ವೀಣಾರನ್ನು ಮುದ್ದಾಡುವ ಸುವರ್ಣಾವಕಾಶ
ಪಾಕಿಸ್ತಾನದ ಹಾಟ್ ತಾರೆ ವೀಣಾ ಮಲಿಕ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ತಮ್ಮ 28ನೇ ಹುಟ್ಟುಹಬ್ಬವನ್ನು ವಿಭಿನ್ನ, ವಿಚಿತ್ರ, ವಿಶೇಷವಾಗಿ ಆಚರಿಸಿಕೊಳ್ಳುಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ತಮ್ಮ ಜನ್ಮದಿನ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುಬೇಕು ಎಂದು ಐನಾತಿ ಪ್ಲಾನ್ ಮಾಡಿದ್ದಾರೆ.
ಇಷ್ಟಕ್ಕೂ ವೀಣಾ ತಮ್ಮ ಬರ್ತ್ ಡೇ ದಿನ ಅಂತಹ ಘನಂದಾರಿ ಕೆಲಸ ಏನು ಮಾಡುತ್ತಾರೆ ಎಂದರೆ...ಕೇವಲ ಒಂದೇ ಒಂದು ನಿಮಿಷದಲ್ಲಿ 100ಕ್ಕೂ ಅಧಿಕ ಬಾರಿ ಚುಂಬಿಸಿಕೊಂಡು ಮುತ್ತಿನ ಮಳೆಯಲ್ಲಿ ಮೀಯಲಿದ್ದಾರೆ.
ಈ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ಬರೆಯಲಿದ್ದಾರಂತೆ. ಇಷ್ಟಕ್ಕೂ ವೀಣಾರ ತೊಂಡೆ ತುಟಿಗಳಿಗೆ ಸಿಗಲಿರುವ ಅದೃಷ್ಟವಂತ ಯಾರಪ್ಪಾ ಅದು. ವೀಣಾರನ್ನು ಮುತ್ತಿನ ಮಳೆಯಲ್ಲಿ ಮೀಯಿಸಲಿರುವ ಮಹಾನುಭಾವ ಯಾರಾಗಬಹುದು?

ಚುಂಬನ ರಿಯಾಲಿಟಿ ಶೋ
ಈ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ವೀಣಾರ ಚುಂಬನ ಸೇವೆ ಕೇವಲ ಅವರ ಲೇಟೆಸ್ಟ್ ಚಿತ್ರ 'ದಿ ಸಿಟಿ ದಟ್ ನೆವರ್ ಸ್ಲೀಪ್' ಸ್ಪರ್ಧಿಗಳಿಗೆ ಮಾತ್ರ. "ದಿ ಸಿಟಿ ದಟ್ ನೆವರ್ ಸ್ಲೀಪ್-ಬಾಲಿವುಡ್ ಹಂಟ್" ಎಂಬ ರಿಯಾಲಿಟಿ ಕಾರ್ಯಕ್ರಮದ ಮೂಲಕ ವೀಣಾಗೆ ಸರಿಹೊಂದುವ ಹೀರೋ ಆಯ್ಕೆ ಮಾಡಲಾಗುತ್ತಿದೆ.

ಒಂದೇ ನಿಮಿಷದಲ್ಲಿ 100 ಬಾರಿ ಚುಂಬಿಸಬೇಕು
ಆಯ್ಕೆಯಾದ ಹೀರೋ ಒಂದೇ ನಿಮಿಷದಲ್ಲಿ ವೀಣಾರನ್ನು 100 ಬಾರಿ ಚುಂಬಿಸಬೇಕು. ಎಲ್ಲೆಲ್ಲಿ ಚುಂಬಿಸುತ್ತಾನೋ, ಇನ್ನೆನು ಮಾಡುತ್ತಾನೋ ಎಂಬ ಆತಂಕ, ಕುತೂಹಲ ಆಕೆಯ ಅಭಿಮಾನಿಗಳಲ್ಲಿ ಮನೆಮಾಡಿದೆ.

ಅತಿದೊಡ್ಡ ಬರ್ತ್ ಡೇ ಗಿಫ್ಟ್
ಈ ಬಗ್ಗೆ ವೀಣಾ ಮಾತನಾಡುತ್ತಾ, "ಈ ಕಾರ್ಯಕ್ರಮದ ಬಗ್ಗೆ ಸಿಕ್ಕಪಾಟ್ಟೆ ಎಕ್ಸೈಟ್ ಆಗಿದ್ದೇನೆ. ಒಂದೇ ನಿಮಿಷದಲ್ಲಿ 100 ಚುಂಬನಗಳ ಮೂಲಕ ಗಿನ್ನಿಸ್ ದಾಖಲೆ ಬರೆಯಬೇಕೆಂದಿದ್ದೇನೆ. ಈ ದಿನ ತಾನು ಪಡೆಯಲಿರುವ ಅತಿದೊಡ್ಡ ಗಿಫ್ಟ್ ಇದಾಗಲಿದೆ ಎಂದು ಭಾವಿಸಿದ್ದೇನೆ" ಎಂದಿದ್ದಾರೆ.

ನಿರ್ದೇಶಕ, ನಿರ್ಮಾಪಕರಿಗೆ ಧನ್ಯವಾದ
"ದಿ ಸಿಟಿ ದಟ್ ನೆವರ್ ಸ್ಲೀಪ್" ಸ್ಪರ್ಧಿಗಳೇ ಬನ್ನಿ ನನ್ನನ್ನು ಚುಂಬಿಸಿ. ಈ ರೀತಿಯ ಅವಕಾಶ ಕೊಟ್ಟಂತಹ ನಿರ್ಮಾಪಕ ಸತೀಶ್ ರೆಡ್ಡಿ, ನಿರ್ಮಾಪಕ ಹರೂನ್ ರಷೀದ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ವೀಣಾ ಮಲಿಕ್ ಹೇಳಿದ್ದಾರೆ.

ಸುವರ್ಣಾವಕಾಶ ಯಾರಿಗೆ ಸಿಗಲಿದೆ?
ಇಷ್ಟಕ್ಕೂ ವೀಣಾ ಮಲಿಕ್ ಅವರನ್ನು ಮುದ್ದಾಡುವ ಅವಕಾಶ ಯಾರಿಗೆ ಸಿಗಲಿದೆ? ಇದು ಗೊತ್ತಾಗಬೇಕಾದರೆ ಸ್ವಲ್ಪ ಸಮಯ ಕಾಯಬೇಕು. ಆ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆಯಂತೆ. ಅಲ್ಲಿಯವರೆಗೂ ವೆಯ್ಟ್ ಅಂಡ್ ವಾಚ್.


Click it and Unblock the Notifications











