ಅಭಿಮಾನಿಗಳ ಜೊತೆ ಗುಡ್ ನ್ಯೂಸ್ ಹಂಚಿಕೊಂಡ ವಿಕ್ಕಿ ಕೌಶಲ್- ಕತ್ರೀನಾ ದಂಪತಿ
ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಪತ್ನಿ ಕತ್ರೀನಾ ಕೈಫ್ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಕತ್ರೀನಾ ಗರ್ಭಿಣಿ ಆಗಿದ್ದಾರೆ ಎನ್ನುವ ಊಹಾಪೋಹ ಇತ್ತೀಚೆಗೆ ಕೇಳಿಬಂದಿತ್ತು. ಇದೀಗ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಮನೆಗೆ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿರುವುದಾಗಿ ದಂಪತಿ ಪೋಸ್ಟ್ ಮಾಡಿದ್ದಾರೆ.
4 ವರ್ಷಗಳ ಹಿಂದೆ ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರೀನಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಬಳಿಕ ಕ್ಯಾಟ್ ಸಿನಿಮಾಗಳಿಂದ ದೂರವೇ ಉಳಿದು ಬಿಟ್ಟರು. ಆದರೆ ವಿಕ್ಕಿ ಮಾತ್ರ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ದಂಪತಿ ಹಂಚಿಕೊಂಡ ಸಿಹಿಸುದ್ದಿ ಕೇಳಿ ಆಪ್ತರು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್, ಕಾಮೆಂಟ್ ಮಾಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಕತ್ರೀನಾ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದು ಫೋಟೊವನ್ನು ದಂಪತಿ ಹಂಚಿಕೊಂಡಿದ್ದಾರೆ. "ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯಗಳೊಂದಿಗೆ ಪ್ರಾರಂಭಿಸುವ ಹಾದಿಯಲ್ಲಿ. ಧನ್ಯವಾದಗಳು" ಎಂದು ಇಬ್ಬರೂ ಫೋಟೊಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಜೋಯಾ ಅಖ್ತರ್, ಭೂಮಿ ಪೆಡ್ನೇಕರ್, ಓರಿ, ಜಾನ್ವಿ ಕಪೂರ್, ಆಯುಷ್ಮಾನ್ ಖುರಾನಾ, ಸಿದ್ಧಾಂತ್ ಚತುರ್ವೇದಿ ಸೇರಿದಂತೆ ಹಲವರು ಇದಕ್ಕೆ ಪ್ರತಿಕ್ರಿಯಿಸಿ ಅಭಿನಂದನೆ ತಿಳಿಸಿದ್ದಾರೆ.
ಮದುವೆ ಬಳಿಕ ಕತ್ರೀನಾ ಕೈಫ್ 'ಫೋನ್ ಭೂತ್', 'ಟೈಗರ್- 3' ಹಾಗೂ 'ಮೇರಿ ಕ್ರಿಸ್‌ಮಸ್' ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆಗಾಗ್ಗೆ ಪತಿ ವಿಕ್ಕಿ ಜೊತೆ ಬಿಟೌನ್ ಕಾತರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ರೆಡ್ ಕಾರ್ಪೆಟ್‌ಗಳಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ.
2019ರ ಸ್ಕ್ರೀನ್ ಅವಾರ್ಡ್ಸ್ ವೇದಿಕೆಯಲ್ಲಿ ಮೊದಲ ಬಾರಿಗೆ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಭೇಟಿ ಆಗಿದ್ದರು. ಅಲ್ಲೇ ತಮಾಷೆಗಾಗಿ ಪ್ರಪೋಸ್ ಮಾಡಿದ್ದರು. ಆದರೆ ಅದೆಲ್ಲಾ ಸ್ಕ್ರಿಪ್ಟೆಡ್ ಆಗಿತ್ತು. ಬಳಿಕ ನಿತಾ ಅಂಬಾನಿ ಮನೆಯ ಹೋಳಿ ಪಾರ್ಟಿಯಲ್ಲಿ ಇಬ್ಬರೂ ಭೇಟಿ ಆಗಿದ್ದರು. ಬಳಿಕ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯಲ್ಲಿ ಕೂಡ ಭೇಟಿಯಾಗಿ ಮಾತನಾಡುವಂತಾಗಿತ್ತು. ಮೊದಲೇ ವಿಕ್ಕಿಗೆ ಕತ್ರೀನಾ ಸೆಲೆಬ್ರೆಟಿ ಕ್ರಶ್ ಆಗಿದ್ದರು.
ಆರಂಭದಲ್ಲಿ ಬಾಲಿವುಡ್ ಸೆಲೆಬ್ರೆಟಿಗಳ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಅಚಾನಕ್ ಆಗಿ ಇಬ್ಬರೂ ಭೇಟಿ ಆಗುತ್ತಿದ್ದರು. ನಂತರ ವಿಕ್ಕಿ-ಕ್ಯಾಟ್ ನಡುವೆ ಸ್ನೇಹ ಶುರುವಾಗಿತ್ತು. ಮುಂದೆ ಒಟ್ಟೊಟ್ಟಿಗೆ ಸುತ್ತಾಡಲು ಶುರು ಮಾಡಿದ್ದರು. ಕೆಲ ದಿನಗಳ ಕಾಲ ಈ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಆದರೆ ಬಹಳ ದಿನ ಅದು ಗುಟ್ಟಾಗಿ ಉಳಿಯಲಿಲ್ಲ.
2021ರಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾ ಹೋಟೆಲ್‌ನಲ್ಲಿ ವಿಕ್ಕಿ- ಕತ್ರೀನಾ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಚಿತ್ರರಂಗದ ಗಣ್ಯರು, ಎರಡೂ ಕುಟುಂಬಗಳ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರಕಾರ ಮದುವೆ ನಡೆದಿತ್ತು. ಅಂದಹಾಗೆ ಕತ್ರೀನಾ ತಂದೆ ಮೊಮ್ಮದ್ ಕೈಫ್ ಮೂಲತಃ ಕಾಶ್ಮೀರಿ. ತಾಯಿ ಸುಸಾನ ಕ್ರೈಸ್ತ ಮತದವರಾಗಿ ಲಂಡನ್ ಮೂಲದವರು. ಇನ್ನು ಕತ್ರೀನಾ ಹಾಂಕಾಂಗ್‌ನಲ್ಲಿ ಹುಟ್ಟಿದಾಕೆ.
ಚಿಕ್ಕ ವಯಸ್ಸಿನಲ್ಲೇ ಕತ್ರೀನಾ ಕೈಫ್ ಮಾಡೆಲಿಂಗ್ ಆರಂಭಿಸಿದ್ದರು. ಬಳಿಕ ಮಾಡೆಲಿಂಗ್ ಮುಂದುವರೆಸಲು ಲಂಡನ್‌ಗೆ ತೆರಳಿದ್ದರು. ಬಳಿಕ ಭಾರತಕ್ಕೆ ಬಂದು ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಆರಂಭದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಆಕೆ ಮಿಂಚಿದ್ದರು. ಬಳಿಕ ಕೆಲ ಪವರ್‌ಫುಲ್ ಪಾತ್ರಗಳು ಸಿಕ್ಕವು.


Click it and Unblock the Notifications











