»   » ಬಾಲಿವುಡ್ ಹಿರಿಯ ನಟ ಸಯೀದ್ ಜಾಫ್ರಿ ಇನ್ನಿಲ್ಲ

ಬಾಲಿವುಡ್ ಹಿರಿಯ ನಟ ಸಯೀದ್ ಜಾಫ್ರಿ ಇನ್ನಿಲ್ಲ

Posted By:
Subscribe to Filmibeat Kannada

ಬಹುಭಾಷಾ ಹಿರಿಯ ನಟ ಸಯೀದ್ ಜಾಫ್ರಿ ಇನ್ನಿಲ್ಲ. 86 ವರ್ಷ ವಯಸ್ಸಿನ ಹಿರಿಯ ನಟ ಸಯೀದ್ ಜಾಫ್ರಿ ನವೆಂಬರ್ 15 ರಂದು ನಿಧನರಾಗಿದ್ದಾರೆ.

ಅಸ್ತಂಗತರಾದ ಬಾಲಿವುಡ್ ಹಿರಿಯ ನಟ ಸಯೀದ್ ಜಾಫ್ರಿ ಅವರಿಗೆ ಬಿಟೌನ್ ನ ಸ್ಟಾರ್ ನಟ-ನಟಿಯರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಹಿರಿಯ ನಟ ಜಾಫ್ರಿ ಅವರು ಬ್ರಿಟಿಷ್ ಮತ್ತು ಭಾರತದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಪಂಜಾಬ್ ನ ಮಲೆರ್ ಕೊಟ್ಲಾದಲ್ಲಿ ಜನಿಸಿದ ಜಾಫ್ರಿ ಗಾಂಧಿ, 'ಶತ್ರಂಜಿ ಕಿ ಕಿಲಾಡಿ', 'ದಿ ಮ್ಯಾನ್ ಹೂ ವುಡ್ ಬಿ ಕಿಂಗ್', 'ಅ ಪ್ಯಾಸೇಜ್ ಟು ಇಂಡಿಯಾ', 'ರಾಮ್ ತೇರಿ ಗಂಗಾ ಮೈಲಿ' ಸೇರಿದಂತೆ ಅನೇಕ ಬ್ರಿಟಿಷ್ ಮತ್ತು ಭಾರತೀಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Veteran hindi Actor Saeed Jaffrey passes away at 86

ಇನ್ನು ಜಾಫ್ರಿ ಅವರು ಬ್ರಿಟಿಷ್ ಮತ್ತು ಕೆನಡಾದ ಅಕಾಡೆಮಿ ಪ್ರಶಸ್ತಿಗೆ ನಾಮ ನಿರ್ದೇಶನ ಪಡೆದ ಮೊದಲನೇ ಏಷ್ಯಾ ಪ್ರಜೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೇ ಆಲ್ ಇಂಡಿಯಾ ರೇಡಿಯೋ ನಿರ್ದೇಶಕರಾಗಿ 1951 ರಿಂದ 1956 ರವರೆಗೆ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲದೇ 'ಶತ್ರಂಜಿ ಕಿ ಕಿಲಾಡಿ' ಚಿತ್ರಕ್ಕೆ ಬೆಸ್ಟ್ ಸಪೋರ್ಟಿಂಗ್ ನಟ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು.

ಅಂದಹಾಗೆ ಸಯೀದ್ ಜಾಫ್ರಿ ಅವರು ಮಧುರ್ ಜಾಫ್ರಿ ಅವರನ್ನು ವಿವಾಹವಾಗಿದ್ದು, 1965 ರಲ್ಲಿ ವಿಚ್ಛೇದನ ಪಡೆದಿದ್ದರು. ಇದಿಗ ಮೀರಾ, ಝಿಯಾ, ಸಕೀನಾ ಜಾಫ್ರಿ ಎಂಬ ಮೂವರು ಪುತ್ರಿಯರನ್ನು ಸಯೀದ್ ಅವರು ಅಗಲಿದ್ದಾರೆ. ಘನವೆತ್ತ ಹಿರಿಯ ನಟನ ನಿಧನ ವಾರ್ತೆ ಕೇಳಿದ ಇಡೀ ಬಿಟೌನ್ ಸಂತಾಪ ಸೂಚಿಸಿದೆ.

English summary
Veteran actor, Saeed Jaffrey, who was seen in films like Shatranj Ke Khiladi and Ram Teri Ganga Maili, passed away on Sunday, November 15, 2015. He was 86.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada