»   » ಹಿಂದಿ ಚಿತ್ರರಂಗದ ಹಿರಿಯ ನಟಿ 'ಶಮ್ಮಿ' ನಿಧನ

ಹಿಂದಿ ಚಿತ್ರರಂಗದ ಹಿರಿಯ ನಟಿ 'ಶಮ್ಮಿ' ನಿಧನ

Posted By:
Subscribe to Filmibeat Kannada

ಬಾಲಿವುಡ್ ಹಿರಿಯ ನಟಿ ಶಮ್ಮಿ (89) ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಮ್ಮಿ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.

ಅವರ ನಿಧನದ ಸುದ್ದಿಯನ್ನು ಖ್ಯಾತ ಫ್ಯಾಷನ್ ಡಿಸೈನರ್ ಸಂದೀಪ್ ಖೋಸ್ಲಾ ಇನ್‌ಸ್ಟಾಗ್ರಾಮ್ ಮೂಲಕ ತಿಳಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಬಾಲಿವುಡ್ ಹಿರಿಯ ನಟಿ ನಿಧನಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

ಬಾಲಿವುಡ್‌ ನಲ್ಲಿ ಶಮ್ಮಿ ಅವರು 'ಶಮ್ಮಿ ಆಂಟಿ' ಎಂದೇ ಕರೆಯುತ್ತಿದ್ದರು. 18 ವರ್ಷಗಳ ವಯಸ್ಸಿನಲ್ಲಿ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದ ಇವರು 'ಉಸ್ತಾದ್ ಪೆಡ್ರೋ' ಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಕಾಮಿಡಿ ಪಾತ್ರಗಳಿಂದ ಎಲ್ಲರನ್ನೂ ರಂಜಿಸುತ್ತಿದ್ದ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.

Veteran actor Shammi dead

ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ 'ಮಲ್ಹರ್'. ಆ ಬಳಿಕ 'ಕೂಲಿ ನಂಬರ್ 1', 'ಖುದಾ ಗವಾ', 'ಹಮ್', 'ಆರ್ಥ್', 'ದಿ ಬರ್ನಿಂಗ್ ಟ್ರೈನ್' ಚಿತ್ರಗಳಲ್ಲಿ ಶಮ್ಮಿ ಅಭಿನಯಿಸಿದ್ದಾರೆ. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಅವರು, ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಸುಲ್ತಾನ್ ಅಹಮದ್‌ ರನ್ನು ಶಮ್ಮಿ ಮದುವೆಯಾಗಿದ್ದರು. ಮದುವೆಯಾದ ಏಳು ವರ್ಷಕ್ಕೆ ಇಬ್ಬರೂ ಬೇರ್ಪಟ್ಟಿದ್ದರು. ಶಮ್ಮಿ ನಿಧನದ ಹಿನ್ನೆಲೆಯಲ್ಲಿ ಹಲವು ಬಾಲಿವುಡ್ ಪ್ರಮುಖರು ಅವರಿಗೆ ಸಂತಾಪ ಸೂಚಿಸಿದ್ದಾರೆ.

English summary
Veteran actor Shammi, who acted in over 100 films and TV shows, passed away in Mumbai on Tuesday. She was 89. Amitabh Bachchan was among the first few to share the news on social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada