪೂಜೆ-ಪುನಸ್ಕಾರಗಳಲ್ಲ, ಅದರ ಹಿಂದೆ ಅದ್ಭುತವಾದ ಜೀವನ ಶೈಲಿ ಮತ್ತು ವಿಜ್ಞಾನ ಅಡಗಿದೆ. ಇಲ್ಲಿನ ಪ್ರತಿಯೊಂದು ಆಚರಣೆ, ಹಬ್ಬ-ಹರಿದಿನ ಮತ್ತು ವಿಧಿ-ವಿಧಾನಗಳ ಹಿಂದೆ ಒಂದು ಬಲವಾದ ನಂಬಿಕೆ ಮತ್ತು ಹಿನ್ನೆಲೆ ಇದೆ.
ಇನ್ನು ದೇವಸ್ಥಾನ, ಮಠ-ಮಾನ್ಯಗಳಿಗೆ ಹೋದಾಗ, ದೇವರ ದರ್ಶನ ಪಡೆಯುವಾಗ ಒಂದು ಶಿಸ್ತು ಇರಬೇಕೆನ್ನುವುದು ನಮ್ಮ ಹಿರಿಯರ ಕಾಲದಿಂದ ಬಂದ ನಂಬಿಕೆ. ಈ ನಂಬಿಕೆಯಂತೆಯೇ ದೇವಸ್ಥಾನಗಳಲ್ಲಿ ಗೌರವಯುಕ್ತವಾಗಿ, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು. ಆಕರ್ಷಕ ಉಡುಪುಗಳನ್ನು ಧರಿಸಬಾರದು ಎಂದು ಹೇಳಲಾಗುತ್ತೆ.

ನಮ್ಮ ಉಡುಗೆಯಿಂದ ಸಕಾರಾತ್ಮಕತೆ, ಗೌರವ ಮತ್ತು ಅವರ ಸಾಂಸ್ಕೃತಿಕ ಮೂಲಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತೆ ಎಂದು ಹೇಳಲಾಗುತ್ತೆ. ಸೀರೆ, ಧೋತಿ, ಸಕಾರಾತ್ಮಕ ಮೌಲ್ಯಗಳು ಮತ್ತು ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿರುವ ಉಡುಪುಗಳಾಗಿರುವುದರಿಂದ ಮಾನಸಿಕ ಸ್ಥಿತಿಗತಿ ಕೂಡ ಚೆನ್ನಾಗಿರುತ್ತೆ ಎನ್ನಲಾಗುತ್ತೆ.
ಆದರೂ ಕೂಡ ಕೆಲವರು ಈ ಡ್ರೆಸ್ ಕೋಡ್ ನಿಯಮ ಪಾಲಿಸುವುದಿಲ್ಲ. ಹೆಂಗೆದಂರೇ ಹಂಗೆ ದೇವಸ್ಥಾನಕ್ಕೆ ಬರುತ್ತಾರೆ. ಈ ಮೂಲಕ ಭಕ್ತಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. 5 G ಯುಗದಲ್ಲಿ ಟ್ರೋಲ್ ಆಗುತ್ತಾರೆ. ಉದಾಹರಣೆಗೆ ವರುಣ್ ಧವನ್.
ಹೌದು, ಪಾತ್ರ ಯಾವುದೇ ಇರಲಿ ಅದಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಸ್ಟಾರ್‌ಗಳಲ್ಲಿ ವರುಣ್ ಧವನ್ ಕೂಡ ಒಬ್ಬರು. ಕಾಮಿಡಿ ಮತ್ತು ಟ್ರ್ಯಾಜಿಡಿ ಎರಡು ತರಹದ ಕಥೆಗಳಲ್ಲಿ ಈಗಾಗಲೇ ಮಿಂಚಿ ಬಾಲಿವುಡ್‌ನಲ್ಲಿ ಮನೆ ಮಾತಾಗಿರುವ ವರುಣ್ ಧವನ್ ಸದ್ಯ ತಮ್ಮ ಚಿತ್ರ ''ಹೇ ಜವಾನಿ ತೋ ಇಷ್ಕ್ ಹೋನಾ ಹೈ'' ಬಿಡುಗಡೆಯನ್ನು ಎದುರು ನೋಡುತ್ತಿದ್ಧಾರೆ.
ಇನ್ನೇನು ಕೆಲವೇ ಗಂಟೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ವರುಣ್ ಧವನ್, ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಆದರೆ ಇದೇ ಸಮಯದಲ್ಲಿ ಇವರ ಉಡುಪು ಹಲವರ ಕಣ್ಣನ್ನೂ ಕೆಂಪಾಗಿಸಿದೆ.

