For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ದಿಗ್ಗಜ ನಟ ವಿನೋದ್ ಖನ್ನಾ ವಿಧಿವಶ

  By Bharath Kumar
  |

  ಬಾಲಿವುಡ್ ಹಿರಿಯ ನಟ ಹಾಗೂ ಬಿಜೆಪಿ ಸಂಸದ ವಿನೋದ್ ಖನ್ನಾ ಅವರು ವಿಧಿವಶರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳುತ್ತಿದ್ದ ವಿನೋದ್ ಖನ್ನಾ ಇಂದು (ಏಪ್ರಿಲ್ 27, ಗುರುವಾರ) ನಿಧನರಾಗಿದ್ದಾರೆ.

  ನಿರ್ಜಲೀಕರಣದಿಂದ ಬಳಲುತ್ತಿದ್ದ 70 ವರ್ಷದ ವಿನೋದ್ ಖನ್ನಾ ಅವರು ಮುಂಬೈನ ಸರ್ ಹೆಚ್'ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಚಿಕಿಕ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ವಿನೋದ್ ಖನ್ನಾ ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯರನ್ನು ಅಗಲಿದ್ದಾರೆ.

  'ಮೇರಾ ಆಪ್ನೆ', 'ಮೇರಾ ಗಾಂವ್ ಮೇರಾ ದೇಶ್', 'ಗಾದರ್', 'ಜೈಲು ಯಾತ್ರ', 'ಅಮರ್ ಅಕ್ಬರ್ ಆಂಥೋನಿ' ಚಿತ್ರಗಳು ಸೇರಿದಂತೆ 100ಕ್ಕೂ ಅಧಿಕ ಚಿತ್ರಗಳಲ್ಲಿ ವಿನೋದ್ ಖನ್ನಾ ಅಭಿನಯಿಸಿದ್ದಾರೆ. 1970-80ರ ದಶಕದಲ್ಲಿ ಹೆಚ್ಚು ಜನಪ್ರಿಯರಾಗಿದ್ದ ವಿನೋದ್ ಖನ್ನಾ ಪೋಷಕ ಪಾತ್ರ ಹಾಗೂ ಖಳನಾಯ ಪಾತ್ರಗಳಿಗೆ ಹೆಚ್ಚು ಖ್ಯಾತಿಗಳಿಸಿಕೊಂಡಿದ್ದರು.

  ಇನ್ನು 'ದಬಾಂಗ್', 'ಪ್ಲೇಯರ್', 'ದಬಾಂಗ್-2' ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದ ವಿನೋದ್ ಖನ್ನಾ ಕೊನೆಯದಾಗಿ ಶಾರುಖ್ ಖಾನ್ ಅಭಿನಯದ 'ದಿಲ್ವಾಲೆ' ಚಿತ್ರದಲ್ಲಿ ಅಭಿನಯಿಸಿದ್ದರು. ಇನ್ನು ವಿನೋದ್ ಖನ್ನಾ ಅವರ ಅತ್ಯುತ್ತಮ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ, ಮತ್ತು ಜೀವಮಾನ ಶ್ರೇಷ್ಠ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಲಭಿಸಿದೆ.

  English summary
  Veteran actor and sitting BJP MP Vinod Khanna passes away at the age of 70 on Thursday after a battle with cancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X