ಕತ್ರೀನಾ ಟವೆಲ್ ಫೈಟ್: ಪತಿ ವಿಕ್ಕಿ ಕೌಶಲ್ ರಿಯಾಕ್ಷನ್ ವೈರಲ್
ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ನಟನೆಯ 'ಟೈಗರ್-3' ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿದೆ. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡದಾಗಿ ಕಲೆಕ್ಷನ್ ಮಾಡಿಲ್ಲ. ಇನ್ನು ಚಿತ್ರದಲ್ಲಿ ಕತ್ರೀನಾ ಟವೆಲ್ ಫೈಟ್ ಹೈಲೆಟ್ ಆಗಿತ್ತು. ಈ ಸೀನ್ ಬಗ್ಗೆ ಕತ್ರೀನಾ ಪತಿ ನಟ ವಿಕ್ಕಿ ಕೌಶಲ್ ಪ್ರತಿಕ್ರಿಯಿಸಿದ್ದಾರೆ.
ಸದ್ಯ ವಿಕ್ಕಿ ಕೌಶಲ್ ನಟನೆಯ 'ಸಾಮ್ ಬಹದೂರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಮೋಷನ್‌ನಲ್ಲಿ ವಿಕ್ಕಿ ಬ್ಯುಸಿಯಾಗಿದ್ದಾರೆ. ಮೇಘನಾ ಗುಲ್ಜರ್ ನಿರ್ದೇಶನದ ಈ ಸಿನಿಮಾ ಶುಕ್ರವಾರ ತೆರೆಗೆ ಬರ್ತಿದೆ. ಚಿತ್ರದಲ್ಲಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಆಗಿ ವಿಕ್ಕಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

1971ರ ಇಂಡೋ-ಪಾಕ್ ಯುದ್ಧದ ಹಿನ್ನೆಲೆಯಲ್ಲಿ 'ಸಾಮ್ ಬಹದೂರ್' ಸಿನಿಮಾ ಕತೆ ಸಾಗುತ್ತದೆ. ಆ ಯುದ್ಧದಲ್ಲಿ ಭಾರತೀಯ ಸೈನ್ಯದ ಮುಂದಾಳತ್ವ ವಹಿಸಿದ್ದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಪಾತ್ರ ಚಿತ್ರದಲ್ಲಿ ಹೈಲೆಟ್ ಆಗಿದೆ. 55 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. 'ಉರಿ' ಬಳಿಕ ವಿಕ್ಕಿ ಕೌಶಲ್‌ಗೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ.
ಇನ್ನು ಸಿನಿಮಾ ಪ್ರಚಾರದ ಸಮಯದಲ್ಲಿ ಪತ್ನಿ ಕತ್ರೀನಾ ನಟನೆಯ ಟೈಗರ್-3 ಸಿನಿಮಾ ನೋಡಿದ ವಿಚಾರವನ್ನು ವಿಕ್ಕಿ ಹಂಚಿಕೊಂಡಿದ್ದಾರೆ. "ನಾವಿಬ್ಬರು ಒಟ್ಟಿಗೆ ಸಿನಿಮಾ ನೋಡಿದೆವು. ಅದರಲ್ಲೂ ಕತ್ರೀನಾ ಟವೆಲ್ ಫೈಟ್ ಸೀನ್ ನೋಡಿ ಶಾಕ್ ಆಗಿದ್ದೆ. ಕೂಡಲೇ ಪಕ್ಕದಲ್ಲಿ ಕೂತಿದ್ದ ಕತ್ರೀನಾ ಕಡೆ ತಿರುಗಿ, "ಇನ್ನು ಮುಂದೆ ನಾನು ನಿನ್ನೊಟ್ಟಿಗೆ ಯಾವುದೇ ವಿಚಾರಕ್ಕೂ ವಾದ ಮಾಡಲ್ಲ. ನೀನು ಟವೆಲ್ ಸುತ್ತಿಕೊಂಡು ನನಗೆ ಹೊಡೆಯುವುದು ಬೇಡ" ಎಂದು ತಮಾಷೆಯಾಗಿ ಹೇಳಿದ್ದಾಗಿ ವಿವರಿಸಿದ್ದಾರೆ.

