For Quick Alerts
  ALLOW NOTIFICATIONS  
  For Daily Alerts

  ಆಡಿದ ಮಾತಿಗೆ ಕ್ಷಮೆ ಕೇಳಿದ ಸರೋಜ್ ಖಾನ್: ಆದರೂ ತಣ್ಣಗಾಗದ ನೆಟ್ಟಿಗರ ಕೋಪ.!

  By Harshitha
  |

  'ಸಿನಿಮಾಗಳಲ್ಲಿ ಅವಕಾಶ ಸಿಗಬೇಕು ಅಂದ್ರೆ ಚಿತ್ರತಂಡದವರ ಲೈಂಗಿಕ ತೃಷೆ ತೀರಿಸಬೇಕು' ಎಂಬ ಪದ್ಧತಿಯ ವಿರುದ್ಧ ಸಿನಿಮಾ ನಟಿಯರು ಸಮರ ಸಾರಿರುವಾಗ, ಓರ್ವ ಮಹಿಳೆ ಆಗಿ, ಹಿರಿಯ ನೃತ್ಯ ಸಂಯೋಜಕಿ ಆಗಿ ಸರೋಜ್ ಖಾನ್ 'ಕಾಸ್ಟಿಂಗ್ ಕೌಚ್' ಪರವಾಗಿ ಮಾತನಾಡಿದ್ದಾರೆ.

  ''ಕಾಸ್ಟಿಂಗ್ ನಿಂದ ಕೆಲಸ ಅಂತೂ ಸಿಗುತ್ತೆ. ಕಮ್ಮಿ ಅಂದ್ರೂ ಹೊಟ್ಟೆಗೆ ರೊಟ್ಟಿ ಕೊಡ್ತಾರೆ. ಅತ್ಯಾಚಾರ ಎಸಗಿ ಪರಾರಿ ಆಗುವುದಿಲ್ಲ'' ಎಂದು ಸರೋಜ್ ಖಾನ್ ಆಡಿರುವ ಮಾತು ವಿವಾದಕ್ಕೆ ಗ್ರಾಸವಾಗಿದೆ.

  ಇಂದು ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ 'ಕಾಸ್ಟಿಂಗ್ ಕೌಚ್' ಪರವಾಗಿ ಹೇಳಿಕೆ ನೀಡಿ, ದೊಡ್ಡ ವಿವಾದಕ್ಕೆ ನಾಂದಿ ಹಾಡಿದ್ಮೇಲೆ, ಸರೋಜ್ ಖಾನ್ ಗೆ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ಕೂಡಲೆ ಕ್ಷಮೆ ಕೇಳಿದ್ದಾರೆ.

  'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ! 'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ!

  ಕ್ಷಮೆ ಕೇಳಿದ ಮಾತ್ರಕ್ಕೆ, ನಟಿಯರು ಸುಮ್ಮನಾಗಿಲ್ಲ. ನೆಟ್ಟಿಗರ ಕೋಪ ಕೂಡ ತಣ್ಣಗಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಸರೋಜ್ ಖಾನ್ ರನ್ನ ಲೇವಡಿ ಮಾಡುತ್ತಿದ್ದರೆ, ಹಲವರು ಕೆಂಡಕಾರುತ್ತಿದ್ದಾರೆ. ಅಂತಹ ಕೆಲವು ಟ್ವೀಟ್ ಗಳು ಇಲ್ಲಿದೆ. ನೋಡಿ...

  ಟ್ರೋಲ್ ಆಗುತ್ತಿದ್ದಾರೆ ಸರೋಜ್ ಖಾನ್

  'ಕಾಸ್ಟಿಂಗ್ ಕೌಚ್' ಪರವಾಗಿ ಮಾತನಾಡಿದ ಸರೋಜ್ ಖಾನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.

  ಸರೋಜ್ ಖಾನ್ ಗೆ ಏನಾಗಿದೆ.?

  ಸರೋಜ್ ಖಾನ್ ಆಡಿರುವ ಮಾತನ್ನ ಕೇಳಿ ಹಲವರು ಶಾಕ್ ಆಗಿದ್ದಾರೆ. ಸರೋಜ್ ಖಾನ್ ಬುದ್ಧಿಗೆ ಏನಾಗಿದೆ ಅಂತ ಅನೇಕರು ಪ್ರಶ್ನೆ ಮಾಡ್ತಿದ್ದಾರೆ.

  ಅನಿರೀಕ್ಷಿತ

  ''ಕಾಸ್ಟಿಂಗ್ ಕೌಚ್' ವಿರುದ್ಧ ಮಹಿಳೆಯರು ದನಿ ಎತ್ತುತ್ತಿರುವಾಗ, ಸರೋಜ್ ಖಾನ್ ಅದರ ಪರವಾಗಿ ಮಾತನಾಡಿದ್ದಾರೆ. ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನೃತ್ಯ ಸಂಯೋಜಕಿಯಿಂದ ಇಂತಹ ಮಾತು ನಿರೀಕ್ಷೆ ಮಾಡಿರಲಿಲ್ಲ'' ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

  ರೇಪ್ ಇಂಡಸ್ಟ್ರಿ

  ''ಬಾಲಿವುಡ್ ಎಂಬ ರೇಪ್ ಇಂಡಸ್ಟ್ರಿಯಲ್ಲಿ ಅತ್ಯಾಚಾರದ ಬಳಿಕ ಊಟ ನೀಡಲಾಗುತ್ತದೆ'' ಎನ್ನುತ್ತಿದ್ದಾರೆ ನೆಟ್ಟಿಗರು.

  English summary
  Veteran Choreographer Saroj Khan justifies Casting Couch at a press conference held in Mumbai today. People in social media are lashing out against Saroj Khan on her statement on Casting Couch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X