For Quick Alerts
    ALLOW NOTIFICATIONS  
    For Daily Alerts

    ಮಮ್ತಾಜ್ ಸಾವಿನ ವದಂತಿ: ನಾನಿನ್ನೂ ಬದುಕಿದ್ದೇನೆ ಎಂದ ಹಿರಿಯ ನಟಿ

    |

    ಕೆಲವು ಸೆಲೆಬ್ರಿಟಿಗಳ ಬದುಕು ಹೀಗೆಯೇ. ಅವರು ಸಾರ್ವಜನಿಕವಾಗಿ ಹೆಚ್ಚು ಸಮಯ ಕಾಣಿಸಿಕೊಳ್ಳದೆ ಇದ್ದರೆ ಅವರು ಸತ್ತೇ ಹೋದರು ಎಂಬ ವದಂತಿ ಹರಡುತ್ತದೆ. ಹಾಗೆಯೇ ಹಿರಿಯ ನಟಿ ಮಮ್ತಾಜ್ ಕುರಿತೂ ಹಲವು ಬಾರಿ ಈ ರೀತಿ ಸುದ್ದಿ ಹರಡಿತ್ತು. ಇತ್ತೀಚೆಗೆ ಮತ್ತೊಮ್ಮೆ ಹೀಗೆ ಸುದ್ದಿ ಹಬ್ಬಿದಾಗ ಸ್ವತಃ ಮಮ್ತಾಜ್ ಸ್ಪಷ್ಟನೆ ನೀಡಿದ್ದಾರೆ.

    ಮುತ್ತಪ್ಪ ರೈ ಕುರಿತು ಜಯರಾಜ್ ಪುತ್ರ ಅಜಿತ್ ಹೇಳಿದ ಅಚ್ಚರಿಯ ಸಂಗತಿ

    ಲಂಡನ್‌ನಲ್ಲಿ ನೆಲೆಸಿರುವ ಮಮ್ತಾಜ್, ಮಗಳು ತಾನ್ಯಾ ಮಾಧವನ್ ಅವರ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಕಾಣಿಸಿಕೊಂಡಿದ್ದರು. ವಿಡಿಯೋವೊಂದನ್ನು ಪ್ರಕಟಿಸಿರುವ ಮಮ್ತಾಜ್, 'ನನ್ನ ಎಲ್ಲ ಅಭಿಮಾನಿಗಳೇ, ನಿಮ್ಮನ್ನು ನಾನು ಪ್ರೀತಿಸುತ್ತೇನೆ. ನೋಡಿ ನಾನಿನ್ನೂ ಸತ್ತಿಲ್ಲ. ಅವರು ಹೇಳುವಷ್ಟೇನೂ ವೃದ್ಧೆಯಾಗಿಲ್ಲ. ನಿಮ್ಮೆಲ್ಲರ ಆಶೀರ್ವಾದಿಂದ ನಾನು ಈಗಲೂ ಚೆನ್ನಾಗಿದ್ದೇನೆ' ಎಂದಿದ್ದಾರೆ.

    73 ವರ್ಷದ ಮಮ್ತಾಜ್ ಮೃತಪಟ್ಟಿದ್ದು, ಶನಿವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಕೆಲವರು ವದಂತಿ ಹರಡಿಸಿದ್ದರು. ಹಲವು ವರ್ಷಗಳಿಂದ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಹೀಗಾಗಿ ವಯಸ್ಸಾದಂತೆ ಕಾಣಿಸುತ್ತಾರೆ ಎಂದು ಇಂಟರ್ನೆಟ್‌ನಲ್ಲಿ ಸುದ್ದಿ ಹರಿದಾಡುತ್ತಿತ್ತು. ಅವರು ಈಗ ಬಹಳ ಆರೋಗ್ಯವಾಗಿದ್ದಾರೆ ಮತ್ತು ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ ಸುಂದರವಾಗಿದ್ದಾರೆ ಎಂದು ಅವರ ಮಗಳು ತಾನ್ಯಾ ಬರೆದಿದ್ದಾರೆ.

    'ನಾನಿನ್ನೂ ಬದುಕಿದ್ದೇನೆ. ಯಾರು ಏಕೆ ಈ ರೀತಿ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ಇದು ಒಂದು ರೀತಿ ತಮಾಷೆಯೇ? ಕಳೆದ ವರ್ಷ ಇದೇ ರೀತಿಯ ಸುದ್ದಿಯಿಂದ ನನ್ನ ಕುಟುಂಬ ಗಾಬರಿಗೊಂಡಿತ್ತು. ನನ್ನ ಆತ್ಮೀಯರು, ಬೇಕಾದವರು ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಇದ್ದಾರೆ. ಅವರೆಲ್ಲರೂ ಆತಂಕ್ಕೆ ಒಳಗಾಗಿದ್ದರು. ನನಗೂ ಕಷ್ಟವಾಗಿತ್ತು. ಈ ವರ್ಷ ನಾನು, ನನ್ನ ಗಂಡ, ಹೆಣ್ಣುಮಕ್ಕಳು, ಮೊಮ್ಮಕ್ಕಳು, ಅಳಿಯ ಎಲ್ಲರೂ ಲಂಡನ್‌ನಲ್ಲಿದ್ದೇವೆ. ನಾವೆಲ್ಲರೂ ಜತೆಯಾಗಿ ಖುಷಿಯಿಂದ ಇದ್ದೇವೆ' ಎಂದು ಮಮ್ತಾಜ್ ತಿಳಿಸಿದ್ದಾರೆ.

    English summary
    Veteran bollywood actress Mumtaz has dismissed the rumours on her death and said i am not dead, i am alive.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
    X