For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಹಿರಿಯ ನಟಿ ಶಶಿಕಲಾ ಇನ್ನಿಲ್ಲ: ವಯೋಸಹಜ ಕಾಯಿಲೆಯಿಂದ ನಿಧನ

  |

  ಬಾಲಿವುಡ್‌ ಹಿರಿಯ ಹಾಗೂ ಖ್ಯಾತ ನಟಿ ಶಶಿಕಲಾ ಓಂ ಪ್ರಕಾಶ್ ಸೈಗಲ್ ಭಾನುವಾರ (ಏಪ್ರಿಲ್ 4) ಮುಂಬೈನ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

  88 ವಯಸ್ಸಿನ ನಟಿ ಶಶಿಕಲಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟ ಸಮಸ್ಯೆ ತೀವ್ರವಾದ ಹಿನ್ನೆಲೆ ಭಾನುವಾರ ಕೊನೆಯುಸಿರೆಳೆದರು ಎಂದು ಎಎನ್‌ಐ ವರದಿ ಮಾಡಿದೆ.

  ಮರಾಠಿ ಚಿತ್ರರಂಗದ ಖ್ಯಾತ ನಟ ಶ್ರೀಕಾಂತ್ ಮೊಘೆ ನಿಧನ

  ಶಶಿಕಲಾ ಅವರ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಮರುಗಿದೆ. ರವೀನಾ ಟಂಡನ್, ಫರಾಹ್ ಖಾನ್, ಪದ್ಮಿನಿ, ರೋಹಿತ್ ರೋಸ್ ರೇ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

  ಶಶಿಕಲಾ ಮಹಾರಾಷ್ಟ್ರದ ಸೋಲಾಪುರ್‌ನಲ್ಲಿ ಜನಿಸಿದ್ದರು. ಆರು ಮಕ್ಕಳಲ್ಲಿ ಶಶಿಕಲಾ ಸಹ ಒಬ್ಬರು. ಬಾಲ್ಯದಿಂದಲೇ ಡ್ಯಾನ್ಸ್ ಮತ್ತು ಸಂಗೀತದ ಕಡೆ ಹೆಚ್ಚು ಆಸಕ್ತಿ ಹೊಂದಿದ್ದ ಶಶಿಕಲಾ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗ ಪ್ರವೇಶಿಸಿದರು.

  ಆರಂಭದಲ್ಲಿ ಪೋಷಕ ಪಾತ್ರ ಹಾಗೂ ಖಳನಾಯಕಿ ಪಾತ್ರಗಳಲ್ಲಿ ಶಶಿಕಲಾ ಮಿಂಚಿದರು. ಸುಜಾತ್, ಫೂಲ್ ಔರ್ ಪತ್ತಾರ್, ಅನುಪಮಾ, ಗುಮ್ರಾ, ವಖ್ತ್, ಖುಬ್ಸೂರತ್, ಆರ್ತಿ, ಚೋಟೆ ಸರ್ಕಾರ್, ಸೌತಾನ್, ಸರ್ಗಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಹಿಂದಿ ಬ್ಲಾಕ್ ಬಸ್ಟರ್ 'ಕಭಿ ಖುಷಿ ಕಭಿ ಗಮ್' ಸಿನಿಮಾದಲ್ಲಿ ಶಶಿಕಲಾ ಅವರು ರುಖ್ಸರ್ ಅವರ ಅಜ್ಜಿ ಪಾತ್ರವನ್ನು ನಿರ್ವಹಿಸಿದ್ದರು. 2000ರ ದಶಕದ ಆರಂಭದಲ್ಲಿ 'ಮುಜ್ಸೆ ಶಾದಿ ಕರೋಗೆ' ಮತ್ತು 'ಚೋರಿ ಚೋರಿ' ಸೇರಿದಂತೆ ಜನಪ್ರಿಯ ಚಿತ್ರಗಳಲ್ಲಿ ಶಶಿಕಲಾ ಗಮನಾರ್ಹ ಪಾತ್ರಗಳನ್ನು ಮಾಡಿದ್ದರು.

  ಯುವರತ್ನ ಸಕ್ಸಸ್ ಪುನೀತ್ ರಾಜ್ ಕುಮಾರ್ ಗೆ ಸಾಥ್ ಕೊಟ್ಟ ಜಗ್ಗೇಶ್ | Filmibeat Kannada

  ಭಾರತೀಯ ಚಿತ್ರರಂಗಕ್ಕೆ ಶಶಿಕಲಾ ಅವರು ನೀಡಿದ ಕೊಡುಗೆ ಗೌರವಿಸಿ 2007ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ.

  English summary
  Veteran Actress Shashikala Passes Away At Age of 88 In Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X