ವಿಡಿಯೋ ಕಾಲ್‌ನಲ್ಲಿ ನಟಿ ಜೊತೆ ಖಾಸಗಿ ಕ್ಷಣ ಕಳೆಯುವ ಆಸೆ ; 8,000 ಹಣ ಕಳೆದುಕೊಂಡು ಕಂಗಾಲಾದ ವಿದ್ಯಾರ್ಥಿ
ಅಭಿಮಾನ ಇರಬೇಕು. ವ್ಯಾಮೋಹ ಇರಬಾರದು. ಆದರೆ ಇದು 5G ಯುಗ. ಬದಲಾದ ಈ ಕಾಲದಲ್ಲಿ ಹಲವರು ಇಂಟರ್ನೆಟ್ ಮೂಲಕ ತಾರೆಯರ ಖಾಸಗಿ ಬದುಕಿನಲ್ಲಿ ಪ್ರವೇಶಿಸುವ ಪ್ರಯತ್ನ ಮಾಡುತ್ತಾರೆ. ಕೇವಲ ಕಾಮೆಂಟ್ ಮಾಡಿ ಸುಮ್ಮನಾಗದೇ ಮೆಸೆಂಜರ್ ಗೆ ದಾಂಗುಡಿ ಇಡುತ್ತಾರೆ.
ಇನ್ನೂ ನಾಯಕಿಯರಾದರೆ ಮುಗಿಯಿತು. ಅವರ ತಳುಕು-ಬಳಕು- ವಯ್ಯಾರವನ್ನೆಲ್ಲ ತಮ್ ಮೊಬೈಲ್‌ನಲ್ಲಿಯೇ ಕಣ್ತುಂಬಿಕೊಳ್ಳುವ ಹಲವರು ಇಲ್ಲ-ಸಲ್ಲದ ಬೇಡಿಕೆಗಳನ್ನಿಡಲು ಶುರು ಮಾಡುತ್ತಾರೆ. ಕೆಲವರು ಐ ಲವ್ ಯೂ ಎಂದು ದುಂಬಾಲು ಬಿದ್ದರೆ ಮತ್ತೂ ಕೆಲವರಲ್ಲಿನ ಕವಿ, ನಾಯಕಿಯರ ಸೌಂದರ್ಯ ಕಂಡು ಎಚ್ಚರಗೊಳ್ಳುತ್ತಾನೆ. ಈ ಪೈಕಿ ಇನ್ನೂ ಕೆಲವರಿದ್ದಾರೆ. ಇವರಿಗೆ ಮಾತನಾಡುವ ಹುಚ್ಚು. ಸದ್ಯ ಇದೇ ಹುಚ್ಚಿಂದ ಒಬ್ಬ ವಿದ್ಯಾರ್ಥಿ 8,000 ಕಳೆದುಕೊಂಡಿದ್ದಾನೆ.

ಹೌದು, ಉತ್ತರ ಪ್ರದೇಶದ ಇಂದಿನ ಪ್ರಯಾಗ್‌ರಾಜ್‌ನ ಹಿನ್ನೆಲೆಯಿಂದ ಬಂದವರು ಜ್ಯೋತಿ ಸಕ್ಸೆನಾ. ರ್‍ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುತ್ತಲೇ ಎಲ್‌ಐಸಿ.. ಬೋರೋ ಪ್ಲಸ್.. ಜಾನ್ಸನ್ ಆಂಡ್ ಜಾನ್ಸನ್.. ಸೇರಿ ಹಲವು ಜಾಹೀರಾತುಗಳಲ್ಲಿ ಮಿಂಚಿದ ಜ್ಯೋತಿ ಆ ನಂತರ ಬಾಬುಲ್ ಸುಪ್ರಿಯೋ ಅವರ ಜೊತೆ ''ಖೋಯಾ ಹೂನ್ ಮೈ'' ಎಂಬ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡರು. ಹೆಜ್ಜೆ ಹಾಕಿದರು.
ಜ್ಯೋತಿಗೆ ಬೇಕಿದ್ದ ಬ್ರೇಕ್ ಸಿಗಲಿಲ್ಲವಾದರೂ ಈ ಹಾಡು ಇವರಿಗೆ ಹೆಸರು ತಂದು ಕೊಡ್ತು. ಆ ನಂತರ ''ಲಾಚಿ'' ಎಂಬ ಕಿರುಚಿತ್ರವನ್ನು ಮಾಡಿದ ಜ್ಯೋತಿ ಸದ್ಯ ಪಂಜಾಬಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಾಲಿವುಡ್‌ನ ಬಾಗಿಲನ್ನೂ ಕೂಡ ಬಡಿಯುತ್ತಿದ್ದಾರೆ.
ಇಂಥಾ ಜ್ಯೋತಿ ಸಕ್ಸೆನಾ ಅವರಲ್ಲಿ ವಿದ್ಯಾರ್ಥಿಯೊಬ್ಬ ನ*ಗ್ನ ವಿಡಿಯೋ ಕಾಲ್ ಮಾಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಸಮಯದಲ್ಲಿ ಹಣದ ಮಾತುಕಥೆ ನಡೆದಿದ್ದು ಜ್ಯೋತಿ ಅವರ ಖಾತೆಯಿಂದ 20,000 ನೀಡುವಂತೆ ಸಂದೇಶ ಬಂದಿದೆ.
