ಶ್ರೀದೇವಿಯ ಮಗಳಿಗೆ ಕೈ ಕೊಟ್ಟ ಸುರಸುಂದರ ; ವೈರಲ್ ಆಯ್ತು ನಟನ ಅದೊಂದು ಮಾತು

ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಲೇ ಇರುತ್ತೇವೆ. ಇನ್ನೂ.. ಬಣ್ಣದ ಬದುಕಿನಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು.

ಇವತ್ತು 'ಐ ಲವ್ ಯೂ' ಎಂದು ಹೇಳಿದವರೇ ಮರು ದಿನ 'ಐ ಹೇಟ್ ಯು' ಎಂದು ಹೇಳಿ ಇಲ್ಲಿ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಉದಾಹರಣೆಗೆ ಅತಿಲೋಕ ಸುಂದರಿ ಶ್ರೀದೇವಿಯ ಎರಡನೇ ಮಗಳು ಖುಷಿ ಕಪೂರ್ ಮತ್ತು ವೇದಾಂಗ್ ರೈನಾ ಅವರ ಲವ್ & ಬ್ರೇಕಪ್ ಸ್ಟೋರಿಯನ್ನೇ ತೆಗೆದುಕೊಳ್ಳಿ.

vedang-raina-sparks-intense-khushi-kapoor-breakup-rumors-with-shocking-confession

ಹೌದು, ಅಸಲಿಗೆ ಎಲ್ಲ ಸ್ಟಾರ್‌ ಮಕ್ಕಳಂತೆ ಖುಷಿ ಕಪೂರ್ ಕೂಡ ತಮ್ಮ ತಾಯಿ ಶ್ರೀದೇವಿ ಮತ್ತು ತಂದೆ ಬೋನಿ ಕಪೂರ್ ಅವರ ಜಾಡು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಈಗಾಗಲೇ ''ದಿ ಆರ್ಚಿಸ್'' ಎಂಬ ಚಿತ್ರವನ್ನು ಕೂಡ ಮಾಡಿದ್ದಾರೆ.

ಎರಡು ವರ್ಷದ ಹಿಂದೆ ಬಂದಿದ್ದ ಇದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಖುಷಿ ಕಪೂರ್‌ ಅವರಿಗೆ ಪರಿಚಯವಾದವರು ವೇದಾಂಗ್ ರೈನಾ. ಉದ್ಯಮಿ ರಾಜೇಶ್ ರೈನಾ ಅವರ ಮಗನಾಗಿರುವ ಈ ವೇದಾಂಗ್ ರೈನಾ ಮತ್ತು ಖುಷಿ ಕಪೂರ್ ಅವರ ನಡುವೆ ''ದಿ ಆರ್ಚಿಸ್'' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರೇಮಾಂಕುರವಾಗಿತ್ತು.

ನಿಜಾ, ಇಬ್ಬರು ಕೂಡ ತಮ್ಮ ಈ ಸಂಬಂಧವನ್ನು ಅಧಿಕೃತವಾಗಿ ಎಲ್ಲಿಯೂ ಒಪ್ಪಿಕೊಂಡಿಲ್ಲ. ಬದಲಿಗೆ ಚಿತ್ರರಂಗದಲ್ಲಿ ಎಲ್ಲರೂ ಹೇಳುವಂತೆ ನಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳುತ್ತಾ ಬಂದಿದ್ದರು.

