For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಹಿರಿಯ ನಟ ಜಗದೀಪ್ ನಿಧನ: ಕಂಬನಿ ಮಿಡಿದ ಚಿತ್ರರಂಗ

  |

  ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ. ಬಾಲಿವುಡ್ ಹಿರಿಯ ನಟ ಜಗದೀಪ್ ಕೊನೆಯುಸಿರೆಳೆದಿದ್ದಾರೆ. 81 ವರ್ಷದ ಜಗದೀಪ್ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಜಗದೀಪ್ ಅವರ ಮೂಲ ಹೆಸರು ಸಯ್ಯದ್ ಇಷ್ತಿಯಾಕ್ ಅಹ್ಮದ್ ಜಫ್ರಿ. ಆದರೆ ಜಗದೀಪ್ ಹೆಸರಿನಿಂದಲೆ ಖ್ಯಾತಿಗಳಿಸಿದ್ದಾರೆ.

  ಜಗದೀಪ್ ಅಮಿತಾಬ್ ಬಚ್ಚನ್ ಅವರ ಶೋಲೆ ಸಿನಿಮಾದಲ್ಲಿ ಸೂರ್ಮ ಭೋಪಾಲಿ ಪಾತ್ರದ ಮೂಲಕ ಜಗದೀಪ್ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಜಗದೀಪ್ ಬಾಲಕಲಾವಿದನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಬಿಮಲ್ ರಾಯ್ ಅವರ ದೋ ಬಿಘಾ ಜಮಿನ್, ಕೆಎ ಅಬ್ಬಾಸ್ ಮುನ್ನ ಮತ್ತು ಗುರು ದತ್ ಅವರ ಆರ್ ಪಾರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

  ಮತ್ತೊಂದು ಕೆಟ್ಟ ಸುದ್ದಿ: ಕನ್ನಡದ ಉದಯೋನ್ಮುಖ ನಟ ಸುಶೀಲ್ ಆತ್ಮಹತ್ಯೆ ಮತ್ತೊಂದು ಕೆಟ್ಟ ಸುದ್ದಿ: ಕನ್ನಡದ ಉದಯೋನ್ಮುಖ ನಟ ಸುಶೀಲ್ ಆತ್ಮಹತ್ಯೆ

  ಜಗದೀಪ್ ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ನಟನಾಗಿ ಖ್ಯಾತಿಗಳಿಸುವ ಜೊತೆಗೆ ಸಿನಿಮಾ ನಿರ್ದೇಶನ ಕೂಡ ಮಾಡಿದ್ದಾರೆ. 1988ರಲ್ಲಿ ಗಜದೀಪ್ ಶೋಲೆ ಸಿನಿಮಾದಲ್ಲಿ ಖ್ಯಾತಿಗಳಿಸಿದ್ದ ಸೂರ್ಮ ಭೋಪಾಲಿ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅವರೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


  ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಜಗದೀಪ್ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜಗದೀಪ್ ಕೊನೆಯ ಸಿನಿಮಾ 2012ರಲ್ಲಿ ರಿಲೀಸ್ ಆದ ಗಲಿ ಗಲಿ ಛೋರ್ ಹೈ. ಹಾಸ್ಯದ ಮೂಲಕ ಸಿನಿಪ್ರಿಯರನ್ನು ನಗಿಸುತ್ತಿದ್ದ ಜಗದೀಪ್ ಅಪಾರ ಸಂಖ್ಯೆ ಅಭಿಮಾನಿಗಳ ಮನಗೆದಿದ್ದರು.

  ಜಗದೀಪ್ ಪುತ್ರ ಜಾವೇದ್ ಜಫ್ರಿ, ನವೇದ್ ಜಫ್ರಿ ಮತ್ತು ಮೊಮ್ಮಗ ಮೀನಜ್ ಜಫ್ರಿ ಸಹ ನಟರು. ಜಗದೀಪ್ ನಿಧನಕ್ಕೆ ಅನೇಕರು ಕಂಬನಿ ಮಿಡಿಸಿದ್ದಾರೆ. ಅಜಯ್ ದೇವಗನ್, ಅನಿಲ್ ಕಪೂರ್ ಸೇರಿದ್ದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  English summary
  Veternals Actor Jagdeep passes away at the age 0f 81.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X