For Quick Alerts
  ALLOW NOTIFICATIONS  
  For Daily Alerts

  'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ!

  By Harshitha
  |

  'ಕಾಸ್ಟಿಂಗ್ ಕೌಚ್' ಎಂಬ ಭೂತ ಸದ್ಯ ಟಾಲಿವುಡ್ ಸ್ಟಾರ್ ನಟರ ನಿದ್ದೆಗೆಡಿಸಿದೆ. 'ಕಾಸ್ಟಿಂಗ್ ಕೌಚ್' ವಿರುದ್ಧ ತೆಲುಗು ನಟಿ ಶ್ರೀರೆಡ್ಡಿ ಬಟ್ಟೆ ಬಿಚ್ಚಿ ಪ್ರತಿಭಟಿಸಿದ್ಮೇಲೆ, ತೆಲುಗು ಸಿನಿ ಅಂಗಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

  ತೆಲುಗು ಇಂಡಸ್ಟ್ರಿಯ 'ಕಾಸ್ಟಿಂಗ್ ಕೌಚ್' ವಿವಾದ ಈಗ ಹಿಂದಿ ಚಿತ್ರರಂಗಕ್ಕೂ ಮುಟ್ಟಿದೆ. ಬಾಲಿವುಡ್ ನ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ 'ಕಾಸ್ಟಿಂಗ್ ಕೌಚ್' ಬಗ್ಗೆ ಇವತ್ತು ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

  ಬೆಳಿಗ್ಗೆ 'ಅಮ್ಮ' ಅಂತಾರೆ, ರಾತ್ರಿ ಮಂಚಕ್ಕೆ ಕರೀತಾರೆ ಎಂದ ತೆಲುಗು ನಟಿಬೆಳಿಗ್ಗೆ 'ಅಮ್ಮ' ಅಂತಾರೆ, ರಾತ್ರಿ ಮಂಚಕ್ಕೆ ಕರೀತಾರೆ ಎಂದ ತೆಲುಗು ನಟಿ

  'ಕಾಸ್ಟಿಂಗ್ ಕೌಚ್' ವಿರುದ್ಧ ಸಿನಿಮಾ ನಟಿಯರೆಲ್ಲ ಕಿಡಿ ಕಾರುತ್ತಿರುವಾಗ, ಸರೋಜ್ ಖಾನ್ 'ಕಾಸ್ಟಿಂಗ್ ಕೌಚ್' ಪರವಾಗಿ ಮಾತನಾಡಿ ವಿವಾದಕ್ಕೆ ಗ್ರಾಸವಾಗಿದ್ದಾರೆ. ಹಾಗಾದ್ರೆ, ಸರೋಜ್ ಕೊಟ್ಟಿರುವ ಹೇಳಿಕೆ ಏನು.? ಸಂಪೂರ್ಣ ವರದಿ ಇಲ್ಲಿದೆ ನೋಡಿ...

  ಕಾಸ್ಟಿಂಗ್ ಕೌಚ್ ನಲ್ಲಿ ತಪ್ಪೇನಿದೆ.?

  ಕಾಸ್ಟಿಂಗ್ ಕೌಚ್ ನಲ್ಲಿ ತಪ್ಪೇನಿದೆ.?

  ''ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕಾಸ್ಟಿಂಗ್ ಕೌಚ್ ವಿಚಾರವಾಗಿ ಬಾಲಿವುಡ್ ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ.?'' ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದ್ದಾರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೃತ್ಯ ಸಂಯೋಜಕಿ ಸರೋಜ್ ಖಾನ್.

  'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ಚಿರಂಜೀವಿಗೆ ಎಚ್ಚರಿಕೆ ನೀಡಿದ ಶ್ರೀರೆಡ್ಡಿ'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ಚಿರಂಜೀವಿಗೆ ಎಚ್ಚರಿಕೆ ನೀಡಿದ ಶ್ರೀರೆಡ್ಡಿ

  ಹೊಟ್ಟೆಗೆ ರೊಟ್ಟಿ ಅಂತೂ ಸಿಗುತ್ತೆ.!

  ಹೊಟ್ಟೆಗೆ ರೊಟ್ಟಿ ಅಂತೂ ಸಿಗುತ್ತೆ.!

