ಫಿಕ್ಸ ಆಯ್ತು ಕತ್ರೀನಾ-ವಿಕ್ಕಿ ನಟಿಸಲಿರುವ ಮೊದಲ ಸಿನಿಮಾ! ಇವರಿಬ್ಬರ ಪಾತ್ರ ಹೇಗಿರಲಿದೆ?

ಕತ್ರೀನಾ ಮತ್ತು ವಿಕ್ಕಿ ಕೌಶಲ್ ಜೋಡಿ ಈಗ ಎಲ್ಲೆಲ್ಲೂ ಟ್ರೆಂಡಿಂಗ್‌ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ಲವ್ ಸ್ಟೋರಿ ಬಗ್ಗೆ, ಇವರಿಬ್ಬರ ಸಿನಿಮಾಗಳ ಬಗ್ಗೆ, ಹಾಗೇ ಇವರಿಬ್ಬರಲ್ಲಿ ಯಾರಿಗೆ ಹೆಚ್ಚು ಆಸ್ತಿ ಇದೆ ಎಂಬ ಬಗ್ಗೆ ಹುಡುಕಾಟಗಳು ಜೋರಾಗಿದೆ. ಇದಿಷ್ಟೇ ಅಲ್ಲದೇ ಕ್ಯಾಟ್ ಮತ್ತು ವಿಕ್ಕಿ ಮದುವೆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿತ್ತು.

Recommended Video

ಕತ್ರೀನಾ-ವಿಕ್ಕಿ ಹೊಸ ಮನೆಯ ಬಾಡಿಗೆ ವಿಚಾರ ಭಾರಿ ಸುದ್ದಿಯಾಗುತ್ತಿದೆ.

ಬಹಳ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ ಮತ್ತು ವಿಕ್ಕಿ ಮದುವೆ ನೆರವೇರಿದೆ.ಇದೀಗ ಈ ಜೋಡಿಯ ಬಗ್ಗೆ ಅಭಿಮಾನಿಗಳು ಇವರಿಬ್ಬರು ಒಟ್ಟಿಗೆ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ವಿಕ್ಕಿಯನ್ನು ಪ್ರಶ್ನೆ ಕೂಡ ಮಾಡುತ್ತಿದ್ದಾರೆ.

ಆಬಿಮಾನಿಗಳ ಆಸೆ ಏನಿದೆ ಅದು ಆದಷ್ಟು ಬೇಗ ಈಡೇರುವ ಮುನದಸೂಚನೆ ಸಿಗುತ್ತಿದೆ. ಬಾಲಿವುಡ್‌ ಅಂಗಳದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭ ವಾಗಿದ್ದು, ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಕತ್ರೀನಾ ಅಭಿನಯದ ಸಿನಿಮಾದಲ್ಲಿ ವಿಕ್ಕಿ ಕೂಡ ಬಣ್ಣ ಹಚ್ಚಲಿರುವ ಸುದ್ದಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಹಾಗಿದ್ರೆ ಈ ಸುದ್ದಿ ನಿಜಾನಾ? ಯಾವ ಸಿನಿಮಾದಲ್ಲಿ ಇವರಿಬ್ಬರು ನಟಿಸುತ್ತಾರೆ ಮುಂದೆ ಓದಿ

ಒಟ್ಟಿಗೆ ನಟಿಸಲಿರುವ ಸಿನಿಮಾ ಯಾವುದು ಗೊತ್ತಾ?

ಒಟ್ಟಿಗೆ ನಟಿಸಲಿರುವ ಸಿನಿಮಾ ಯಾವುದು ಗೊತ್ತಾ?

ಬಾಲಿವುಡ್ ನಿರ್ಮಾಪಕ ಹಾಗೂ ನಟ ಫರ್ಹಾನ್ ಅಖ್ತರ್ ಕಳೆದ ವರ್ಷವೇ ತಮ್ಮ ನಿರ್ದೇಶನದ 'ಜೀ ಲೇ ಜರಾ' ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿರಲಿದ್ದು, ಬಾಲಿವುಡ್‌ನ ಟಾಪ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸುದ್ದಿ ಮೂಲಕವೇ ಈ ಸಿನಿಮಾ ಭಾರೀ ನಿರೀಕ್ಷೆಯನ್ನು ಬೆಳೆಸಿದೆ. ಹಾಗೆ ಈ ಸಿನಿಮಾ ಮೂವರು ಹುಡುಗಿಯರ ಕನಸಾದ ರೋಡ್ ಟ್ರಿಪ್ ಬಗ್ಗೆ ಇರಲಿದೆ.

ವಿಕ್ಕಿ ಕೌಶಲ್ ನೀಡ್ತಾರ ಗ್ರೀನ್ ಸಿಗ್ನಲ್ !

ವಿಕ್ಕಿ ಕೌಶಲ್ ನೀಡ್ತಾರ ಗ್ರೀನ್ ಸಿಗ್ನಲ್ !

