ಶಾರುಖ್ ಖಾನ್ ಅವ್ರನ್ನ ನೀವು ದ್ವೇಷಿಸಬಹುದು ಆದರೆ ಪ್ರೀತಿಸುವವರ ಸಂಖ್ಯೆ ಹೆಚ್ಚಿದೆ ಎಂದ ಪ್ರಿಯಾಮಣಿ

ಸೌಂದರ್ಯ ಹಾಗೂ ತನ್ನ ಸಹಜ ಅಭಿನಯದಿಂದ ಮನಸೊರೆಗೊಂಡ ನಟಿ ಪ್ರಿಯಾಮಣಿ. ದಕ್ಷಿಣದಿಂದ ಉತ್ತರದವರೆಗೂ ಅಭಿಮಾನಿ ಬಳಗವನ್ನ ಹೊಂದಿರುವ ಪ್ರಿಯಾಮಣಿ ಸದ್ಯಕ್ಕೆ ತಮ್ಮ ಆರ್ಟಿಕಲ್ 370 ಚಿತ್ರದ ಬಿಡುಗಡೆಯನ್ನ ಎದುರು ನೋಡ್ತಿದ್ದಾರೆ. ಚಿತ್ರದ ಪ್ರಚಾರವನ್ನೂ ಮಾಡ್ತಿದ್ದಾರೆ. ಅನೇಕ ಕಡೆ ಸಂದರ್ಶನವನ್ನೂ ನೀಡುತ್ತಿದ್ದಾರೆ. ಆ ಪೈಕಿ ಒಂದು ಸಂದರ್ಶನದಲ್ಲಿ ಪ್ರಿಯಾಮಣಿ ಬಾಲಿವುಡ್ ನ ಬಾದ್ ಷಾ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಕಿಂಗ್ ಖಾನ್ ಮೇಲೆ ತಮಗೆ ಇರುವ ಅಭಿಮಾನವನ್ನೂ ಪ್ರದರ್ಶಿಸಿದ್ದಾರೆ

ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಮಣಿ, ಶಾರುಖ್ ಖಾನ್ ಅವರನ್ನ ಕರುಣಾಮಯಿ ಎಂದು ಬಣ್ಣಿಸಿದ್ದಾರೆ. ಜನರನ್ನ ಅತ್ಯಂತ ಪ್ರೀತಿಯಿಂದ ಹಾಗೂ ಗೌರವದಿಂದ ಮಾತನಾಡಿಸುವ ಕೆಲವೇ ಕೆಲ ನಟರಲ್ಲಿ ಶಾರುಖ್ ಖಾನ್ ಕೂಡ ಒಬ್ಬರು ಎಂದಿರುವ ಪ್ರಿಯಾಮಣಿ, ಕಿಂಗ್ ಖಾನ್ ಮೇಲೆ ದ್ವೇಷ ಕಾರುವವರ ಬಗ್ಗೆಯೂ ಮಾತನಾಡಿದ್ದಾರೆ. ಈ ದೇಶದಲ್ಲಿ ಶಾರುಖ್ ಖಾನ್ ಅವರನ್ನ ದ್ವೇಷಿಸುವವರು ಇದ್ದಾರೆ ಆದರೆ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾರುಖ್ ಖಾನ್ ಅವರನ್ನ ನಿಜವಾಗಿಯೂ ಪ್ರೀತಿಸುವವರು ಇದ್ದಾರೆ ಎಂದಿದ್ದಾರೆ .

