ಹಿಂದಿ ಚಿತ್ರರಂಗದ ಹಿರಿಯ ಚಿತ್ರ ಸಾಹಿತಿ ಅಭಿಲಾಷ್ ನಿಧನ
ಹಿಂದಿ ಚಿತ್ರರಂಗದ ಹಿರಿಯ ಚಿತ್ರ ಸಾಹಿತಿ ಅಭಿಲಾಷ್ ಸೋಮವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ 74 ವರ್ಷದ ಅಭಿಲಾಷ್ ಮುಂಬೈನ ಗೋರೆಗಾಂವ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಒಂದು ವರ್ಷದಿಂದ ಅಭಿಲಾಷ್ ಅವರು ಲಿವರ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಇದೆ.
ಪ್ರಾರ್ಥನೆ ಗೀತೆ ಎನ್ನುವಂತಿದ್ದ ''ಇತ್‌ನಿ ಶಕ್ತಿ ಹಮೇ ದೇನಾ ದಾತಾ, ಮನ್ ಕಿ ವಿಶ್ವಾಸ್ ಕಮ್‌ಝೋರ್ ಹೋ ನಾ....'' ಹಾಡನ್ನು ಬರೆದವರು ಇದೇ ಅಭಿಲಾಷ್. ಲಾಲ್ ಚೂಡಾ (1984), ಹಲ್ಚುಲ್ (1995) ಮತ್ತು ಜೀತೆ ಹೇನ್ ಶಾನ್ ಸೆ (1988) ಚಿತ್ರಗಳಿಂದ ಅಭಿಲಾಷ್ ಗುರುತಿಸಿಕೊಂಡಿದ್ದರು.

ಅಂದ್ಹಾಗೆ, ಅಭಿಲಾಷ್ ಅವರ ಮೂಲ ಹೆಸರು ಓಂ ಪ್ರಕಾಶ್. ಮೂಲತಃ ದೆಹಲಿಯವರು. ಸುಮಾರು 5 ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು.
'ಅಂಕುಶ್' ಚಿತ್ರದ ''ಇತ್‌ನಿ ಶಕ್ತಿ ಹಮೇ ದೇನಾ ದಾತಾ...ಸುಮಾರು 8 ಭಾಷೆಗಳಲ್ಲಿ ಭಾಷಾಂತರವಾಗಿದೆ. ಹಲವು ಶಾಲೆಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಈ ಹಾಡನ್ನು ಪ್ರಾರ್ಥನಾ ಗೀತೆಯಾಗಿ ಬಳಸುತ್ತಿದ್ದಾರೆ.


Click it and Unblock the Notifications











