ವಿಕ್ಕಿ ಜೊತೆ ಕತ್ರಿನಾ ಎಂಗೇಜ್‌ಮೆಂಟ್: Filmibeatಗೆ ವಿಕ್ಕಿ ತಂದೆ ಸ್ಪಷ್ಟನೆ

ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್ ಪ್ರೀತಿ ವಿಚಾರ ಈಗ ತೆರೆದ ಪುಸ್ತಕ. ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎನ್ನುವುದು ಈಗ ಬಿಟೌನ್ ಗಲ್ಲಿ ಗಲ್ಲಿಯಲ್ಲೂ ತಿಳಿದಿದೆ. ಒಟ್ಟಿಗೆ ಪಾರ್ಟಿ, ಹಾಲಿಡೇ ಎಂಜಾಯ್ ಮಾಡುವುದು, ಒಬ್ಬರ ಮನೆಗೆ ಇನ್ನೊಬ್ಬರು ಹೋಗುವುದು ಎಲ್ಲವೂ ಸಹಜವಾಗಿ ನಡೆಯುತ್ತಿದೆ. ಇವರ ಆತ್ಮೀಯತೆ ನೋಡಿದ್ರೆ ಇಬ್ಬರು ಅದಾಗಲೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

ಕಳೆದ ಎರಡ್ಮೂರು ದಿನಗಳಿಂದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದೆ. ಇತ್ತೀಚಿಗಷ್ಟೆ ನಡೆದಿರುವ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪರಸ್ಪರ ಉಂಗುರ ಬದಲಿಸಿಕೊಂಡಿದ್ದು, ಕೇವಲ ಕುಟುಂಬದವರು ಮತ್ತು ಕೆಲವೇ ಕೆಲವು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು ಎಂಬ ವರದಿಗಳು ಹರಿದಾಡಿದೆ. ಆದರೆ, ಯಾವುದೇ ಪುರಾವೆಗಳು ಸಿಕ್ಕಿಲ್ಲ.

ಈ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ಫಿಲ್ಮಿಬಿಟ್ ಹಿಂದಿ ತಂಡ ವಿಕ್ಕಿ ಕೌಶಲ್ ಅವರ ತಂದೆಯನ್ನು ಸಂಪರ್ಕಿಸಿದಾಗ ಇದು 'ವದಂತಿ ಅಷ್ಟೇ' ಎಂದು ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ....

ನಿಶ್ಚಿತಾರ್ಥ ಸುದ್ದಿ ಸುಳ್ಳು

ನಿಶ್ಚಿತಾರ್ಥ ಸುದ್ದಿ ಸುಳ್ಳು

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯನ್ನು ಎರಡು ಕುಟುಂಬದವರು ನಿರಾಕರಿಸಿದ್ದಾರೆ. ಈ ಬಗ್ಗೆ ವಿಕ್ಕಿ ಕೌಶಲ್ ತಂದೆ ಫಿಲ್ಮಿಬೀಟ್‌ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮತ್ತೊಂದೆಡೆ ಕತ್ರಿನಾ ಕೈಫ್ ಮನೆಯವರು ಸಹ ಈ ಎಂಗೇಜ್‌ಮೆಂಟ್ ಸುದ್ದಿಯನ್ನು ವಂದತಿ ಎಂದಿದ್ದಾರೆ. ಇಬ್ಬರು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇಬ್ಬರು ಕೇರ್ ಮಾಡಲ್ಲ

ಇಬ್ಬರು ಕೇರ್ ಮಾಡಲ್ಲ

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ನಿಶ್ಚಿತಾರ್ಥದ ಬಗ್ಗೆ ಪದೇ ಪದೇ ಸುದ್ದಿಗಳು ಹರಿದಾಡುತ್ತಿದೆ. ಇದ್ಯಾವುದಕ್ಕೂ ಇಬ್ಬರು ತಲೆಕೆಡಿಸಿಕೊಂಡಿಲ್ಲ. ಎಲ್ಲಿಯೂ ಈ ವದಂತಿಗಳ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಈಗಲೂ ಈ ಕುರಿತು ಅವರಿಬ್ಬರು ಮಾತನಾಡಲ್ಲ ಎಂದು ಆಪ್ತವಲಯದಲ್ಲಿರುವ ಹೇಳುತ್ತಿದ್ದಾರೆ. ಇನ್ನು ಸಂಬಂಧದ ಬಗ್ಗೆಯೂ ಯಾರೂ ಅಧಿಕೃತಗೊಳಿಸುತ್ತಿಲ್ಲ ಎನ್ನುವುದು ಇಷ್ಟೆಲ್ಲಾ ಚರ್ಚೆಗೆ ಕಾರಣ ಆಗ್ತಿದೆ.

