For Quick Alerts
  ALLOW NOTIFICATIONS  
  For Daily Alerts

  ಇಮ್ರಾನ್ ಹಶ್ಮಿಗೆ 'ಗೇಟ್ ಪಾಸ್' ನೀಡಿದ ವೀಣಾ ಮಲಿಕ್

  By ಜೀವನ್ ಸೂರ್ಯ
  |

  ನಟಿ ವೀಣಾ ಮಲಿಕ್ ಬಾಲಿವುಡ್ ಚಿತ್ರರಂಗದ ಹೊಸ ಸೀರಿಯಲ್ ಕಿಲ್ಲರ್ ಆಗಿ ಹೊರಹೊಮ್ಮಲಿದ್ದಾರೆ. ಸದ್ಯದಲ್ಲೇ ಅವರು ಅದರಲ್ಲಿ ಗಿನ್ನಿಸ್ ದಾಖಲೆ ಮಾಡಲಿದ್ದಾರೆ. ಈ ಮೊದಲು ಬಾಲಿವುಡ್ ಸೀರಿಯಲ್ ಕಿಸ್ಸರ್ ಪಟ್ಟದಲ್ಲಿ ರಾರಾಜಿಸುತ್ತಿದ್ದ ಇಮ್ರಾನ್ ಹಶ್ಮಿ, ಸದ್ಯದಲ್ಲೇ ತಮ್ಮ ಆ ಪಟ್ಟವನ್ನು ವೀಣಾ ಮಲಿಕ್ ಅವರಿಗೆ ಬಿಟ್ಟುಕೊಡಲಿದ್ದಾರೆ. ನಟಿ ವೀಣಾ ಮಲಿಕ್ ಮುಂಬರುವ ತಮ್ಮ "ದ ಸಿಟಿ ದಟ್ ನೆವರ್ ಸ್ಲೀಪ್ಸ್' ಚಿತ್ರದಲ್ಲಿ ಈ ಸಾಧನೆ (?) ಮಾಡಲಿದ್ದಾರಂತೆ.

  ವೀಣಾ ಮಲಿಕ್ ನಟನೆಯ "ದ ಸಿಟಿ ದಟ್ ನೆವರ್ ಸ್ಲೀಪ್ಸ್' ಚಿತ್ರವನ್ನು ಸತೀಶ್ ರೆಡ್ಡಿ ನಿರ್ಮಾಣ ಮಾಡಿದ್ದು ಹರೂನ್ ರಷಿದ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವೀಣಾ ಮಲಿಕ್ ಕಿಸ್ ಮೇಲೆ ಕಿಸ್ ನೀಡಿ ಹೊಸ ಚರಿತ್ರೆ ಬರೆಯುವ ಹಾದಿಯಲ್ಲಿದ್ದಾರೆ. ಇಷ್ಟು ದಿನ ಸೀರಿಯಲ್ ಕಿಸ್ಸರ್ ಎಂದೇ ಖ್ಯಾತರಾಗಿದ್ದ ಇಮ್ರಾನ್ ಹಶ್ಮಿ ಇನ್ಮುಂದೆ ಸುದ್ದಿಗಾಗಿ ಹೊಸ ಸಾಧನೆ ಮಾಡಬೇಕಿದೆ.

  ಸದ್ಯದಲ್ಲೇ ಸೀರಿಯಲ್ ಕಿಸ್ಸರ್ ಆಗಿ ಗಿನ್ನಿಸ್ ದಾಖಲೆ ಮಾಡಲಿರುವ ವೀಣಾ ಮಲಿಕ್ ಅವರ ಕೆಲವು ಫೋಟೋಗಳು ಇಲ್ಲಿವೆ ನೋಡಿ...

  ಕಿಸ್ ಕೊಡುಡವುದು ತುಂಬಾ ಮುಖ್ಯ; ವೀಣಾ ಮಲಿಕ್

  ಕಿಸ್ ಕೊಡುಡವುದು ತುಂಬಾ ಮುಖ್ಯ; ವೀಣಾ ಮಲಿಕ್

  ತಾವು ಸದ್ಯದಲ್ಲೇ ಮಾಡಲಿರುವ ಹೊಸ ಸಾಧನೆ ಬಗ್ಗೆ ಮಾತನಾಡಿರುವ ವೀಣಾ ಮಲಿಕ್ "ನನ್ನ ಪ್ರಕಾರ ಕಿಸ್ ಕೊಡುಡವುದು ತುಂಬಾ ಮುಖ್ಯವಾದದು ಹಾಗೂ ಇದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅತ್ಯತ್ತಮ ಸಾಧನ. ಮುಂದಿನ ಪುಟದಲ್ಲಿ....