'ಜೀ ಲೇ ಜರಾ' ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದಲ್ಲಿ ಇಬ್ಬರು ನಟರು ಕೂಡ ಇರಲಿದ್ದಾರೆ. ಆ ಪಾತ್ರಗಳಿಗೆ ನಟರ ಹುಡುಕಾಟ ನಡೆಸುತ್ತಿದೆ ಚಿತ್ರತಂಡ, ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ವಿಕ್ಕಿ ಕೌಶಲ್ ಅವರ ಹೆಸರು ಕೇಳಿಬರುತ್ತಿದ್ದು, ವಿಕ್ಕಿ ಈ ಪಾತ್ರಕ್ಕೆ ಸೂಕ್ತರಾಗುತ್ತಾರೆ , ಹೀಗಾಗಿ ಅವರನ್ನೆ ಚಿತ್ರದಲ್ಲಿ ನಟಿಸುವಂತೆ ವಿಕ್ಕಿ ಕೌಶಲ್ ಬಳಿ ಚಿತ್ರತಂಡ ಈಗಾಗಲೇ ಮಾತುಕತೆ ಕೂಡ ನಡೆಸಿದೆ ಎನ್ನಲಾಗುತ್ತಿದೆ. ಇನ್ನು ಈ ಚಿತ್ರದ ನಿರ್ದೇಶಕ ಫರ್ಹಾನ್ ಅಖ್ತರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರತಂಡ ಈ ಬಗ್ಗೆ ಹೇಳುತ್ತಿರೋದು ಏನು ?

ಚಿತ್ರತಂಡ ಈ ಬಗ್ಗೆ ಹೇಳುತ್ತಿರೋದು ಏನು ?

ಒಂದು ವೇಳೆ ವಿಕ್ಕಿ ಕೌಶಲ್ ಈ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದೇ ಆದರೇ ಕತ್ರೀನಾ ಮತ್ತು ವಿಕ್ಕಿ ಕೌಶಲ್ ಅಭಿನಯದ ಮೊದಲ ಸಿನಿಮಾ ಇದು ಆಗಲಿದೆ. ಹಾಗೇ ಈ ಸಿನಿಮಾದಲ್ಲಿ ನಟಿ ಕತ್ರೀನಾ ಕೈಫ್ ಅವರ ಜೋಡಿಯಾಗಿ ವಿಕ್ಕಿ ಪಾತ್ರ ಇರಲಿದೆ. ಹೀಗಾಗಿ ಚಿತ್ರತಂಡವು ವಿಕ್ಕಿ ಅವರನ್ನು ಕರೆತರಲು ಪ್ರಯತ್ನಿಸುತ್ತಿದೆ. ಇವರಿಬ್ಬರು ಒಟ್ಟಿಗೆ ನಟಿಸಿದರೇ ಸಿನಿಮಾಗೆ ಒಳ್ಳೆ ಪ್ರಚಾರ ಸಿಕ್ಕಂತೆ ಆಗುತ್ತೆ. ಹಾಗೂ ಕತ್ರೀನಾ ವಿಕ್ಕಿ ಅಭಿಮಾನಿಗಳು ಸೇರಿದಂತೆ ಪ್ರಿಯಾಂಕ ಮತ್ತು ಆಲಿಯಾ ಭಟ್ ಅಭಿಮಾನಿಗಳು ಸಹಸ್ರಾರು ಮಂದಿ ಇರೋದ್ರಿಂದ ಸಿನಿಮಾ ಹಿಟ್ ಆಗುತ್ತೆ ಅನ್ನುವ ಲೆಕ್ಕಾಚಾರಗಳು ಇರಬಹುದಾಗಿದೆ.

ಯಾವಾಗ ರಿಲೀಸ್ ಆಗುತ್ತೆ ಸಿನಿಮಾ ?

ಯಾವಾಗ ರಿಲೀಸ್ ಆಗುತ್ತೆ ಸಿನಿಮಾ ?

ಇನ್ನು ಈ ಹಿಂದೆ ಜೀ ಲೇ ಜರಾ ಸಿನಿಮಾದ ಬಗ್ಗೆ ಫರಾನ್ ಅಖ್ತರ್ ಮಾತನಾಡಿ "ಜೀ ಲೇ ಜರಾ ಕತೆಯನ್ನು ಜೋಯಾ ಅಖ್ತರ್, ರೀಮಾ ಕಾಗ್ತಿ ಮತ್ತು ನಾನು ಬರೆದಿದ್ದೇನೆ. ಹೆಣ್ಣುಮಕ್ಕಳ ನೋಟದ ಮೂಲಕ ಜಗತ್ತನ್ನು ನೋಡುವ ಪ್ರಯತ್ನವಾಗಿ ಜೀ ಲೇ ಜರಾ ಚಿತ್ರ ಅದ್ಭುತವಾಗಿ ಮೂಡಿಬರಲಿದೆ. ಜೀ ಲೇ ಜರಾ ಸಿನಿಮಾ ಸಂಪೂರ್ಣ ರೋಡ್ ಟ್ರಿಪ್ ಚಿತ್ರವಾಗಿ ಮೂಡಿಬರಲಿದ್ದು, ಬ್ಯೂಟಿಫುಲ್ ಲೊಕೇಶನ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.ಜೀ ಲೇ ಜರಾ ಸಿನಿಮಾ ಸಂಪೂರ್ಣವಾಗಿ ಮೂವರು ಮಹಿಳಾ ನಾಯಕಿಯರ ಸುತ್ತ ಕೇಂದ್ರೀಕೃತವಾಗಿರುತ್ತದೆ. 2023 ರಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಹಾಗೇ ಈ ಚಿತ್ರದ ಮೂಲಕ ಆಲಿಯಾ ಭಟ್, ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಮೊದಲ ಬಾರಿಗೆ ಸೇರಿದ್ದು, ನೋಡುಗರನ್ನು ಖಂಡಿತಾ ಮೆಚ್ಚಿಸುತ್ತಾರೆ' ಎಂದಿದ್ದರು.

More from Filmibeat

English summary
Vicky Kaushal Approached For A Role Opposite Katrina Kaif? To Make Their First On-Screen Appearance As Couple?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X