ಮದುವೆಯಾದ ನಾಲ್ಕೂವರೆ ವರ್ಷಗಳ ನಂತರ ಗರ್ಭಿಣಿಯಾದ ಕತ್ರಿನಾ ಕೈಫ್ ? ಈ ದಿನದಂದು ಮನೆಗೆ ಬರಲಿದೆ ಪುಟ್ಟ ಕಂದಮ್ಮ ?
ಕೇವಲ ಗ್ಲ್ಯಾಮರ್ ಮಾತ್ರ ಅಲ್ಲ ಅಭಿನಯದ ಗ್ರಾಮರ್ ಕೂಡ ಗೊತ್ತಿರಬೇಕು ಅನ್ನುವುದನ್ನೂ ಸಾಬೀತು ಮಾಡಿದವರು ಕತ್ರಿನಾ ಕೈಫ್. 1983ರಲ್ಲಿ ಅದೆಲ್ಲೋ ಹಾಂಗ್ ಕಾಂಗ್‌ನಲ್ಲಿ ಜನ್ಮ ಪಡೆದು, ಬಾಲಿವುಡ್‌ನಲ್ಲಿ ಹೆಸರು ಮಾಡಿದ ಕತ್ರಿನಾ ಕೈಫ್ ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದ್ಧಾರೆ. ಭಾರತದಲ್ಲಿಯೇ ಬಿಡಾರ ಹೂಡಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ. ಇಂಥಾ ಕತ್ರಿನಾ ಕೈಫ್ ಅವರಿಗೆ ಕಳೆದ ನಾಲ್ಕೂವರೆ ವರ್ಷಗಳಿಂದ...
ಹೋದಲ್ಲಿ..ಬಂದಲ್ಲಿ.. ಕುಂತಲ್ಲಿ.. ನಿಂತಲ್ಲಿ ಹಲವರು ಗುಡ್ ನ್ಯೂಸ್ ಯಾವಾಗ ಎನ್ನುವ ಪ್ರಶ್ನೆಯನ್ನೇ ಕೇಳುತ್ತಿದ್ದರು. ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನಗಳು ಕಳೆಯುತ್ತಿದ್ದಂತೆ ಕೇಳೋ ಪ್ರಶ್ನೆ ಮಕ್ಕಳ ಕುರಿತಾಗಿಯೇ.

ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಅತಿಯಾಗಿರುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಕತ್ರಿನಾ ಕೈಫ್ ತಾಯ್ತನದ ಸುಖ ಯಾವತ್ತು ಅನುಭವಿಸುತ್ತಾರೆ ಅನ್ನುವ ಚಿಂತೆಯನ್ನು ಹಲವರು ಮಾಡುತ್ತಿದ್ದರು. ಕಾಲ .. ಕಾಲಕ್ಕೆ .. ಸಾಮಾಜಿಕ ಜಾಲತಾಣದಲ್ಲಿ ನೀವು ಗರ್ಭಿಣಿನಾ..? ಎಂದು ನೇರವಾಗಿಯೇ ಪ್ರಶ್ನೆಯನ್ನು ಕೂಡ ಕೇಳುತ್ತಿದ್ದರು.
ಇಷ್ಟೇ ಅಲ್ಲ ಕಳೆದ ಮೇನಲ್ಲಿ ವಿಕ್ಕಿ ಜೊತೆ ಕ್ಯಾಟ್ ಲಂಡನ್ ಫ್ಲೈಟ್ ಹತ್ತಿದ್ದೇ ತಡ.. ಕತ್ರಿನಾ ಕೈಫ್ ಮಗು ಹುಟ್ಟುವುದು ಲಂಡನ್ ನಲ್ಲಿಯೇ ಎಂದು ಪುಕಾರು ಹಬ್ಬಿಸಿದ್ದರು. ಲಂಡನ್ ಬೀದಿಯಲ್ಲಿ ಕತ್ರಿನಾ ಮತ್ತು ವಿಕ್ಕಿ ಓಡಾಟವನ್ನೂ ಸೆರೆ ಹಿಡಿದು, ಕತ್ರಿಕಾ ಕೈಫ್ ಹಾವ-ಭಾವ-ನಡಿಗೆ ಮತ್ತು ಉಡುಗೆ ಎಲ್ಲವೂ ಬದಲಾಗಿದೆ, ನೋ ಡೌಟ್.. ಕತ್ರಿಕಾ ಕೈಫ್ ಗರ್ಭಿಣಿ ಎಂದರು. ಯಾವುದಕ್ಕೂ ಸಾಕ್ಷಿ ಇರಲಿ ಎಂದು ವಿಡಿಯೋವೊಂದನ್ನು ಕೂಡ ಹೆಕ್ಕಿ ತೆಗೆದಿದ್ದ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು ನಮಗೆ ಕಂಡಂತೆ ನಿಮಗೆಲ್ಲರಿಗೂ ಬೇಬಿ ಬಂಪ್ ಕಾಣಿಸುತ್ತಿದೆಯಾ ಎಂದು ಪ್ರಶ್ನೆಯನ್ನು ಕೂಡ ಕೇಳಿದ್ದರು.
ಈ ಪ್ರಶ್ನೆಗಳಿಗೆಲ್ಲಾ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವತ್ತು ಉತ್ತರ ನೀಡಿರಲಿಲ್ಲ. ಆದರೆ.. ಮೇನಲ್ಲಿ ಕತ್ರಿನಾ ಕೈಫ್ ಗರ್ಭಿಣಿಯಾದ ವಿಷಯವನ್ನು ಅನೇಕರು ಮನಸಿಗೆ ಹಚ್ಚಿಕೊಂಡಾಗ ಕತ್ರಿನಾ ಅವರ ಪ್ರತಿಯೊಂದು ಚಲನ ವಲನದ ಬಗ್ಗೆ ಮಾಧ್ಯಮಕ್ಕೆ ಮಾಹಿತಿಯನ್ನ ನೀಡುವ ರೈನ್‌ಡ್ರಾಪ್ ಸಂಸ್ಥೆ ಈ ಸುದ್ದಿಯನ್ನ ಅಲ್ಲಗೆಳೆದಿತ್ತು. ದೃಢೀಕರಿಸದ ವರದಿ ಮತ್ತು ಊಹಾಪೋಹಗಳನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ವಿನಂತಿಸಿಕೊಂಡಿತ್ತು.
ಹಾಗಂಥ ಈ ಚರ್ಚೆ ಇದೇ ಮೊದಲಾಗಿರಲಿಲ್ಲ. ಕಳೆದ ವರ್ಷದ ಜೂನ್‌ನಲ್ಲಿ ಕೂಡ ವಿಕ್ಕಿ ಕೌಶಲ್ ತಮ್ಮ ''ಬ್ಯಾಡ್ ನ್ಯೂಜ್'' ಚಿತ್ರದ ಪ್ರಚಾರ ಮಾಡುತ್ತಿದ್ದ ಸಮಯದಲ್ಲಿ ಕೂಡ ''ಗುಡ್ ನ್ಯೂಸ್'' ಯಾವಾಗ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ನಿಮ್ಮೆಲ್ಲರ ಜೊತೆ 'ಗುಡ್ ನ್ಯೂಸ್' ಹಂಚಿಕೊಳ್ಳಬೇಕೆಂಬ ಆಸೆ ನಮಗೂ ಕೂಡ ಇದೆ ಆದರೆ ಅದಕ್ಕಿನ್ನೂ ಸಮಯ ಕೂಡಿ ಬಂದಿಲ್ಲ. ಹಾಗೇನಾದರೂ ಇದ್ದರೆ ನಾನೇ ನಿಮ್ಮೆಲ್ಲರಿಗೆ ಹೇಳುತ್ತೇನೆ ಎಂದು ವಿಕ್ಕಿ ಕೌಶಲ್ ಹೇಳಿದ್ದರು.

ಆದರೆ ಈಗ ಮತ್ತೊಮ್ಮೆ ಕತ್ರಿನಾ ಕೈಫ್ ಗರ್ಭಿಣಿಯಾಗಿರುವ ವಿಚಾರ ಚರ್ಚೆಯಲ್ಲಿದೆ. ಈ ಬಾರಿ ಕೂಡ ವಿಕ್ಕಿ ಮತ್ತು ಕತ್ರೀನಾ ಉತ್ತರ ನೀಡದಿದ್ದರೂ ಕೂಡ ಸದ್ಯ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿಯಂತೂ ಉತ್ತರದಿಂದ ದಕ್ಷಿಣದವರೆಗೆ ಹಬ್ಬಿದೆ. ಇದಕ್ಕೆ ಪೂರಕವಾಗಿ ''NDTV'' ಕೂಡ ಈ ಕುರಿತು ವರದಿಯನ್ನು ಮಾಡಿದ್ದು ಅಕ್ಟೋಬರ್ ಅಥವಾ ನವೆಂಬರ್ ತಿಂಬಳಿನಲ್ಲಿ ಕತ್ರಿನಾ ಕೈಫ್ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಮಗು ಹುಟ್ಟಿದ ನಂತರ ಕತ್ರಿನಾ ಚಿತ್ರರಂಗದಿಂದ ದೂರ ಸರಿಯಲಿದ್ದಾರೆ,ಮಗುವಿನ ಆರೈಕೆಯನ್ನು ತಾವೇ ಖುದ್ದಾಗಿ ನೋಡಿಕೊಳ್ಳಲು ಕತ್ರಿನಾ ಬಯಸಿದ್ದಾರೆ ಎಂದು ಕೂಡ ''NDTV'' ತನ್ನ ವರದಿಯಲ್ಲಿ ತಿಳಿಸಿದೆ.


Click it and Unblock the Notifications











