twitter
    For Quick Alerts
    ALLOW NOTIFICATIONS  
    For Daily Alerts

    ಒಡಿಯಾ ಹಿರಯ ನಟ ನಿಧನ, ಮೋದಿ ಸೇರಿ ಗಣ್ಯರ ಸಂತಾಪ

    |

    ಒಡಿಯಾ ಸಿನಿಮಾಗಳ ಜನಪ್ರಿಯ ಹಾಗೂ ಹಿರಿಯ ನಟ ಮಿಹಿರ್ ದಾಸ್ ನಿನ್ನೆ (ಜನವರಿ 11) ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.

    ಒಡಿಯಾ ಸಿನಿಮಾ ಪ್ರಗತಿಗೆ ಮಹತ್ವದ ಕೊಡುಗೆಗಳನ್ನು ನೀಡಿರುವ ಮಿಹಿರ್ ದಾಸ್‌ ಕಳೆದ ಕೆಲವು ದಿನಗಳಿಂದ ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಕಟಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಅನಾರೋಗ್ಯದಿಂದ ಬಳಲುತ್ತಿದ್ದ ಮಿಹಿರ್ ದಾಸ್ ಕಳೆದ ಕೆಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಮರಳುತ್ತಿದ್ದರು. ಆದರೆ ಜನವರಿ 06ರ ಬಳಿಕ ಚಿಕಿತ್ಸೆಗಳಿಗೆ ಸ್ಪಂದಿಸುವುದು ನಿಂತಿತ್ತು. ಆಗಿನಿಂದಲೂ ಅವರನ್ನು ಜೀವರಕ್ಷಕ ಸಾಧನಗಳ ಸಹಾಯದಿಂದ ಉಸಿರಾಡುವಂತೆ ಮಾಡಲಾಗಿತ್ತು. ಆದರೆ ನಿನ್ನೆ (ಜನವರಿ 11) ಮಿಹಿರ್ ಅವರಿಗೆ ಹೃದಯಾಘಾತವಾಗಿ ಅವರು ನಿಧನ ಹೊಂದಿದ್ದಾರೆ.

    Veteran Odia Actor Mihir Das Passed Away, Modi Express Condolence

    ಮಿಹಿರ್ ದಾಸ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ''ಮಿಹಿರ್ ದಾಸ್ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರ ಸುದೀರ್ಘ ನಟನಾ ಪಯಣದಲ್ಲಿ ಅವರ ಪ್ರತಿಭಾಪೂರ್ಣ ಅಭಿನಯದಿಂದ ಹಲವು ಹೃದಯಗಳನ್ನು ಅವರು ಗೆದ್ದಿದ್ದರು. ಮಿಹಿರ್ ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳು'' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

    ಮಿಹಿರ್ ದಾಸ್ ಅವರ ಮೃತದೇಹವನ್ನು ಕಟಕ್‌ನ ಸೆಕ್ಟರ್ 8ರ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ನಂತರ ಅಲ್ಲಿಂದ ಮಿಹಿರ್ ಅವರ ಹಿರಿಯರ ಮನೆಯಾದ ನೌಗಡಕ್ಕೆ ಕೊಂಡೊಯ್ದು ಬಳಿಕ ಮೃತ ದೇಹವನ್ನು ಸತಿಚೌರ ಅಂತಿಮ ಸಂಸ್ಕಾರ ಸ್ಥಳಕ್ಕೆ ಕರೆತರಲಾಗುತ್ತದೆ. ಅಲ್ಲಿ ಸಕಲ ಸರ್ಕಾರಿ ಗೌರವಗಳೊಟ್ಟಿಗೆ ಅವರ ಅಂತಿಮ ಸಂಸ್ಕಾರವನ್ನು ನಾಳೆ ಪೂರ್ಣಗೊಳಿಸಲಾಗುತ್ತದೆ.

    1959ರಲ್ಲಿ ಒಡಿಸ್ಸಾದ ಬರಿಪದ ಎಂಬಲ್ಲಿ ಜನಿಸಿದ ಮಿಹಿರ್ ದಾಸ್ ಎಳವೆಯಿಂದಲೇ ಕಲೆ-ಸಂಗೀತದ ಬಗ್ಗೆ ಆಸಕ್ತಿಯುಳ್ಳವರು. ಅವರು ಜನಿಸಿದ ಬರಿಪದ ಊರು ಸಹ ಕಲೆ ಸಂಸ್ಕೃತಿಗಳಿಂದಲೇ ತುಂಬಿದ್ದ ಊರಾಗಿತ್ತು. ಎಳವೆಯಿಂದಲೇ ನಾಟಕಗಳಲ್ಲಿ ನಟಿಸುತ್ತಿದ್ದ ಮಿಹಿರ್ ದಾಸ್, ಮೊದಲಿಗೆ ನಟಿಸಿದ ಸಿನಿಮಾ 'ಸ್ಕೂಲ್ ಮಾಸ್ಟರ್'. ಅವರಿಗೆ ದೊಡ್ಡ ಸ್ಟಾರ್‌ಡಮ್ ತಂದುಕೊಟ್ಟ ಸಿನಿಮಾ 'ಫೂ ಮೊರಾ ಭೋಲಾ ಶಂಕರ್'.

    1979ರಲ್ಲಿಯೇ ನಟನೆ ಆರಂಭಿಸಿದ ಮಿಹಿರ್ ದಾದ್ 2019ರ ವರೆಗೆ 40 ವರ್ಷಗಳಲ್ಲಿ ನೂರಾರು ಒಡಿಯಾ ಸಿನಿಮಾಗಳಲ್ಲಿ, ನಾಟಕಗಳಲ್ಲಿ, ಧಾರವಾಹಿಗಳಲ್ಲಿ ನಟಿಸಿದ್ದಾರೆ. 'ಲಕ್ಷ್ಮಿ ಪ್ರತಿಮಾ', 'ಭಾಯ್ ಎಲಾ ಭಗರಿ', 'ಸ್ತ್ರೀ', 'ಬಿಜಿಗಲಾ ಅಖಿ ಲುಹರೇ', 'ಸೌಭಾಗ್ಯವತಿ', 'ಸೌಗಾ ಸಿಂಧೂರ್', 'ಭಾಜಿ', 'ಕೃಷ್ಣ-ಕಬೇರಿ', 'ನಾರಿ ನುಹೇನ್ ತು ನರಯಾನಿ', 'ದುಲ್ಹಾಯಿ ಎಕ್ಸ್‌ಪ್ರೆಸ್', 'ರಾಖಿ ಬಂದಿಲಿ ಮೋ ರಾಖಿ ಮಾನ', 'ಅಭಿಮನ್ಯು', 'ಮುನ್ ತತೆ ಲವ್ ಕರುಚಿ', 'ಸಿಸ್ಟರ್ ಶ್ರೀದೇವಿ', 'ಹೀರೋ ನಂಬರ್ 1', 'ಸುಂದರ್‌ಘರ್ ಸಲ್ಮಾನ್ ಖಾನ್' ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

    English summary
    Veteran Odia actor Mihir Das passed Away, Prime minister Narendra Modi and many express condolence.
    Wednesday, January 12, 2022, 11:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X