ಕತ್ರಿನಾ-ವಿಕ್ಕಿ ಮದುವೆ: ಆಮಂತ್ರಣ ನೀಡಿ ಷರತ್ತಿಗೆ ಸಹಿ ಹಾಕಿಸಿಕೊಂಡ ಜೋಡಿ

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಹೆಚ್ಚು ಸಂಚಲನ ಮೂಡಿಸುತ್ತಿದೆ. ಪ್ರತಿ ನಿತ್ಯ ಇವರ ಮದುವೆ ಕುರಿತಾಗಿ ಒಂದಲ್ಲಾ ಒಂದು ವಿಚಾರಗಳು ಹೊರ ಬರುತ್ತಿದೆ. ಡಿಸೆಂಬರ್‌ನಲ್ಲಿ ಈ ಜೋಡಿ ಮದುವೆ ಆಗಲಿದೆ ಎನ್ನುವುದು ಬಹುತೇಕ ಖಚಿತ ಆಗಿದೆ.

ಇನ್ನೂ ಈಗಾಗಲೇ ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್‌ ಮದುವೆ ಎಲ್ಲಿ ನಡೆಯಲಿದೆ, ಹೇಗೆ ನಡೆಯಲಿದೆ ಎನ್ನುವ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿವೆ.

ಈಗ ಕತ್ರಿನಾ ಮತ್ತು ವಿಕ್ಕಿ ಕೌಶಲ್ ರಿಜಿಸ್ಟರ್‌ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ಜೋಡಿ ಅದ್ದೂರಿಯಾದ ಸಾಂಪ್ರದಾಯಿಕ ಮದುವೆಗೂ ಮುನ್ನ ತಮ್ಮ ಮದುವೆಯನ್ನು ನೊಂದಣಿ ಮಾಡಿಸಲು ಮುಂದಾಗಿದೆ.

ಇಂದೇ ನಡೆಯಲಿದೆ ವಿಕ್ಕಿ-ಕತ್ರಿನಾ ಮದುವೆ ನೊಂದಣಿ?

ಇಂದೇ ನಡೆಯಲಿದೆ ವಿಕ್ಕಿ-ಕತ್ರಿನಾ ಮದುವೆ ನೊಂದಣಿ?

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಮದುವೆಯ ನೊಂದಣಿ ಶುಕ್ರವಾರ(ಡಿಸೆಂಬರ್ 3) ನಡೆಯಲಿದೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿದೆ. ರಾಜಸ್ಥಾನದಲ್ಲಿ ಅದ್ದೂರಿ ಮದುವೆ ಆಗುವುದಕ್ಕೂ ಮೊದಲು ಈ ಜೋಡಿ ಕೋರ್ಟ್ ಮ್ಯಾರೇಜ್ ಆಗಲು ನಿರ್ಧರಿಸಿದೆ. ಹಾಗಾಗಿ ತಮ್ಮ ಮದುವೆಯನ್ನು ನೊಂದಣಿ ಮಾಡಲು ಮುಂಬೈನಲ್ಲಿ ಸಕಲ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ. ನಂತರ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ.

ಮದುವೆಗೆ ಆಹ್ವಾನದ ಜೊತೆಗೆ ಅತಿಥಿಗಳಿಗೆ ಷರತ್ತು!

ಮದುವೆಗೆ ಆಹ್ವಾನದ ಜೊತೆಗೆ ಅತಿಥಿಗಳಿಗೆ ಷರತ್ತು!

ಇನ್ನು ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆ ಎಲ್ಲರಂತಲ್ಲ. ತೀರಾ ಖಾಸಗಿ ಆಗಿ ಮದುವೆ ಸಂಭ್ರಮ ನಡೆಯುತ್ತಿದೆ. ಹಾಗಾಗಿ ಮದುವೆ ಬಗ್ಗೆ ಎಲ್ಲಿ ಏನೇ ಸುದ್ದಿ ಬಂದರೂ ಅದರ ಬಗ್ಗೆ ಈ ಜೋಡಿ ಬಾಯಿ ಬಿಡುತ್ತಿಲ್ಲ. ಜೊತೆಗೆ ಮದುವೆಗೆ ಆಹ್ವಾನಿತವಾದ ಸಿನಿಮಾದವರೂ ಕೂಡ ಈ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಮದುವೆ ವಿಚಾರವಾಗಿ ಎಲ್ಲಿಯೂ ಮಾಹಿತಿ ನೀಡದಂತೆ ಆಹ್ವಾನ ನೀಡಿದ ಅತಿಥಿಗಗಳಿಗೂ ಷರತ್ತು ವಿಧಿಸಿದೆಯಂತೆ ಈ ಜೋಡಿ.