"ಕತ್ರೀನಾ ನಿಜಕ್ಕೂ ಆ ದೃಶ್ಯದಲ್ಲಿ ಅದ್ಭುತವಾಗಿ ನಟಿಸಿದ್ದಾಳೆ. ನಿಜಕ್ಕೂ ಆಕೆಯ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ನೀನು ಬಾಲಿವುಡ್‌ಗೆ ಸಿಕ್ಕ ಅದ್ಭುತ ಆಕ್ಷನ್ ಹೀರೊಯಿನ್ ಎಂದು ನಾನು ಆಕೆಗೆ ಹೇಳಿದ್ದೆ" ಎಂದು ವಿಕ್ಕಿ ಹೇಳಿದ್ದಾರೆ.
'ಟೈಗರ್-3' ಟ್ರೈಲರ್‌ನಲ್ಲಿ ಕತ್ರೀನಾ ಕೈಫ್ ಹಾಗೂ ಹಾಲಿವುಡ್ ನಟಿ ಮಿಚೆಲ್ ಲೀ ನಡುವಿನ ಟವೆಲ್ ಫೈಟ್ ಝಲಕ್ ರಿವೀಲ್ ಆಗಿತ್ತು. ಈ ಸೀನ್ ಬಗ್ಗೆ ಮಾತನಾಡಿದ್ದ ಕತ್ರೀನಾ "ಟರ್ಕಿಷ್ ಹಮ್ಮಾಮ್‌ನಲ್ಲಿ ಆ ಸೀನ್ ಚಿತ್ರೀಕರಿಸಿದ್ದೆವು. ಚಿತ್ರೀಕರಣ ಬಹಳ ಕಷ್ಟ ಇತ್ತು. ಹಬೆಯಲ್ಲಿ ಕೈ ಕೈ ಹಿಡಿದು ಫೈಟ್ ಮಾಡುವುದು ಸುಲಭವಾಗಿರಲಿಲ್ಲ"
"ಹಿಡಿತ, ಲ್ಯಾಂಡಿಂಗ್, ಪಂಚ್, ಕಿಕ್ ಎಲ್ಲವೂ ಚಾಲೆಂಜಿಂಗ್ ಆಗಿತ್ತು. ಬೆಳ್ಳಿ ಪರದೆ ಮೇಲೆ ಈ ರೀತಿ ಇಬ್ಬರು ಮಹಿಳೆಯರ ನಡುವಿನ ಫೈಟ್ ಸೀನ್ ಇರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ರಿಸ್ಕಿ ಆಕ್ಷನ್ ಸೀನ್‌ನಲ್ಲಿ ನಟಿಸೋದು ನನನಗೆ ಬಹಳ ಇಷ್ಟ. ಟೈಗರ್ ಸರಣಿ ಸಿನಿಮಾ ನನಗೆ ಸಾಕಷ್ಟು ವಿಶೇಷ ಅವಕಾಶ ನೀಡಿದೆ" ಎಂದಿದ್ದರು.
ದೀಪಾವಳಿ ಸಂಭ್ರಮದಲ್ಲಿ ಭಾನುವಾರ ಬಿಡುಗಡೆಯಾಗಿದ್ದ 'ಟೈಗರ್-3' ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. 18 ದಿನಕ್ಕೆ ಸಿನಿಮಾ 270 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಮೊದಲ ದಿನವೇ ಸಿನಿಮಾ 43 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು.
'ಏಕ್ ಥಾ ಟೈಗರ್' ಹಾಗೂ 'ಟೈಗರ್ ಜಿಂದಾ ಹೈ' ಬಳಿಕ ಆ ಸರಣಿಯ 3ನೇ ಸಿನಿಮಾ ಇದು. ಚಿತ್ರದಲ್ಲಿ ರಾ ಏಜೆಂಟ್ ಅವಿನಾಶ್ ಟೈಗರ್ ಸಿಂಗ್ ರಾಥೋರ್ ಆಗಿ ಸಲ್ಮಾನ್ ಖಾನ್ ಹಾಗೂ ಆತನ ಮಡದಿ ಐಎಸ್‌ಐ ಏಜೆಂಟ್ ಜೋಯಾ ಆಗಿ ಕತ್ರೀನಾ ಕೈಫ್ ಮಿಂಚಿದ್ದಾರೆ.


Click it and Unblock the Notifications