  ಕಿಸ್ ಮೂಲಕ ಜಗತ್ತನ್ನು ನಾವು ಸಂತೋಷದಿಂದ ತುಂಬಬಹುದು

  ಕಿಸ್ ಮೂಲಕ ಜಗತ್ತನ್ನು ನಾವು ಸಂತೋಷದಿಂದ ತುಂಬಬಹುದು

  ಎಲ್ಲಾ ಭಾವನೆಗಳ ಸಂಗಮದಲ್ಲಿ ಕಿಸ್ ಕೊಡುವ ಮೂಲಕ ಇಡೀ ಜಗತ್ತನ್ನು ನಾವು ಪ್ರೀತಿ ಹಾಗೂ ಸಂತೋಷದ ಮೂಲಕ ತುಂಬಬಹುದು. ಇಡೀ ಜಗತ್ತು ನೆಮ್ಮದಿಯಿಂದಿರಲು ಮುತ್ತಿಗಿಂತ ಮದ್ದು ಬೇರೊಂದಿಲ್ಲ. ಮುಂದಿನ ಪಟು ನೋಡಿ...

  ನಾನು ಗಿನ್ನಿಸ್ ದಾಖಲೆ ಬರೆಯಲಿರುವುದು ನನಗೆ ಖುಷಿಯ ಸಂಗತಿ

  ನಾನು ಗಿನ್ನಿಸ್ ದಾಖಲೆ ಬರೆಯಲಿರುವುದು ನನಗೆ ಖುಷಿಯ ಸಂಗತಿ

  ಈ ವಿಷಯದಲ್ಲಿ ನಾನು ಗಿನ್ನಿಸ್ ದಾಖಲೆ ಬರೆಯಲು ಹೊರಟಿರುವುದು ನನಗೆ ತುಂಬಾ ಖುಷಿಯ ಸಂಗತಿ. ಸದ್ಯಕ್ಕೆ ಸೀರಿಯಲ್ ಕಿಸ್ಸರ್ ಪಟ್ಟದಲ್ಲಿರುವ ಇಮ್ರಾನ್ ಹಶ್ಮಿ ಸೇರಿ ಬಾಲಿವುಡ್ ನಲ್ಲಿರುವ ಎಲ್ಲಾ ನಟ-ನಟಿಯರಿಗೆ "ಹೊಸ ಸೀರಿಯಲ್ ಕಿಸ್ಸರ್ ಆಗಿ ನಾನು ಬರುತ್ತಿದ್ದೇನೆ" ಎಂಬ ಎಚ್ಚರಿಕೆ ಸಂದೇಶ ರವಾನೆ ಮಾಡುತ್ತಿದ್ದೇನೆ" ಎಂದಿದ್ದಾರೆ ನಟಿ ವೀಣಾ ಮಲಿಕ್.

  ಪ್ರಿಯಾಂಕಾ, ಕರೀನಾನ್ನು ತಳ್ಳಲಿರುವ ವೀಣಾ ಮಲಿಕ್

  ಪ್ರಿಯಾಂಕಾ, ಕರೀನಾನ್ನು ತಳ್ಳಲಿರುವ ವೀಣಾ ಮಲಿಕ್

  ಬಾಲಿವುಡ್ ನಲ್ಲಿ ಸದ್ಯಕ್ಕೆ ಕಿಸ್ ಕೊಡುವುದರಲ್ಲಿ ಮೊದಲ ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾರನ್ನು ಎರಡನೇ ಸ್ಥಾನಕ್ಕೆ ಹಾಗೂ ಎರಡರಲ್ಲಿರುವ ಕರೀನಾರನ್ನು ಮೂರನೆ ಸ್ಥಾನಕ್ಕೂ ಅತಿ ಶೀಘ್ರದಲ್ಲಿ ತಳ್ಳಲಿದ್ದಾರೆ. ನಟನೆಯಲ್ಲಿ ಅಲ್ಲದಿದ್ದರೂ ಆ ಮೂಲಕ ಅವರನ್ನು ಮೀರಿಸಲಿದ್ದಾರೆ ವೀಣಾ ಮಲಿಕ್.

  ಹೊಸ ಸೀರಿಯಲ್ ಕಿಸ್ಸರ್ ಆಗಮನಕ್ಕೆ ಬಾಲಿವುಡ್ ಸಜ್ಜು

  ಹೊಸ ಸೀರಿಯಲ್ ಕಿಸ್ಸರ್ ಆಗಮನಕ್ಕೆ ಬಾಲಿವುಡ್ ಸಜ್ಜು

  ಒಟ್ಟಿನಲ್ಲಿ ಹೊಸ ಸೀರಿಯಲ್ ಕಿಸ್ಸರ್ ಆಗಮನಕ್ಕೆ ಬಾಲಿವುಡ್ ಸಜ್ಜಾಗಿದೆ. ತಮ್ಮ ಹೊಸ ವರಸೆಯನ್ನು ತೋರಿಸಲು ನಟಿ ವೀಣಾ ಮಿಲಕ್ ಕಾತರಗೊಂಡಿದ್ದಾರೆ.

  English summary
  Actress Veena Malik is a new Bollywood lady “Serial Kisser”. She is going to beat the Bollywood most wanted Serial Kisser Emraan Hashmi. Veena is ready to set Guinness book of world record through maximum kiss in her upcoming movie “The City That Never Sleeps”. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X