ಯಾಕೆಂದರೆ ಬನಿಯಾನ್ ಮತ್ತು ಹಾಫ್ ಶಾರ್ಟ್ಸ್ ಧರಿಸಿ ದೇವಸ್ಥಾನಕ್ಕೆ ಬಂದು ವರುಣ್ ಧವನ್ ದೇವರ ದರ್ಶನ ಪಡೆದಿದ್ಧಾರೆ. ಅವರನ್ನು ನೋಡುತ್ತಿದ್ದರೆ ಸೀದಾ ಜಿಮ್ ಮುಗಿಸಿಕೊಂಡು ನೇರವಾಗಿ ದೇವಸ್ಥಾನಕ್ಕೆ ವರುಣ್ ಬಂದಂತೆ ಇದೆ.
ಸದ್ಯ ವರುಣ್ ಧವನ್ ಅವರ ಈ ಅವತಾರ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಇಂಟರ್ನೆಟ್‌ನಲ್ಲಿ ಆಕ್ರೋಶದ ಜ್ವಾಲೆ ಎದ್ದಿದೆ. ಅನೇಕರಿಗೆ ದೇವಸ್ಥಾನದ ಪಾವಿತ್ರ್ಯತೆಗೆ ಮಾಡಿದ ಅಪಮಾನದಂತೆ ಭಾಸವಾಗಿದೆ. ವರುಣ್ಕಿ ಧವನ್ ವಿರುದ್ದ ಹಲವರು ಕಿಡಿ ಕಾರುತ್ತಿದ್ದು ವರುಣ್ ಧವನ್ ಅವರಿಗೆ ದೇವಸ್ಥಾನಕ್ಕೂ ಮತ್ತು ಜಿಮ್‌ಗೂ ಇರುವ ವ್ಯತ್ಯಾಸ ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ವರ್ಕೌಟ್ ಮಾಡುವ ಬಟ್ಟೆ ಧರಿಸಿ ಪವಿತ್ರ ಸ್ಥಳಕ್ಕೆ ಬರುವುದು ಎಷ್ಟು ಸರಿ? ಎಂದು ಕೇಳುತ್ತಿದ್ಧಾರೆ.
ಮತ್ತೂ ಕೆಲವರು ಯಾವುದಾದರೂ ಮುಸ್ಲಿಂ ನಟರು ಮಸೀದಿಗೆ ಹೋಗುವಾಗ ಇಂತಹ ಉಡುಪು ಧರಿಸಿ ಹೋಗುವುದನ್ನು ಯಾರಾದರೂ ನೋಡಿದ್ದೀರಾ? ಎಂಬ ಪ್ರಶ್ನೆಯನ್ನು ಕೂಡ ಕೇಳುತ್ತಿದ್ದು ಕೇವಲ ಹಿಂದೂ ದೇವಸ್ಥಾನಗಳಿಗೆ ಬರುವಾಗಲೇ ಇಂತಹ ಬೇಜವಾಬ್ದಾರಿತನ ಯಾಕೆ ಎಂದು ಕೂಡ ಪ್ರಶ್ನೆ ಮಾಡುತ್ತಿದ್ಧಾರೆ. ಧಾರ್ಮಿಕ ಸ್ಥಳಕ್ಕೆ ಬರುವಾಗ ಕನಿಷ್ಠ ಗೌರವ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಇದೇ ಸಮಯದಲ್ಲಿ ಕೆಲವರು ವರುಣ್ ಧವನ್ ಪರ ವಕಾಲತ್ತು ವಹಿಸಿದ್ದಾರೆ. ಭಕ್ತಿ ಎಂಬುದು ಮನಸ್ಸಿನ ಒಳಗಿನ ವಿಷಯವೇ ಹೊರತು ಹೊರಗಿನ ಉಡುಪಿನ ಪ್ರದರ್ಶನವಲ್ಲ ಎಂಬ ವಾದ ಮಾಡುತ್ತಿದ್ಧಾರೆ. ಬಹುಶಃ ವರುಣ್ ತನ್ನ ದೈನಂದಿನ ವರ್ಕೌಟ್ ಮುಗಿಸಿ ಹಿಂದಿರುಗುವಾಗ, ದೇವಸ್ಥಾನದ ಹತ್ತಿರ ಬಂದಾಗ ಅನಿರೀಕ್ಷಿತವಾಗಿ ದರ್ಶನ ಪಡೆಯಲು ನಿರ್ಧರಿಸಿರಬಹುದು ಎಂದು ಸಮರ್ಥಿಸಿಕೊಳ್ಳುತ್ತಿದ್ಧಾರೆ.
Actor Varun Dhawan visited a temple for darshan wearing a gym vest and half shorts.
— Saffron Chargers (@SaffronChargers) June 2, 2026
Did Varun Dhawan think the temple was a gym that he went there dressed in workout clothes?
Have you ever seen a Muslim actor visit a mosque dressed like this? pic.twitter.com/I38GqyiBAJ


Click it and Unblock the Notifications