ಪೊಲೀಸ್ ಗೆ ಶೇಕ್ ಹ್ಯಾಂಡ್ ಮಾಡಿ ಟ್ರೋಲಿಗರಿಗೆ ಆಹಾರವಾದ ಬಾಲಿವುಡ್ ನಟ
ಕೊರೊನಾ ವೈರಸ್ ಹಾವಳಿ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಅದರಲ್ಲೂ ಶೇಕ್ ಹ್ಯಾಂಡ್ ಮಾಡುವುದನ್ನು ನಿಲ್ಲಿಸಿ, ನಮಸ್ತೆ ಮಾಡಿ ಸ್ವಾಗತಿಬೇಕು, ಹಗ್ ಮಾಡಬಾರದು ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಅದೆಷ್ಟೊ ಜನ ಈ ಎಲ್ಲಾ ನಿಯಮಗಳನ್ನು ಪಾಲಿಸುವುದೇ ಇಲ್ಲ.
ಕೊರೊನಾ ಲಾಕ್ ಡೌನ್ ನಲ್ಲಿ ಬಾಲಿವುಡ್ ನಟ ವರುಣ್ ಧವನ್ ಮುಂಬೈ ಪೊಲೀಸ್ ಗೆ ಶೇಕ್ ಹ್ಯಾಂಡ್ ನೀಡಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಹೌದು ಇತ್ತೀಚಿಗೆ ನಟ ವರುಣ್ ಧವನ್ ಒಂದು ಫೋಟೋ ಹಂಚಿಕೊಂಡಿದ್ದಾರೆ. 24 ಗಂಟೆ ಕೆಲಸ ಮಾಡುತ್ತಿರುವ ಪೊಲೀಸರಿಗೆ ಮತ್ತು ವೈದ್ಯರಿಗೆ ಧನ್ಯವಾದ ತಿಳಿಸಿ ಮುಂಬೈ ಪೊಲೀಸ್ ಗೆ ಶೇಕ್ ಹ್ಯಾಂಡ್ ಮಾಡುವ ಫೋಟೋ ಶೇರ್ ಮಾಡಿದ್ದರು.
ಈ ಫೋಟೋ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿಕೊಂಡಿದ್ದಾರೆ. ವರುಣ್ ಹೀಗೆ ಶೇರ್ ಮಾಡುತ್ತಿದ್ದಾರೆ, ಇಲ್ಲಿ ಸಾಮಾಜಿಕ ಅಂತರವೆಲ್ಲಿದೆ? ಮಾಸ್ಕ್ ಮತ್ತು ಗ್ಲೌಸ್ ಎಲ್ಲಿ? ಎಂದು ಪ್ರಶ್ನಿಸುತ್ತಿದ್ದಾರೆ. ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ವರುಣ್ ಮತ್ತೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

"ಈಡಿಯಟ್ ಇದು ಹಳೆಯ ಫೋಟೋ. ಎರಡು ತಿಂಗಳು ಹಿಂದೆ ಕ್ಲಿಕ್ ಮಾಡಿರುವ ಫೋಟೋ" ಎಂದು ಟ್ವೀಟ್ ಮಾಡಿದ್ದಾರೆ.
ಕೊರೊನಾ ವಿರುದ್ಧ ಹೋರಾಟಕ್ಕೆ ಬಾಲಿವುಡ್ ಮಂದಿ ಸಾಕಷ್ಟು ದೇಣಿಗೆ ನೀಡಿದ್ದಾರೆ. ನಟ ವರುಣ್ ಧವನ್ ಸಹ ಪಿಎಂ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಜೊತೆಗೆ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೂ ದೇಣಿಗೆ ನೀಡಿದ್ದಾರೆ. ಪಿ ಎಂ ಪರಿಹಾರ ನಿಧಿಗೆ 30 ಲಕ್ಷ ಮತ್ತು ಸಿಎಂ ಪರಿಹಾರ ನಿಧಿಗೆ 25 ಲಕ್ಷ ನೀಡಿದ್ದಾರೆ.


Click it and Unblock the Notifications