ಮದುವೆಗೆ ಬರುವ ಅತಿಥಿಗಳಿಗೆ ಹತ್ತು ಹಲವು ಷರತ್ತುಗಳನ್ನು ವಿಧಿಸಲಾಗಿದ್ದು, ಈ ಬಗ್ಗೆ ಬಾಲಿವುಡ್‌ ಅಂಗಳದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಅಷ್ಟಕ್ಕೂ ಆ ಷರತ್ತುಗಳೇನು ಎಂಬ ಕುತೂಹಲ ಇದ್ದೇ ಇರುತ್ತದೆ.

ಕ್ರತಿನಾ-ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಇರುವ ಷರತ್ತುಗಳಿವು!

ಕ್ರತಿನಾ-ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಇರುವ ಷರತ್ತುಗಳಿವು!

. ಮದುವೆಯ ಹಾಜರಾತಿಯನ್ನು ಬಹಿರಂಗ ಪಡಿಸುವಂತೆ ಇಲ್ಲ.

. ಫೋಟೋ ತೆಗೆಯಲು ಅವಕಾಶ ಇಲ್ಲ.

. ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಹಾಗಿಲ್ಲ.

. ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸ್ಥಳವನ್ನು ಹಂಚಿಕೊಳ್ಳುವಂತಿಲ್ಲ.

. ಮದುವೆ ತಾಣದಲ್ಲಿ ಇರುವ ತನಕ ಹೊರಗಿನವರ ಜೊತೆಗೆ ಸಂಪರ್ಕ ಹೊಂದುವಂತೆ ಇಲ್ಲ.

. ಮದುವೆ ಆಯೋಜಕರ ಸಮ್ಮತಿ ಬಳಿಕವೇ ಮದುವೆಯ ಫೋಟೊಗಳನ್ನು ಹಂಚಿಕೊಳ್ಳಬೇಕು.

. ಮದುವೆ ತಾಣದಲ್ಲಿ ವಿಡಿಯೋ ಮತ್ತು ರೀಲ್ಸ್ ಮಾಡುವಂತಿಲ್ಲ.

. ಮದುವೆ ತಾಣದಲ್ಲಿ ನಿಗದಿತ ಸಮಯದ ವರೆಗೂ ಮೊಬೈಲ್ ನಿಷೇಧ.

. ಅತಿಥಿಗಳು ಸೀಕ್ರೆಟ್ ಕೋಡ್ ಪಡೆದುಕೊಳ್ಳಬೇಕು.


ಸದ್ಯಕ್ಕೆ ಇಷ್ಟು ಷರತ್ತುಗಳನ್ನು ಹಾಕಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಲಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಈ ಷರತ್ತುಗಳ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ.

ಡಿಸೆಂಬರ್ 7 ರಿಂದ 9 ಅದ್ಧೂರಿ ಮದುವೆ!

ಡಿಸೆಂಬರ್ 7 ರಿಂದ 9 ಅದ್ಧೂರಿ ಮದುವೆ!

ಇನ್ನು ಈ ತಾರ ಜೋಡಿ ಮದುವೆಯಲ್ಲಿ ಕೆಲವೇ ಕೆಲವು ಮುಖ್ಯ ಅತಿಥಿಗಳು ಭಾಗಿ ಆಗಲಿದ್ದಾರೆ. ಮದುವೆಯ ಬಳಿಕ ಮುಂಬೈನಲ್ಲಿ ಆರತಕ್ಷತೆ ನಡೆಯಲಿದ್ದು, ಎಲ್ಲರಿಗೂ ಆಹ್ವಾನ ಇರಲಿದೆಯಂತೆ. ಸದ್ಯಕ್ಕೆ ಕತ್ರಿನಾ ಮತ್ತು ವಿಕ್ಕಿ ಮದುವೆ ವಿಚಾರವಾಗಿ ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಲಿವೆ. ಆದರೆ ಮದುವೆ ಬಗ್ಗೆ ಇಬ್ಬರೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಾಗಿ ಡಿಸೆಂಬರ್ 7ರ ವರೆಗೂ ಕಾಯಲೇಬೇಕಾಗಿದೆ.

More from Filmibeat

English summary
Vicky Kaushal and Katrina Kaif's court wedding is happening today Details inside, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X