»   » ಬಾಲಿವುಡ್ ಹಿರಿಯ ನಟಿಗೆ ಲೈಂಗಿಕ ಕಿರುಕುಳ: ಮುಂಬೈನಲ್ಲಿ ಉದ್ಯಮಿ ಬಂಧನ

ಬಾಲಿವುಡ್ ಹಿರಿಯ ನಟಿಗೆ ಲೈಂಗಿಕ ಕಿರುಕುಳ: ಮುಂಬೈನಲ್ಲಿ ಉದ್ಯಮಿ ಬಂಧನ

Posted By:
Subscribe to Filmibeat Kannada

ಮುಂಬೈ ಮೂಲದ ಉದ್ಯಮಿಯೊಬ್ಬ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಬಾಲಿವುಡ್ ನ ಹಿರಿಯ ನಟಿಯೊಬ್ಬರು ಕಳೆದ ತಿಂಗಳು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಮುಂಬೈ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಬಾಲಿವುಡ್ ನ ಹಿರಿಯ ನಟಿ ಮೇಲೆ ಮುಂಬೈ ಮೂಲದ ಉದ್ಯಮಿ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ್ದನಂತೆ. ಸಾಲದಕ್ಕೆ, ವಾಟ್ಸ್ ಆಪ್ ನಲ್ಲಿ ಅಶ್ಲೀಲ ಸಂದೇಶಗಳನ್ನೂ ಕಳುಹಿಸುತ್ತಿದ್ದನಂತೆ. ತಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ, ಮನೆ ಒಳಗೆ ನುಗ್ಗಲು ಪ್ರಯತ್ನ ಮಾಡಿದ್ದ ಎಂದು ಉದ್ಯಮಿ ಮೇಲೆ ಆರೋಪ ಮಾಡಿ ಹಿರಿಯ ನಟಿ ದೂರು ನೀಡಿದ್ದರು.

Veteran Bollywood Actress alleges she was raped, businessman arrested in Mumbai

ಹಿಂದಿ ಚಿತ್ರರಂಗದ ಹಿರಿಯ ನಟಿ ಮೇಲೆ ಅತ್ಯಾಚಾರ

ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376, 420, 465, 467, 468, 469, 471 ಮತ್ತು 504 ಅನ್ವಯ ಪ್ರಕರಣ ದಾಖಲಾಗಿದ್ದು, ಗುರುವಾರ ರಾತ್ರಿ ಆರೋಪಿಯನ್ನ ಬಂಧಿಸಿ, ಶುಕ್ರವಾರ ಬೆಳಗ್ಗೆ ಮುಂಬೈ ಕೋರ್ಟ್ ಗೆ ಪೊಲೀಸರು ಹಾಜರು ಪಡಿಸಿದ್ದಾರೆ. ಮಾರ್ಚ್ 28 ರವರೆಗೂ ಪೊಲೀಸ್ ಕಸ್ಟಡಿಯಲ್ಲೇ ಆರೋಪಿ ಇರಬೇಕಾಗಿದೆ. ಮುಂಬೈನ ಕ್ರೈಂ ಬ್ಯಾಂಚ್ ಪೊಲೀಸರು ಸದ್ಯ ತನಿಖೆ ಕೈಗೊಂಡಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ರಿಚಾ ಚಡ್ಡಾ, ಕಲ್ಕಿ ಕೋಚ್ಲಿನ್ ನಂತರ ಹಿರಿಯ ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

English summary
Veteran Bollywood Actress has alleged that she was raped by a Mumbai based Businessman. The Businessman was arrested by Mumbai Police on Thursday night (March 22nd)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X