ಗುಟ್ಟಾಗಿ ಮದುವೆ ಆಗಿ ಬಿಟ್ಟ ಕತ್ರಿನಾ- ವಿಕ್ಕಿ ಕೌಶಲ್: ನವ ಜೋಡಿಯ ಫೋಟೊ ಇಲ್ಲಿದೆ!

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೈಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ಬಗ್ಗೆ ಸಾಕಷ್ಟು ವರದಿಗಳು ಹರಿದಾಡುತ್ತಿವೆ. ರಾಜಸ್ಥಾನದ ಬರ್ವಾರದ 'ಸಿಕ್ಸ್ ಸೆನ್ಸ್'ನಲ್ಲಿ ಇಂದು ಕುಟುಂಬ, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ಕತ್ರಿನಾ ಕೈಫ್​ ವಯಸ್ಸಿನಲ್ಲಿ ವಿಕ್ಕಿ ಕೌಶಲ್​ಗಿಂತ ಐದು ವರ್ಷ ದೊಡ್ಡವರು. ಆಸ್ತಿ ವಿಚಾರದಲ್ಲೂ ಕೂಡ ಕತ್ರಿನಾ ವಿಕ್ಕಿಗಿಂತ ಒಂದು ಪಾಲು ಹೆಚ್ಚಿದ್ದಾರೆ. ವಿದೇಶಿ ಪ್ರಜೆಯಾಗಿರುವ ಕತ್ರಿನಾ ಈಗ ದೇಶಿ ಹುಡುಗನ ಕೈ ಹಿಡಿದು ಭಾರತದ ಸೊಸೆ ಆಗಿದ್ದಾರೆ.

ಇನ್ನು ಈ ಮದುವೆಗೆ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದ್ದು, ಅತಿಥಿಗಳಿಗೆ ಫೋಟೋ ತೆಗೆಯದಂತೆ ನಿಯಮ ವಿಧಿಸಲಾಗಿತ್ತು. ಈ ಹಿನ್ನಲೆ ಮದುವೆಯ ಕುರಿತ ಯಾವುದೇ ಅಧಿಕೃತ ಪೋಟೋವನ್ನು ಬಿಡುಗಡೆ ಮಾಡಿಲ್ಲ. ಆದರೆ, ಕೆಲವರ ಕ್ಯಾಮೆರಾ ಕಣ್ಣಲ್ಲಿ ಕತ್ರಿನಾ ವಿಕ್ಕಿ ಮದುವೆ ಫೊಟೋಗಳು ಸೆರೆ ಸಿಕ್ಕಿವೆ. ಬಾಲಿವುಡ್‌ನಲ್ಲಿ ಈ ಫೊಟೋಗಳೆ ಹರಿದಾಡುತ್ತಲಿವೆ. ವಿವಾಹದ ಬಳಿಕ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೋಟೆಯ ಮೇಲೆ ನಿಂತು ಕೈ ಬೀಸುತ್ತಿರುವ ದೃಶ್ಯ ಒಂದು ಹೊರ ಬಂದಿದೆ.

Vicky Kaushal-Katrina Kaif Officially Married: Pics Are Here

ಇನ್ನು ವಿಕ್ಕಿ ಕೌಶಲ್​​ ಮತ್ತು ಕತ್ರಿನಾ ಮದುವೆ ಆಗಿದ್ದಾರೆ ಎನ್ನುವ ಅಧಿಕೃತ ಮಾಹಿತಿ ವಿಕಿಪೀಡಿಯಾದಲ್ಲಿ ಅಪ್​ಡೇಟ್​ ಆಗಿದೆ. ಇಬ್ಬರು ಸತಿ ಪತಿ ಎಂದು ವಿಕಿಪೀಡಿಯಾ ಹೇಳುತ್ತಿದೆ. ಈ ಬಾಲಿವುಡ್​ ತಾರಾ ಜೋಡಿಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.

Vicky Kaushal-Katrina Kaif Officially Married: Pics Are Here

ಮದುವೆಯಲ್ಲಿ ಭಾಗಿಯಾದ ಅತಿಥಿಗಳ ಬಗ್ಗೆ ಕೂಡ ರಹಸ್ಯ ಕಾಪಾಕೊಳ್ಳಲಾಗಿದೆ. ಮದುವೆಯ ಅತಿಥಿಗಳ ಪಟ್ಟಿಯು ತುಂಬಾ ರಹಸ್ಯವಾಗಿರಿಸಿತ್ತು. ಮದುವೆಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ವಿಷಯ ಎಲ್ಲೂ ಹೊರ ಬಂದಿರಲಿಲ್ಲ. ಸೆಲೆಬ್ರಿಟಿಗಳು ಮದುವೆ ಮನೆಯತ್ತ ಪ್ರಯಾಣ ಬೆಳೆಸಿದಾಗಲೇ ಮದುವೆಗೆ ಆಹ್ವಾನಿತರಲ್ಲಿ ಕೆಲವು ಹೆಸರುಗಳು ಬಹಿರಂಗ ಆಯಿತು.

Vicky Kaushal-Katrina Kaif Officially Married: Pics Are Here

ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ, ಕಬೀರ್ ಖಾನ್ ಮತ್ತು ಮಿನಿ ಮಾಥುರ್, ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಮತ್ತು ಅವರ ಪತ್ನಿ, ಮತ್ತು ನಟಿಯರಾದ ಶರ್ವರಿ ವಾಘ್ ಮತ್ತು ರಾಧಿಕಾ ಮದನ್, ನಟಿ ಮಾಳವಿಕಾ ಮೋಹನನ್ ಸೇರಿದಂತೆ ಹಲವರು ಮದುವೆಯಲ್ಲಿ ಭಾಗಿ ಆಗಿದ್ದಾರೆ.

More from Filmibeat

English summary
Vicky Kaushal-Katrina Kaif Officially Married: Pics Are Here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X