ಮದುವೆ ಬಗ್ಗೆ ಸುಳಿವು ಕೊಟ್ಟಿದ್ದ ಡಿಸೈನರ್

ಮದುವೆ ಬಗ್ಗೆ ಸುಳಿವು ಕೊಟ್ಟಿದ್ದ ಡಿಸೈನರ್

ಇತ್ತೀಚಿಗಷ್ಟೆ ಸಲ್ಮಾನ್ ಖಾನ್ ಡಿಸೈನರ್ ಆಶ್ಲೆ ರೆಬೆಲ್, ಕತ್ರಿನಾ ಮದುವೆಯ ಸುಳಿವು ನೀಡಿದ್ದರು. ಮದುಮಗಳ ಹಾಗ ಡ್ರೆಸ್ ಮಾಡಿಕೊಂಡಿದ್ದ ಕತ್ರಿನಾ ಫೋಟೋ ಶೇರ್ ಮಾಡಿ 'ಆದಷ್ಟು ನಡೆಯಲಿ' ಎಂದು ಹೇಳಿದ್ದರು. ಇನ್ನು ಕತ್ರಿಕಾ ನಿಶ್ಚಿತಾರ್ಥ ಆಗಿದೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೆ 'ಕ್ಷಮಿಸಿ ಸಲ್ಮಾನ್ ಖಾನ್'' ಎಂದು ನೆಟ್ಟಿಗರು ಸಲ್ಲು ಭಾಯ್‌ನ ಟ್ರೋಲ್ ಮಾಡಿದರು.

ರಷ್ಯಾಗೆ ಹೊರಟ ಕತ್ರಿನಾ ಕೈಫ್

ರಷ್ಯಾಗೆ ಹೊರಟ ಕತ್ರಿನಾ ಕೈಫ್

ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ ಸುದ್ದಿ ಜೋರಾಗಿ ಸದ್ದು ಮಾಡ್ತಿದ್ರೆ, ಆ ಕಡೆ ಟೈಗರ್ 3 ಸಿನಿಮಾದಲ್ಲಿ ಕತ್ರಿನಾ ಬ್ಯುಸಿ ಇದ್ದಾರೆ. ಟೈಗರ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಾಯಕಿಯಾಗಿ ನಟಿಸುತ್ತಿರುವ ಕತ್ರಿನಾ ಅದಾಗಲೇ ಶೂಟಿಂಗ್ ಶುರು ಮಾಡಿದ್ದಾರೆ. ಆಗಸ್ಟ್ 18ರಂದು ರಷ್ಯಾಗೆ ಪ್ರಯಾಣ ಮಾಡಿರುವ ಚಿತ್ರತಂಡ ಸುಮಾರು 45 ದಿನಗಳ ಕಾಲ ವಿದೇಶದಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ರಷ್ಯಾದಲ್ಲಿ ಮಾತ್ರವಲ್ಲದೇ ಆಸ್ಟ್ರಿಯಾ, ಟರ್ಕಿ ಸೇರಿದಂತೆ ಇತರೆ ಐದು ದೇಶಗಳಲ್ಲಿ ಟೈಗರ್ 3 ಶೂಟಿಂಗ್ ನಡೆಯಲಿದೆ. ಮೊದಲ ಹಂತವಾಗಿ ರಷ್ಯಾದಲ್ಲಿ ಪ್ಲಾನ್ ಮಾಡಲಾಗಿದೆ ಎಂದು ನಿರ್ಮಾಪಕ ಆದಿತ್ಯ ಚೋಪ್ರಾ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

More from Filmibeat

English summary
Bollywood actors Vicky Kaushal father Father Sham Kaushal reacts to actor's Secret engagement rumours with katrina kaif.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X