ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ತಂಡಕ್ಕೆ ಪ್ರಶ್ನೆಗಳ ಮಳೆ ಸುರಿಸಿದ ಹಿರಿಯ ನಟಿ ಆಶಾ ಪರೇಖ್!

ಹಿರಿಯ ನಟಿ ಆಶಾ ಪರೇಖ್ ಅವರು 2022 ರ ಹಿಟ್ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ನಿರ್ಮಾಪಕರನ್ನು ಟೀಕಿಸಿದ್ದಾರೆ. ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ಗಳಿಸಿದ ಹಣದಲ್ಲಿ ಒಂದೂ ಭಾಗವನ್ನು ಕೂಡ ಕಾಶ್ಮೀರದಲ್ಲಿ ಇನ್ನೂ ಸಂಕಷ್ಟದಲ್ಲಿರುವ ಹಿಂದೂಗಳಿಗೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಸಿಎನ್‌ಬಿಸಿ ಆವಾಜ್‌ಗೆ ನೀಡಿದ ಸಂದರ್ಶನದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನೀರು ಮತ್ತು ವಿದ್ಯುತ್ ವ್ಯವಸ್ಥೆಯಿಲ್ಲದೆ ವಾಸಿಸುವ ಹಿಂದೂಗಳಿಗೆ ಸಹಾಯ ಮಾಡಲು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದ ಹಣದ ಒಂದು ಭಾಗವನ್ನು ಬಳಸಿಲ್ಲ. ಅವರಿಗಾಗಿ ದಾನ ಮಾಡಿಲ್ಲ ಎಂದು ಹೇಳಿದ್ದಾರೆ.

Veteran actress Asha Parekh slams The Kashmir Files makers

ಸಿಎನ್‌ಬಿಸಿ ಆವಾಜ್ ಸಂದರ್ಶನದಲ್ಲಿ, ಆಶಾ ಪರೇಖ್ ಅವರನ್ನು ದಿ ಕಾಶ್ಮೀರ್ ಫೈಲ್ಸ್ ಮತ್ತು ದಿ ಕೇರಳ ಸ್ಟೋರಿ (2023) ನಂತಹ 'ವಿವಾದಾತ್ಮಕ' ಚಲನಚಿತ್ರಗಳನ್ನು ವೀಕ್ಷಿಸಿದ್ದೀರಾ ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿರುವ ಅವರು, ಇವೆರಡೂ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಗಳಿಕೆ ಮಾಡಿವೆ. ಆದರೆ, ಅಂತಹ ಚಿತ್ರಗಳಿಂದ ಜನರು ಏನು ಗಳಿಸಿದ್ದಾರೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್' ಜನಪ್ರಿಯತೆಯ ಕುರಿತು ಆಶಾ ಪರೇಖ್

'ದಿ ಕಾಶ್ಮೀರ್ ಫೈಲ್ಸ್' ನಿರ್ಮಾಪಕರು ಕಾಶ್ಮೀರಿ ಹಿಂದೂಗಳ ಕಲ್ಯಾಣಕ್ಕೆ ತಮ್ಮ ಯಾವುದೇ ಲಾಭವನ್ನು ನೀಡಿದ್ದಾರೆಯೇ ಅಥವಾ ಇಲ್ಲವೇ?. 'ದಿ ಕಾಶ್ಮೀರ್ ಫೈಲ್ಸ್' ಮತ್ತು 'ದಿ ಕೇರಳ ಸ್ಟೋರಿ' ಸಿನಿಮಾಗಳಿಂದ ಜನರಿಗೆ ಏನು ಲಾಭ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನಾನು ಆ ಚಿತ್ರಗಳನ್ನು ನೋಡಿಲ್ಲ, ಹಾಗಾಗಿ ಅವುಗಳ ಸುತ್ತಲಿನ ವಿವಾದಗಳ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ ಎಂದೂ ಹೇಳಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕ, ನಿರ್ದೇಶಕರನ್ನು ಟೀಕಿಸಿದ ನಟಿ

ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡಿರುವ ಅವರು, "ನಾನೀಗ ವಿವಾದಾತ್ಮಕ ಹೇಳಿಕೆ ನೀಡುತ್ತೇನೆ. ಚಿತ್ರದ ನಿರ್ಮಾಪಕರು ಸಿನಿಮಾದಿಂದ 400 ಕೋಟಿ ರೂ. ಗಳಿಸಿದರು. ಆದರೆ, ಅವರು ಜಮ್ಮುವಿನಲ್ಲಿ ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲದೆ ವಾಸಿಸುವ ಹಿಂದೂಗಳ ಕಲ್ಯಾಣಕ್ಕಾಗಿ ಎಷ್ಟು ಹಣವನ್ನು ನೀಡಿದ್ದಾರೆ?" ಎಂದಿದ್ದಾರೆ.

Veteran actress Asha Parekh slams The Kashmir Files makers

"ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕರು ರೂ 200 ಕೋಟಿ ಗಳಿಸಿದ್ದಾರೆ ಎಂದು ಭಾವಿಸೋಣ. ಚಿತ್ರದ 400 ಕೋಟಿ ರೂಪಾಯಿ ಸಂಗ್ರಹದಲ್ಲಿ, ಅವರು ಕಾಶ್ಮೀರಿ ಹಿಂದೂಗಳಿಗೆ ಸಹಾಯ ಮಾಡಲು 50 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಬಹುದಿತ್ತು, ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್

'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ವಿವೇಕ್ ರಂಜನ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ್ದಾರೆ. ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಜೀ ಸ್ಟುಡಿಯೋ ಬಂಡವಾಳ ಹೂಡಿದೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಪುನೀತ್ ಇಸ್ಸಾರ್, ದರ್ಶನ್ ಕುಮಾರ್, ಪ್ರಕಾಶ್ ಬೆಳವಾಡಿ, ಮೃಣಾಲ್ ಕುಲಕರ್ಣಿ ಮತ್ತು ಚಿನ್ಮಯ್ ಮಾಂಡ್ಲೇಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

More from Filmibeat

English summary
Veteran actress Asha Parekh slams 'The Kashmir Files' makers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X