  ''ಕಾಸ್ಟಿಂಗ್ ಕೌಚ್ ನಿಂದ ಕೆಲಸ ಅಂತೂ ಸಿಗುತ್ತೆ. ಕಮ್ಮಿ ಅಂದರೂ ಹೊಟ್ಟೆಗೆ ರೊಟ್ಟಿ ಕೊಡ್ತಾರೆ. ಅತ್ಯಾಚಾರ ಎಸಗಿ ಪರಾರಿ ಆಗುವುದಿಲ್ಲ'' ಎಂದು ಸರೋಜ್ ಖಾನ್ ನೀಡಿರುವ ಹೇಳಿಕೆ ಅನೇಕ ನಟಿಯರ ಕೆಂಗಣ್ಣಿಗೆ ಗುರಿಯಾಗಿದೆ.

  ಮಂಗಳಮುಖಿ ಮೇಲೆಯೂ ಅತ್ಯಾಚಾರವೆಸಗಿದ್ದ ನಿರ್ಮಾಪಕನ ಮಗ.!ಮಂಗಳಮುಖಿ ಮೇಲೆಯೂ ಅತ್ಯಾಚಾರವೆಸಗಿದ್ದ ನಿರ್ಮಾಪಕನ ಮಗ.!

  ಒಪ್ಪಿಗೆ ಕೊಟ್ಮೇಲೆ ಎಲ್ಲ ಆಗೋದು.!

  ಒಪ್ಪಿಗೆ ಕೊಟ್ಮೇಲೆ ಎಲ್ಲ ಆಗೋದು.!

  ''ಪರಸ್ಪರ ಒಪ್ಪಿಗೆ ಇಂದಲೇ ಕಾಸ್ಟಿಂಗ್ ಕೌಚ್ ನಡೆಯುವುದು. ಕಲಾವಿದರಿಗೆ ಆಯ್ಕೆ ಇರುತ್ತದೆ. ಚಾನ್ಸ್ ಗಾಗಿ ಮಂಚ ಏರಬೇಕು ಎಂದು ಕೇಳುವವರ ಜೊತೆಗೆ ಕೆಲಸ ಮಾಡುವುದು ಬಿಡುವುದು ಕಲಾವಿದರಿಗೆ ಆಯ್ಕೆಗೆ ಬಿಟ್ಟಿದ್ದು. ಕಲಾವಿದರ ಬಳಿ ಪ್ರತಿಭೆ ಇದ್ದರೆ, ತಮ್ಮನ್ನೇ ತಾವು ಮಾರಿಕೊಳ್ಳುವುದೇಕೆ?'' ಎಂದಿದ್ದಾರೆ ಸರೋಜ್ ಖಾನ್.

  ತೆಲುಗು ಸ್ಟಾರ್ ನಟನ ಪತ್ನಿ ವಿರುದ್ಧ ಇಂತಹ ಆರೋಪ.! ಇದು ನಿಜನಾ.?ತೆಲುಗು ಸ್ಟಾರ್ ನಟನ ಪತ್ನಿ ವಿರುದ್ಧ ಇಂತಹ ಆರೋಪ.! ಇದು ನಿಜನಾ.?

  ಟ್ವೀಟ್ ಗಳ ಸುರಿಮಳೆ

  ಟ್ವೀಟ್ ಗಳ ಸುರಿಮಳೆ

  ಕಾಸ್ಟಿಂಗ್ ಕೌಚ್ ಕುರಿತು ಸರೋಜ್ ಖಾನ್ ಕೊಟ್ಟಿರುವ ವಿವಾದಾತ್ಮಕ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅವಾಂತರ ಸೃಷ್ಟಿಸಿದೆ. ಸರೋಜ್ ಖಾನ್ ಈ ರೀತಿ ಮಾತಾಡ್ತಾರಾ ಅಂತ ಸ್ವತಃ ಬಾಲಿವುಡ್ ಮಂದಿಯೇ ಶಾಕ್ ಆಗಿದ್ದಾರೆ.

  English summary
  Veteran Choreographer Saroj Khan justifies Casting Couch at a press conference held in Mumbai today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X