35 ವರ್ಷಗಳ ಒಂದಾದ ಬಾಲಿವುಡ್ ನಟ ರಣ್‌ಧೀರ್ ಕಪೂರ್- ನಟಿ ಬಬಿತಾ ದಂಪತಿ: ಅಭಿಮಾನಿಗಳು ಖುಷ್
ಬಾಲಿವುಡ್ ದಿಗ್ಗಜ ನಟ ರಣ್‌ಧೀರ್ ಕಪೂರ್ ಹಾಗೂ ಹಿರಿಯ ನಟಿ ಬಬಿತಾ ಕಪೂರ್ 30 ವರ್ಷಗಳ ಹಿಂದೆ ದೂರಾಗಿದ್ದರು. ಚಿತ್ರರಂಗದಲ್ಲಿ ಮೆರೆಯುತ್ತಿದ್ದ ಸಮಯದಲ್ಲೇ ಇಬ್ಬರು ಹೊಸಬಾಳಿಗೆ ಕಾಲಿಟ್ಟಿದ್ದರು. 1971ರಲ್ಲಿ ಜೋಡಿಯ ಮದುವೆ ನಡೆದಿತ್ತು. ಕರೀನಾ ಕಪೂರ್ ಹಾಗೂ ಕರೀಷ್ಮಾ ಕಪೂರ್ ಹುಟ್ಟಿದ್ದ ನಂತರ 1988ರಲ್ಲಿ ಇಬ್ಬರು ದೂರಾಗಿದ್ದರು. ಅಂದಿನಿಂದಲೂ ಇಬ್ಬರು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು.
ಹೆಚ್ಚು ಕಮ್ಮಿ 35 ವರ್ಷಗಳ ನಂತರ ರಣ್‌ಧೀರ್ ಕಪೂರ್ ಹಾಗೂ ಬಬಿತಾ ದಂಪತಿ ಒಂದಾಗಿದ್ದಾರೆ. ಪತಿ ಹೊಸದಾಗಿ ಶಿಫ್ಟ್ ಆದ ಬಾಂದ್ರಾದ ನಿವಾಸಕ್ಕೆ ಬಬಿತಾ ಕೂಡ ಹೋಗಿದ್ದಾರೆ. ಇನ್ನು ಕೆಲ ದಿನಗಳ ಹಿಂದೆಯೇ ಹಿರಿಯ ನಟ ರಣ್‌ಧೀರ್ ಕಪೂರ್ ಬೆಂಬೂರ್‌ನಲ್ಲಿರುವ ನಿವಾಸಿದಿಂದ ಬಾಂದ್ರಾದ ಮನೆಗೆ ಶಿಫ್ಟ್ ಆಗಿದ್ದರು. ಇದೇ ವೇಳೆ ಬಬಿತಾ ಕೂಡ ಹೊಸ ಮನೆಗೆ ಕಾಲಿಟ್ಟಿದ್ದಾರೆ ಎನ್ನಲಾಗ್ತಿದೆ. ಅಸಲಿಗೆ 2007ರಲ್ಲೇ ಬಬಿತಾ, ರಣ್‌ಧೀರ್ ಜೊತೆ ಒಟ್ಟಿಗೆ ಇರೋಣ ಎಂದುಕೊಂಡಿದ್ದರಂತೆ. ಆದರೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲವಂತೆ.

ಗಂಡನಿಂದ ದೂರಾಗುವಾಗ ಬಬಿತಾ ಇಬ್ಬರು ಹೆಣ್ಣು ಮಕ್ಕಳ ಜೊತೆ ಚೆಂಬೂರಿನ ಆರ್‌ಕೆ ಬಂಗಲೆಯಿಂದ ಹೊರ ಬಂದಿದ್ದರು. ಲೌಕಂಡ್‌ವಾಲಾದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಕ್ಕಳ ಜೊತೆ ವಾಸಿಸುತ್ತಿದ್ದರು. ರಣ್‌ಧೀರ್- ಬಬಿತಾ ದೂರಾಗುವಾಗ ಇಬ್ಬರ ನಡುವೆ ಯಾವುದೇ ವೈರತ್ವ ಇರಲಿಲ್ಲವಂತೆ. ಕಪೂರ್ ಫ್ಯಾಮಿಲಿಯಲ್ಲಿ ಏನೇ ಸಮಸ್ಯೆ ಅಂದರೂ ಬಬಿತಾ ಸ್ಪಂದಿಸುತ್ತಿದ್ದರಂತೆ. ಇಷ್ಟು ವರ್ಷಗಳ ನಂತರ ಜೋಡಿ ಮತ್ತೆ ಒಂದಾಗಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಣ್‌ಧೀರ್ ಕಪೂರ್ "ನನ್ನ ಅಭ್ಯಾಸಗಳು ಬಬಿತಾಗೆ ಇಷ್ಟವಾಗುತ್ತಿರಲಿಲ್ಲ. ನಾನು ಕುಡಿದು ತಡವಾಗಿ ಮನೆಗೆ ಬರುತ್ತಿದ್ದೆ. ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಆಕೆ ಬಯಸಿದಂತೆ ನಾನು ಇರಲು ಸಾಧ್ಯವಾಗಲಿಲ್ಲ. ಆದರೆ ನಾನು ಇದ್ದಂತೆ ನನ್ನನ್ನು ಸ್ವೀಕರಿಸಲು ಆಕೆ ಒಪ್ಪಲಿಲ್ಲ. ನಮಗೆ ಇಬ್ಬರು ಮಕ್ಕಳು. ಅವರನ್ನು ಆಕೆ ಚೆನ್ನಾಗಿಯೇ ಸಾಕಿ ಬೆಳೆಸಿದ್ದಾಳೆ. ಅವರ ಕರಿಯರ್ ಕೂಡ ಚೆನ್ನಾಗಿದೆ. ತಂದೆಯಾಗಿ ನನಗಿನ್ನೇನು ಬೇಕು" ಎಂದಿದ್ದರು. 'ಜೀತ್' ಹಾಗೂ 'ಕಲ್ ಆಜ್ ಔಟ್ ಕಲ್' ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು.


Click it and Unblock the Notifications