ಆದರೆ ವಿದ್ಯಾರ್ಥಿ ಬಳಿ ಹಣ ಇರಲಿಲ್ಲ. ಆದರೂ ಬಯಕೆ ಇದ್ದೇ ಇತ್ತು. ಹೀಗಾಗಿ ನಟಿಯ ಬೆತ್ತಲೆ ದೇಹ ನೋಡುವ ಹಪಾಹಪಿಯಲ್ಲಿ ವಿದ್ಯಾರ್ಥಿ 20,000 ಬದಲು 8,000 ಹಣ ನೀಡುವುದಾಗಿ ಹೇಳಿದ್ದಾನೆ. ಆದರೆ ಇದಕ್ಕೂ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

ಬದಲಿಗೆ ಆರಂಭದಲ್ಲಿ 15, 10 ಎಂದು ಚೌಕಾಸಿ ಮಾಡಲಾಗಿದೆ. ಕೊನೆಯಲ್ಲಿ 8,000ಕ್ಕೆ ಡೀಲ್ ಕುದುರಿದೆ. ಆ ನಂತರ ಈ ಸೌಭಾಗ್ಯ ಎಷ್ಟು ನಿಮಿಷಗಳವರೆಗೆ ನನಗೆ ಸಿಗಲಿದೆ ಎಂದು ವಿದ್ಯಾರ್ಥಿ ಕೇಳಿದ್ದಾನೆ. ಇದಕ್ಕೆ 10ರಿಂದ 20 ನಿಮಿಷ ಎಂಬ ಉತ್ತರ ಆ ಕಡೆಯಿಂದ ಬಂದಿದೆ. ಈ ಹಿನ್ನೆಲೆ ಅತ್ಯುತ್ಸಾಹದಲ್ಲಿ ವಿದ್ಯಾರ್ಥಿ ಕೂಡಲೇ 8,000 ಹಣ ನೀಡಿದ್ದಾನೆ. ಆದರೆ ಆ ನಂತರ ಕಾದಿದ್ದೇ ಬಂತೇ ಹೊರತು. ಅಲ್ಲಿಂದ ವಿಡಿಯೋ ಕಾಲ್ ಬಂದಿಲ್ಲ. ಬದಲಿಗೆ ವಿದ್ಯಾರ್ಥಿಯನ್ನು ಬ್ಲಾಕ್ ಮಾಡಲಾಗಿದೆ.
ಸದ್ಯ ವಿದ್ಯಾರ್ಥಿ ಮತ್ತು ಜ್ಯೋತಿ ಸಕ್ಸೆನಾ ಅವರ ಖಾತೆ ನಡುವೆ ನಡೆದ ಸಂಭಾಷಣೆಯ ಸ್ಕ್ರೀನ್ ಶಾಟ್‌ಗಳು ವೈರಲ್ ಆಗಿವೆ. ಇನ್ನೂ ಸ್ಕ್ರೀನ್ ಶಾಟ್ ವೈರಲ್ ಆದ ನಂತರ ಜ್ಯೋತಿ ಸಕ್ಸೆನಾ ಅವರ ಇನ್‌ಸ್ಟಾಗ್ರಾಮ್ ಖಾತೆ ಡಿಲೀಟ್ ಆಗಿದೆ. ಅಥವಾ ಡಿ ಆಕ್ಟಿವೇಟ್ ಆಗಿದೆ. ಹೀಗಾಗಿ ಹಲವರು ವಿದ್ಯಾರ್ಥಿಗೆ ಜ್ಯೋತಿ ಸಕ್ಸೆನಾ ಹೀಗೆಲ್ಲಾ ಮೆಸೇಜ್ ಮಾಡಿದ್ರಾ ಎಂದು ತಲೆ ಕೆಡಿಸಿಕೊಂಡಿದ್ದರು. ಜ್ಯೋತಿ ಸಕ್ಸೇನಾ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡಲು ಶುರು ಮಾಡಿದ್ದರು.
ಆದರೆ, ಜ್ಯೋತಿ ಸಕ್ಸೇನಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಹೇಳುತ್ತಿರುವುದೇ ಬೇರೆ. ಈ ಕುರಿತು ತಮ್ಮ ಫೇಸ್‌ಬುಕ್ ಮೂಲಕ ಪ್ರಕಟಣೆ ಹೊರಡಿಸಿರುವ ಜ್ಯೋತಿ ಸಕ್ಸೇನಾ ಕಳೆದ 2 ತಿಂಗಳಿನಿಂದ ಅಪರಿಚಿತ ವ್ಯಕ್ತಿ ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿದ್ದು, ನನ್ನ ಗುರುತು, ಫೋಟೋ ಮತ್ತು ಬ್ಯ್ರಾಂಡ್ ದುರುಪಯೋಗಪಡಿಸಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಈ ಮೂಲಕ ಸುಳ್ಳು ಮತ್ತು ಮಾನಹಾನಿಕರ ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಹೇಳಿರುವ ಜ್ಯೋತಿ ಸಕ್ಸೇನಾ, ಇದು ಸೈಬರ್ ಕಾನೂನಿನಡಿ ಗುರುತು ಕಳ್ಳತನ ಮತ್ತು ವ್ಯಕ್ತಿತ್ವ ಹರಣದ ಗಂಭೀರ ಅಪರಾಧವಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ನಮ್ಮ ಕಾನೂನು ತಂಡ ಈಗಾಗಲೇ ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ. ಇಂತಹ ಸುಳ್ಳು ಸುದ್ಧಿಗಳನ್ನು ಹರಡುವವರನ್ನು ಸಹ ಹೊಣೆಗಾರರನ್ನಾಗಿ ಮಾಡಲಾಗುವುದು. ನನ್ನ ಖಾತೆಯು ಸಂಪೂರ್ಣವಾಗಿ ಸುರಕ್ಷಿತವಾಗುವವರೆಗೆ ಯಾವುದೇ ಸಂವಹನಕ್ಕೆ ಪ್ರತಿಕ್ರಿಯಿಸದಂತೆ ಮಾಧ್ಯಮಗಳು ಮತ್ತು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications