ವಿವಾಹಿತ ವ್ಯಕ್ತಿ ಜೊತೆ ಗುಟ್ಟಾಗಿ ಮದುವೆ; ಕೊನೆಗೂ ಮೌನ ಮುರಿದ 'ಅಣ್ಣಯ್ಯ' ಚಿತ್ರನಟಿ
ಚಿತ್ರರಂಗದಲ್ಲಿ ನಟ-ನಟಿಯರು ಪ್ರೀತಿಸಿ ಮದುವೆ ಆಗುವುದು, ನಿರ್ದೇಶಕರೊಟ್ಟಿಗೆ ನಟಿಯರು ಪ್ರೀತಿಲಿ ಬೀಳುವುದು ಕಾಮನ್. ಆದರೆ ಕೆಲವೊಮ್ಮೆ ವಿವಾಹಿತ ನಟ, ನಿರ್ದೇಶಕರ ಜೊತೆಗೂ ನಟಿಯರಿಗೆ ಲವ್ವಾಗುತ್ತದೆ. ಕೆಲವೊಮ್ಮೆ ಇದು ವಿವಾದಕ್ಕೆ ಕಾರಣವಾದರೆ ಮತ್ತೆ ಮತ್ತೆ ಕೆಲವೊಮ್ಮೆ ಮದುವೆವರೆಗೂ ಹೋಗುತ್ತದೆ.
ಬಾಲಿವುಡ್ ಹಿರಿಯ ನಟಿ ಅರುಣಾ ಇರಾನಿಗೆ ಕೂಡ ಅದಾಗಲೇ ಮದುವೆ ಆಗಿದ್ದ ನಿರ್ದೇಶಕ ಕುಕು ಕೊಹ್ಲಿ ಜೊತೆ ಪ್ರೀತಿ ಹುಟ್ಟಿತ್ತು. ಕರ್ತವ್ಯ, ಸುರಕ್ಷಾ, ಜುಡಾಯ್, ರೋಟಿ ಕಪಡಾ ಔರ್ ಮಕಾನ್, ರಾಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅರುಣಾ ಇರಾನಿ ನಟಿಸಿ ಗೆದ್ದಿದ್ದಾರೆ. ಬಹಳ ಚಿಕ್ಕ ವಯಸ್ಸಿನಲ್ಲೇ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ ಆಕೆ ಮುಂದೆ ಅಂತಹ ಪಾತ್ರಗಳಲ್ಲೇ ಹೆಚ್ಚು ನಟಿಸುವಂತಾಯಿತು. ಈಗಲೂ ವಯಸ್ಸಿಗೆ ತಕ್ಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಅರುಣಾ ಇರಾನಿ ಜೂಮ್ ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ಮೊದಲು ಒಬ್ಬರನ್ನು ಒಬ್ಬರು ದ್ವೇಷಿಸುತ್ತಿದ್ದೆವು. ಬಳಿಕ ಪ್ರೀತಿ ಮೂಡಿತು ಎಂದು 80ರ ದಶಕದ ಅಂತ್ಯದಲ್ಲಾದ ತಮ್ಮ ಪ್ರೇಮ್ ಕಹಾನಿ ವಿವರಿಸಿದ್ದಾರೆ.
"ನಾನು 'ಕೊಹ್ರಾಮ್' ಚಿತ್ರದ ಸಮಯದಲ್ಲಿ ಕುಕು ಕೊಹ್ಲಿಯನ್ನು ಭೇಟಿಯಾದೆ. ನನ್ನ ಮನೆಯನ್ನು ನಡೆಸಲು ನಾನು ಆಗ ಸಾಕಷ್ಟು ಚಿತ್ರಗಳನ್ನು ಮಾಡುತ್ತಿದ್ದೆ. ಅದರಲ್ಲಿ ಕೆಲವು ಉತ್ತಮ ಪಾತ್ರಗಳಾಗಿರಲಿಲ್ಲ. ನಾನು ಮದ್ರಾಸಿನಲ್ಲಿ ನನ್ನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆ. ಆ ಸಮಯದಲ್ಲಿ ಕುಕುಜಿ ಒಂದು ತಿಂಗಳ ಡೇಟ್ಸ್ ಕೇಳಿದರು, ನಾನು ಡೇಟ್ಸ್ ಹೊಂದಾಣಿಕೆಗೆ ಪ್ರಯತ್ನಿಸಿದೆ ಆದರೆ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಕುಕುಜಿ ಕೋಪಗೊಂಡರು"
"ನನ್ನ ನಿರ್ಧಾರ ಅವರಿಗೆ ಇಷ್ಟವಾಗಲಿಲ್ಲ. ನಾವು ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದೆವು. ಹಾಗಾಗಿ ನನಗೆ ಯಾವುದೇ ಕೆಲಸವಿಲ್ಲದಿದ್ದರೂ ಡೇಟ್ಸ್ ಕೊಟ್ಟಿದ್ದೆ. ಅವರು ನನ್ನನ್ನು ಕರೆಯುತ್ತಿದ್ದರು, ನನಗೆ ಕೋಪ ಬರುತ್ತಿತ್ತು. ಕೆಲವೊಮ್ಮೆ ಇಡೀ ದಿನ ನನ್ನನ್ನು ಸುಮ್ಮನೆ ಕೂರಿಗೆ ಕೊನೆ ಒಂದು ಸಣ್ಣ ಶಾಟ್ ತೆಗೆಯುತ್ತಿದ್ದರು. ಇದಕ್ಕೆ ಜಗಳವಾಗುತ್ತಿತ್ತು"

"ನಾನು ಕುಕುಜಿಯನ್ನು ದ್ವೇಷಿಸುತ್ತಿದ್ದೆ. ಆತನಿಗೂ ನನ್ನ ಬಗ್ಗೆ ಬೇಸರವಿತ್ತು. ನಂತರ ಏನಾಯಿತು ಎಂದು ನನಗೆ ಗೊತ್ತಿಲ್ಲ, ಅವರು ಸಾಫ್ಟ್ ಆಗಿ ಬಿಟ್ಟರು. ಬಳಿಕ ನಾವು ಸ್ನೇಹಿತರಾಗಿದ್ದೇವೆ. ನಂತರ ಅವರು ನನ್ನ ಡೇಟ್ಸ್ ಹೊಂದಿಸಲು ಪ್ರಾರಂಭಿಸಿದರು. ಕೊನೆಗೆ ಇಬ್ಬರ ನಡುವೆ ಲವ್ವಾಯಿತು. ಅವರು ವಿವಾಹಿತರಾದ ಕಾರಣ ನಾನು ನಮ್ಮ ಮದುವೆಯ ಬಗ್ಗೆ ಯಾರಿಗೂ ಹೇಳಿರಲಿಲ್ಲ" ಎಂದು ಅರುಣಾ ಇರಾನಿ ತಿಳಿಸಿದ್ದಾರೆ.
"ಕುಕುಜೀ ಅವರ ಮೊದಲ ಮದುವೆ ವಿಚಾರ ನನಗೆ ಗೊತ್ತಿರಲಿಲ್ಲ ಎನ್ನುವ ವದಂತಿ ಇತ್ತು. ಅದು ಸುಳ್ಳು. ಯಾಕಂದರೆ ಅವರ ಪತ್ನಿ ಮಕ್ಕಳೊಂದಿಗೆ ಸೆಟ್‌ಗೆ ಬರುತ್ತಿದ್ದರು. ಅದರ ಬಗ್ಗೆ ನನಗೆ ಗೊತ್ತಿತ್ತು. ಆದರೂ ನಮ್ಮದು ನಿರ್ಧಾರವಾಗಿತ್ತು. ಹೇಗೋ ಮದುವೆಯಾದೆವು. ನಾವು ಮಕ್ಕಳು ಮಾಡಿಕೊಳಳದೇ ಇದ್ದಿದ್ದು ಸರಿಯಾದ ನಿರ್ಧಾರವಲ್ಲ. ಆದರೆ ಅವರು ನನ್ನನ್ನು ಮದುವೆಯಾಗಲು ಬಹಳ ಹೋರಾಟ ನಡೆಸಬೇಕಾಯಿತು" ಎಂದಿದ್ದಾರೆ.
1981ರಲ್ಲಿ ಬಂದ 'ರಾಕಿ' ಸಿನಿಮಾ ಹಿಟ್ ಆಗಿತ್ತು. ಚಿತ್ರದಲ್ಲಿ ಸಂಜಯ್ ದತ್ ಹೀರೊ ಆಗಿ ನಟಿಸಿದ್ದರು. ಆ ಚಿತ್ರದಲ್ಲಿ ಸಂಜು ಬಾಬ ತಾಯಿ ಪಾತ್ರದಲ್ಲಿ ಅರುಣಾ ಇರಾನಿ ನಟಿಸಿದ್ದರು. "ನನಗೆ ಆಗ ತೆರೆಮೇಲೆ ತಾಯಿಯಾಗಿ ನಟಿಸುವ ಇಷ್ಟ ಇರಲಿಲ್ಲ, ಆಗಿನ್ನು ನನ್ನ ವಯಸ್ಸು 30. ಆದರೆ ಅದೇನೊ ಸಂಜಯ್ ದತ್ ಪಟ್ಟು ಹಿಡಿದು ಬಿಟ್ಟರು" ಎಂದು ಅರುಣಾ ನೆನಪಿಸಿಕೊಂಡಿದ್ದಾರೆ. ರಾಕಿ ಬಳಿಕ ಅಂತ ಪಾತ್ರಗಳೇ ಹೆಚ್ಚು ಸಿಕ್ಕವು. 'ಅಣ್ಣಯ್ಯ' ಚಿತ್ರದಲ್ಲಿ ಮಲತಾಯಿಯಾಗಿ ನಟಿಸಿ ಗಮನ ಸೆಳೆದರು.


Click it and Unblock the Notifications