Versatile Actress Priyamani On Shah Rukh Khan

ಚೆನೈ ಎಕ್ಸ್ ಪ್ರೆಸ್-ಜವಾನ್ ನಲ್ಲಿ ಕಿಂಗ್ ಜೊತೆ ಕ್ವೀನ್

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಚೆನೈ ಎಕ್ಸ್ ಪ್ರೆಸ್ ಚಿತ್ರದ ಹಾಡೊಂದರಲ್ಲಿ ಪ್ರಿಯಾಮಣಿ ಕಾಣಿಸಿಕೊಂಡಿದ್ದರು. '1234 ಗೆಟ್ ಆನ್ ದಿ ಡ್ಯಾನ್ಸ್ ಫ್ಲೋರ್' ಎಂದು ಶಾರುಖ್ ಜೊತೆ ಥಕ ಥೈ ಎಂದು ಕುಣಿದಿದ್ದರು. ಆ ಅನುಭವವನ್ನೂ ಹಂಚಿಕೊಂಡಿರುವ ಪ್ರಿಯಾಮಣಿ ನನ್ನ ಕೆಲವು ಡ್ಯಾನ್ಸ್ ನಂಬರ್ ಗಳನ್ನ ರೋಹಿತ್ ಶೆಟ್ಟಿ ಮತ್ತು ಶಾರುಖ್ ಖಾನ್ ಇಬ್ಬರೂ ನೋಡಿದ್ದರು. ಇಷ್ಟ ಪಟ್ಟಿದ್ದರು. ಈ ಕಾರಣಕ್ಕೆ ಅದೊಂದು ದಿನ ಭೇಟಿಯಾಗಲು ಕರೆದರು. ಮುಂದಾಗಿದ್ದು ಇತಿಹಾಸ. ಶಾರುಖ್ ಖಾನ್ ತೆರೆ ಹಂಚಿಕೊಳ್ಳಲು ಸಿಕ್ಕಿದ್ದ ಆ ಸುವರ್ಣ ಅವಕಾಶವನ್ನ ಕೈ ಚೆಲ್ಲುವ ಮಾತೇ ಇರಲಿಲ್ಲ ಈ ಕಾರಣಕ್ಕೆ ತಕ್ಷಣಕ್ಕೆ ಒಪ್ಪಿಕೊಂಡೆ ಎಂದಿದ್ದಾರೆ ಪ್ರಿಯಾಮಣಿ

ಚೆನೈ ಎಕ್ಸ್ ಪ್ರೆಸ್ ನಂತರ ಶಾರುಖ್ ಖಾನ್ ಪ್ರಿಯಾಮಣಿ, ಜವಾನ್ ಚಿತ್ರದಲ್ಲಿ ಕೂಡ ತೆರೆ ಹಂಚಿಕೊಂಡರು. ಇಲ್ಲಿ ಕೇವಲ ಹಾಡಿಗಷ್ಟೇ ಪ್ರಿಯಾಮಣಿ ಸೀಮಿತವಾಗಿರಲಿಲ್ಲ. ಬದಲಿಗೆ ಚಿತ್ರದಲ್ಲಿನ ಪ್ರಮುಖ ಪಾತ್ರವನ್ನ ಪ್ರಿಯಾಮಣಿ ನಿರ್ವಹಿಸಿ, ಸೈ ಅನಿಸಿಕೊಂಡರು. ತಮ್ಮ ಅಭಿನಯ ಸಾಮರ್ಥ್ಯವನ್ನ ಮತ್ತೊಮ್ಮೆ ಪ್ರದರ್ಶಿಸಿದ್ದರು.

Versatile Actress Priyamani On Shah Rukh Khan

ಫೆಬ್ರವರಿ 23ರಂದು ಆರ್ಟಿಕಲ್ 370 ತೆರೆಗೆ

ಪ್ರಿಯಾಮಣಿ ಅಭಿನಯದ ಆರ್ಟಿಕಲ್ 370 ಚಿತ್ರ ಇದೇ ಫೆಬ್ರವರಿ 23ಕ್ಕೆ ಬಿಡುಗಡೆಯಾಗಲಿದೆ. ಯಾಮಿ ಗೌತಮ್ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಲೋಕ ಸಭೆ ಚುನಾವಣೆಗೂ ಮುನ್ನ ಈ ಚಿತ್ರ ಬಿಡುಗಡೆಯಾಗ್ತಿರುವುದು ವಿಶೇಷ. ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಆದಿತ್ಯ ಸುಹಾಸ್ ಜಂಭಾಲೆ ಚಿತ್ರವನ್ನ ನಿರ್ದೇಶಿಸಿದ್ದಾರೆ. ಪ್ರಿಯಾಮಣಿ ಹಾಗೂ ಯಾಮಿ ಜೊತೆ ವೈಭವ್ ತತ್ವವಾದಿ, ಅರುಣ್ ಗೋವಿಲ್, ಮತ್ತು ರಾಜ್ ಅರ್ಜುನ್ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ.

Versatile Actress Priyamani On Shah Rukh Khan

ಯಾಮಿ ಗೌತಮ್ ಅಭಿನಯದ 'ಆರ್ಟಿಕಲ್ 370' ಚಿತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 23 ಫೆಬ್ರವರಿ 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನು ಆದಿತ್ಯ ಧರ್ ನಿರ್ದೇಶಿಸಿದ್ದಾರೆ.

More from Filmibeat

English summary
In an recent interview Priyamani says Shah Rukh Khan might have haters but those ‘who love him are way more’
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X