For Quick Alerts
  ALLOW NOTIFICATIONS  
  For Daily Alerts

  ಸಖತ್ ಹಾಟ್ ಬೆಡಗಿ ವೀಣಾ ಮಲಿಕ್ ಗೆ ಶಾದಿಭಾಗ್ಯ

  By Rajendra
  |

  'ಸಿಲ್ಕ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ಸಖತ್ ಹಾಟ್ ಬೆಡಗಿ ವೀಣಾ ಮಲಿಕ್ ಶಾದಿಭಾಗ್ಯ ಕೂಡಿಬಂದಿದೆ. ಈ ಪಾಕಿಸ್ತಾನಿ ಬ್ಯೂಟಿ ತನ್ನ ಮಾದಕ ಚೆಲುವಿನ ಮೂಲಕ ಬಾಲಿವುಡ್ ಜಗತ್ತನ್ನು ಮೋಡಿಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

  ಉಮರ್ ಫರೂಖ್ ಎಂಬ ಉದ್ಯಮಿ ಕೈಹಿಡಿಯುತ್ತಿದ್ದಾರೆ ವೀಣಾ ಮಲಿಕ್. ಇಬ್ಬರೂ ಪರಿಚಿತ ವ್ಯಕ್ತಿಯ ಮೂಲಕ ದುಬೈನಲ್ಲಿ ಉಮರ್ ಹಾಗೂ ವೀಣಾ ಮಲಿಕ್ ಭೇಟಿಯಾಗಿದ್ದಾರೆ. ಮೊದಲ ಭೇಟಿಯಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. [ಸಿಲ್ಕ್ ಚಿತ್ರ ವಿಮರ್ಶೆ]

  2013ರ ಮಾರ್ಚ್ ತಿಂಗಳಲ್ಲಿ ಭೇಟಿಯಾದ ಈ ಜೋಡಿಗೆ ಪ್ರಥಮ ಭೇಟಿಯಲ್ಲೇ ಒಬ್ಬರಿಗೊಬ್ಬರು ಫಿದಾ ಆಗಿದ್ದಾರೆ. ಕಾಲಸರಿಯುತ್ತಾ ಇಬ್ಬರೂ ಇನ್ನಷ್ಟು ಮತ್ತಷ್ಟು ಹತ್ತಿರವಾಗಿದ್ದಾರೆ. ಸಾಧ್ಯವಾದಾಗಲೆಲ್ಲಾ ದುಬೈಗೆ ಹೋಗುತ್ತಿದ್ದ ವೀಣಾ ತನ್ನ ಪ್ರಿಯಕರನನ್ನು ಭೇಟಿಯಾಗುತ್ತಿದ್ದರು.

  ಉಮರ್ ಗೆ ಗ್ರೀಣ್ ಸಿಗ್ನಲ್ ಕೊಟ್ಟ ವೀಣಾ

  ಉಮರ್ ಗೆ ಗ್ರೀಣ್ ಸಿಗ್ನಲ್ ಕೊಟ್ಟ ವೀಣಾ

  ಈ ಕಣ್ಣಾಮುಚ್ಚಾಲೆಯಲ್ಲೇ ಒಂದು ದಿನ ವೀಣಾ ಮಲಿಕ್ ರನ್ನು ಉಮರ್ ಕೇಳಿಯೇ ಬಿಟ್ಟನಂತೆ ಮುಜ್ ಸೆ ಶಾದಿ ಕರೋಗಿ ಎಂದು. ಉಮರ್ ಆ ರೀತಿ ಕೇಳುತ್ತಿದ್ದಂತೆ ವೀಣಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗ ಇಬ್ಬರ ನಿಖಾ ಪಕ್ಕಾ ಆಗಿದೆ.

  2015ರಲ್ಲಿ ಹಾರ ಬದಲಾಯಿಸಿಕೊಳ್ಳಲಿದ್ದಾರೆ

  2015ರಲ್ಲಿ ಹಾರ ಬದಲಾಯಿಸಿಕೊಳ್ಳಲಿದ್ದಾರೆ

  2015ರಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಳ್ಳಲಿದ್ದಾರೆ. ಇವರ ಮದುವೆಗೆ ಸಂಬಂಧಿಸಿ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ. ಸದ್ಯಕ್ಕೆ ವೀಣಾ ಮಲಿಕ್ ಕೆಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಮದುವೆ ವೇಳೆಗೆ ತಮ್ಮ ಕಮಿಟ್ ಮೆಂಟ್ಸ್ ಮುಗಿಸಿಕೊಳ್ಳಲಿದ್ದಾರೆ. ಅ ಬಳಿಕವಷ್ಟೇ ಶಾದಿಭಾಗ್ಯ.

  ಮದುವೆ ಬಳಿಕ ಸ್ಮಾಲ್ ಬ್ರೇಕ್

  ಮದುವೆ ಬಳಿಕ ಸ್ಮಾಲ್ ಬ್ರೇಕ್

  ಮದುವೆ ಬಳಿಕ ಸ್ವಲ್ಪ ದಿನಗಳ ಕಾಲ ಬಣ್ಣಜಗತ್ತಿನಿಂದ ದೂರ ಉಳಿಯಲಿದ್ದಾರಂತೆ. ಅಂದರೆ ಗೊತ್ತೇ ಇದೆಯಲ್ಲಾ ಹನಿಮೂನು, ಜಾಮೂನು ಅದು ಇದು ಎಂದು ಇದ್ದೇ ಇರುತ್ತದೆ. ಸ್ಮಾಲ್ ಬ್ರೇಕ್ ಬಳಿಕ ಮತ್ತೆ ಹಿಂತಿರುಗಲಿದ್ದಾರೆ.

  ವೀಣಾ ಮಲಿಕ್ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳು

  ವೀಣಾ ಮಲಿಕ್ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳು

  ಸದ್ಯಕ್ಕೆ ವೀಣಾ ಮಲಿಕ್ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ. ಅವೆಲ್ಲವನ್ನೂ ಕಂಪ್ಲೀಟ್ ಮಾಡಿಕೊಂಡು ಬಳಿಕವಷ್ಟೇ ನಿಖಾ.

  ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು

  ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು

  ಮುಂಬೈ 125 ಕಿ.ಮೀ 3D, ದ ಸಿಟಿ ದಟ್ ನೆವರ್ ಸ್ಲೀಪ್ಸ್, ಮಿಸ್ಟರ್ ಮನಿ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಕನ್ನಡದ 'ಸಿಲ್ಕ್' ಚಿತ್ರದಲ್ಲಿ ವೀಣಾ ಮಲಿಕ್ ಅಭಿನಯಿಸಿದ್ದಾರೆ.

  ತೆಲುಗಿನಲ್ಲೂ ವೀಣಾ ಮಲಿಕ್ ಬಿಜಿ

  ತೆಲುಗಿನಲ್ಲೂ ವೀಣಾ ಮಲಿಕ್ ಬಿಜಿ

  ತೆಲುಗಿನ ರಂಗೀಲಾ, ನಗ್ನ ಸತ್ಯಂ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಕಾಟೇಜ್ ನಂ.9, ದಿಲ್ ನೆ ದಿಲ್ ಕೋ ಪುಕಾರಾ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ.

  English summary
  Veena Malik was spotted a few days ago at the Mumbai Airport, just back after receiving an award. The star was beaming, talking on the phone with someone. The reason for her happiness is that Veena may get married to her businessman boyfriend Umar Farooq soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X