ಆದರೂ ಕೂಡ ಇವರ ಮೇಲೆ ಹಲವರಿಗೆ ಅನುಮಾನ ಇತ್ತು. ಒಂದು ವರ್ಗ ಇವರ ಮೇಲೆ ನಿಗಾ ವಹಿಸಿತ್ತು. ಇದಕ್ಕೆ ಪೂರಕವಾಗಿ ಇಬ್ಬರ ನಡುವಳಿಕೆ ಕೂಡ ಹಾಗೇ ಇತ್ತು. ಹಲವಾರು ಬಾರಿ ಇಬ್ಬರು ಕ್ಯಾಮರಾ ಕಣ್ಣಿನಲ್ಲಿ ಜೊತೆಯಾಗಿ ಸೆರೆಯಾಗಿದ್ದರು.

vedang-raina-sparks-intense-khushi-kapoor-breakup-rumors-with-shocking-confession

ಆದರೆ ಇವರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಈ ವರ್ಷದ ಆರಂಭದಲ್ಲಿ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ''ಪತ್ರಕರ್ತ ವಿಕ್ಕಿ ಲಾಲ್ವಾನಿ'' ಇಬ್ಬರ ಸಂಬಂಧ ಮುರಿದು ಬಿದ್ದಿದೆ, ಇಬ್ಬರು ದೂರ ಆಗಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಕಾರಣವೇನು ಎನ್ನುವುದು ಗೊತ್ತಿಲ್ಲ ಆದರೆ ಅವರ ಆಪ್ತರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ ಎಂದು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖ ಮಾಡಿದ್ದರು.

ಇಲ್ಲಿಂದ ಇವರ ಸಂಬಂಧದ ಕುರಿತು ಚರ್ಚೆ ತೀವ್ರವಾಗಿತ್ತು. ಬ್ರೇಕಪ್‌ಗೆ ಕಾರಣವನ್ನು ಕೂಡ ಒಂದು ವರ್ಗ ಹುಡುಕುತ್ತಿತ್ತು. ಸದ್ಯ ವೇದಾಂಗ್ ರೈನಾ ತಮ್ಮ ರಿಲೇಶನ್‌ಶಿಪ್ ಸ್ಟೇಟಸ್ ಕುರಿತು ಮಾತನಾಡಿದ್ದಾರೆ. ನಾನು ಸಿಂಗಲ್ ಎಂದಿದ್ದಾರೆ. ಈ ಮೂಲಕ ಬ್ರೇಕಪ್ ಸುದ್ದಿಗೆ ಮತ್ತೆ ಜೀವ ನೀಡಿದ್ದಾರೆ.

ತಮ್ಮ ಮುಂಬರುವ ಚಿತ್ರ ''ಮೇ ವಾಪಸ್ ಆವುಂಗಾ'' ಚಿತ್ರದ ಪ್ರಚಾರದ ಸಮಯದಲ್ಲಿ ಈ ಕುರಿತು ಮಾತನಾಡಿರುವ ವೇದಾಂಗ್ ರೈನಾ, ನಾನು ಸದ್ಯ ಯಾವುದೇ ಸಂಬಂಧದಲ್ಲಿ ಇಲ್ಲ, ಹೀಗಾಗಿ ನನಗೆ ಗೊತ್ತಿಲ್ಲ ಎಂದು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.

ಇವರ ಈ ''ಐ ಆಮ್ ಸಿಂಗಲ್'' ಹೇಳಿಕೆ ಸದ್ಯ ಅಂತರ್ಜಾಲದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ''ಫಿಲ್ಮಿಗ್ಯಾನ್'' ಹಂಚಿಕೊಂಡ ಈ ವಿಡಿಯೋಗೆ ಬಂದ ಕಾಮೆಂಟ್‌ಗಳನ್ನು ನೀವು ಗಮನಿಸಿದರೆ ಖುಷಿ ಮತ್ತು ವೇದಾಂಗ್ ಸಂಬಂಧದ ಕುರಿತು ಜನ ಎಷ್ಟರ ಮಟ್ಟಿಗೆ ತಲೆ ಕೆಡಿಸಿಕೊಂಡಿದ್ದರು, ಕೆಡಿಸಿಕೊಂಡಿದ್ದಾರೆ ಎನ್ನುವುದು ನಿಮಗೆ ಗೊತ್ತಾಗುತ್ತೆ.

English summary
Is it over between Vedang Raina and Khushi Kapoor? Fans notice the distance as Vedang drops a major 'single' bomb in his latest interview.
Read more about: break up jhanvi kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X