For Quick Alerts
ALLOW NOTIFICATIONS  
For Daily Alerts

  ತಾರೆ ವೀಣಾ ಮಲಿಕ್ ಬೆಡ್ ರೂಮಲ್ಲಿ ಭಗವದ್ಗೀತೆ

  By Rajendra
  |

  ಪಾಕಿಸ್ತಾನದ ಹಾಟ್ ಬೆಡಗಿ ವೀಣಾ ಮಲಿಕ್ ಕೈಯಲ್ಲಿ ಪಂಚಮವೇದ! ಇದೇನು ಗುರು ಇದು. ಗೋಕುಲಾಷ್ಟಮಿಗೂ ಇಮಾಮ್ ಸಾಬೀಗು ಏನು ಸಂಬಂಧ? ಅಂತೀರಾ. ವೀಣಾ ಮಲಿಕ್ ಅವರಿಗೆ ಇದ್ದಕ್ಕಿದ್ದಂತೆ ಭಗವದ್ಗೀತೆ ಮೇಲೆ ಪ್ಯಾರ್ ಗೆ ಆಗ್ಬಿಟ್ಟೈತೆ.

  ಅಂದಹಾಗೆ ಗೀತೆಯ ಸಾರ ತಿಳಿದುಕೊಳ್ಳಲು ಯಾವ ಧರ್ಮವಾದರೇನು ಗುರು ಅಲ್ವರಾ? ಹೋಗ್ಲಿ ಬಿಡಿ ನಮಗ್ಯಾಕೆ ಬೇಕು ಧರ್ಮಗಳ ವಿಚಾರ. ಈಗ ಸೀದಾ ವೀಣಾ ಮಲಿಕ್ ವಿಚಾರಕ್ಕೆ ಬರೋಣ. ಅವರು ಇತ್ತೀಚೆಗೆ ಹೋದ ಕಡೆಯಲ್ಲೆಲ್ಲಾ ಭಗವದ್ಗೀತೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

  ಗ್ಯಾಂಗ್ ರೇಪ್ ಪ್ರಕರಣಕ್ಕೆ ತಲ್ಲಣಿಸಿದ ವೀಣಾ

  ಅಂದಹಾಗೆ ದೆಹಲಿ ಗ್ಯಾಂಗ್ ರೇಪ್ ಪ್ರಕರಣ ವೀಣಾರ ಮನಸ್ಸನ್ನು ಬಹಳ ಘಾಸಿಗೊಳಿಸಿದೆಯಂತೆ. ಬಹುಶಃ ಭಗವದ್ಗೀತೆ ಪಠಣದಿಂದಲಾದರೂ ತಮ್ಮ ಮನಸ್ಸಿಗೆ ಒಂದಷ್ಟು ನೆಮ್ಮದಿ ಸಿಗುತ್ತದೆ ಎಂದು ಭಾವಿಸಿದ್ದಾರೆ. ಸದ್ಯಕ್ಕೆ "The City That Never Sleep" ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಅತ್ಯಾಚಾರ, ಕೊಲೆ, ಸುಲಿಗೆ ಸುತ್ತ ಕಥೆ

  ಸತೀಶ್ ರೆಡ್ಡಿ ಎಂಬುವವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಹರೂನ್ ರಶೀದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಕಥೆಯೂ ಅಷ್ಟೇ. ನಗರವೊಂದರ ಸುತ್ತ ಸುತ್ತುತ್ತದೆ. ಅತ್ಯಾಚಾರ, ಕೊಲೆ, ಸುಲಿಗೆ ಚಿತ್ರದ ಕಥಾವಸ್ತು.

  ಮನಸ್ಸೇ ರಿಲ್ಯಾಕ್ಸ್ ಪ್ಲೀಸ್

  ಭಗವದ್ಗೀತೆ ಓದುತ್ತಿದ್ದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಭಕ್ತಿ ಮಾರ್ಗಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಮಾನವನು ತನ್ನ ಗುರಿಯೆಡೆಗೆ ತಲುಪಲು ಸಹಾಯ ಮಾಡುತ್ತದೆ.

  ಎಲ್ಲಾ ಧರ್ಮಗಳ ಸಾರ ಒಂದೇ

  ನಾನು ಪ್ರತಿದಿನ ನಮಾಜ್ ಬಳಿಕ ಖುರಾನ್ ಓದುತ್ತೇನೆ. ಈಗ ಭಗವದ್ಗೀತೆಯನ್ನೂ ಓದುತ್ತಿದ್ದೇನೆ. ಕಡೆಗೆ ನನಗೆ ಅನ್ನಿಸಿದ್ದೇನೆಂದರೆ ಈ ಎರಡೂ ಗ್ರಂಥಗಳ ಸಾರ ಒಂದೇ ಅನ್ನಿಸಿತು.

  ಭಗವದ್ಗೀತೆ ಅರ್ಥ ಮಾಡಿಕೊಳ್ಳುವುದು ಕಷ್ಟ

  ಭಗವದ್ಗೀತೆ ಓದುವುದು ಅಷ್ಟು ಸುಲಭವಲ್ಲ. ಸಂಸ್ಕೃತದಲ್ಲಿರುವ ಕಾರಣ ನಿಧಾನಕ್ಕೆ ಒಂದೊಂದನ್ನೇ ಓದಿ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಧರ್ಮ ಎನ್ನುವುದು ನಂಬಿಕೆಗಳ ಮೇಲೆ ನಿಂತಿದೆ ಅಲ್ಲವೆ ಎನ್ನುತ್ತಾರೆ ವೀಣಾ ಮಲಿಕ್.


  ಸುಮಾರು 700 ಶ್ಲೋಕಗಳನ್ನು ಒಳಗೊಂಡಿರುವ ಭಗವದ್ಗೀತೆಯಲ್ಲಿ ವೀಣಾ ಮಲಿಕ್ ಇದುವರೆಗೂ ಅದೆಷ್ಟು ಓದಿದ್ದಾರೋ ಅದೆಷ್ಟು ಅರ್ಥ ಮಾಡಿಕೊಂಡಿದ್ದಾರೋ ಆ ಅಲ್ಲಾಗೆ ಅರ್ಥವಾಗಬೇಕು.

  English summary
  Pakistani actress Veena Malik was seen reading Bhagavad Gita on her set. Veena says, "I read Quran daily offers Namaz because I have a faith on him and after reading Bhadavad Gita I can say that there is no difference in any religion they all shows the right path". Check out Photos of Actress Veena Malik Reading Bhagavat Gita in her Bedroom.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more