ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?

ರಿಶಿ ಕಪೂರ್ ನಿಜವಾದ ಶೋಮ್ಯಾನ್. ಕಲಾವಿದನ ಕರ್ತವ್ಯ ಮನರಂಜಿಸುವುದು ಅದನ್ನು ಅಂತಿಮ ಕ್ಷಣದವರೆಗೂ ಪಾಲಿಸಿದ್ದಾರೆ ರಿಶಿ ಕಪೂರ್. ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದಾಗಲೂ!

Recommended Video

ಸಾವಿಗೂ ಮುನ್ನ ರಿಷಿ ಕಪೂರ್ ಆಸ್ಪತ್ರೆಯಲ್ಲಿ ಕೇಳಿದ ಹಾಡು ಇದೇ | Rishi Kapoor | Filmibeat Kannada

ಹೌದು, ರಿಶಿ ಕಪೂರ್ ತಮ್ಮ ಅಂತಿಮ ಕ್ಷಣದ ವರೆಗೂ ನಮ್ಮನ್ನು ನಗಿಸುತ್ತಿದ್ದರು, ಮನರಂಜನೆ ನೀಡುತ್ತಿದ್ದರು ಎಂದು ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಯೇ ಹೇಳಿದ್ದಾಗಿ ರಿಶಿ ಕಪೂರ್ ಕುಟುಂಬ ಬಿಡುಗಡೆ ಮಾಡಿರುವ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.

ಇದರ ಜೊತೆಗೆ ರಿಶಿ ಕಪೂರ್ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದಾಗಲೇ ಯುವ ಹಾಡುಗಾರನೊಬ್ಬನ ಹಾಡು ಕೇಳುತ್ತಾ, ಆತನಿಗೆ ಆಶೀರ್ವಾದ ಮಾಡುತ್ತಿರುವ ಸುಂದರ ವಿಡಿಯೋ ಒಂದು ಹರಿದಾಡುತ್ತಿದೆ. ಇದು ರಿಶಿ ಕಪೂರ್ ಸಾಯುವ ಮುನ್ನಾ ತೆಗೆದ ವಿಡಿಯೋ ಎನ್ನಲಾಗಿದೆ. ಇದರ ಸತ್ಯಾಸತ್ಯತೆ ಅರಿಯೋಣ ಬನ್ನಿ.

ಬೆಡ್‌ ಮೇಲೆ ಮಲಗಿರುವ ರಿಶಿ ಹಾಡು ಕೇಳುತ್ತಿದ್ದಾರೆ

ಬೆಡ್‌ ಮೇಲೆ ಮಲಗಿರುವ ರಿಶಿ ಹಾಡು ಕೇಳುತ್ತಿದ್ದಾರೆ

ಯುವಕನೊಬ್ಬ ರಿಶಿ ಕಪೂರ್ ಮಲಗಿರುವ ಆಸ್ಪತ್ರೆ ಬೆಡ್ ಪಕ್ಕದಲ್ಲಿ ನಿಂತು ಕ್ಯಾಮೆರಾದಲ್ಲಿ ವಿಡಿಯೋ ಚಿತ್ರಿಸಿಕೊಳ್ಳುತ್ತಾ, ರಿಶಿ ಕಪೂರ್ ಅವರ ದೀವಾನಾ ಸಿನಿಮಾದ ಹಾಡನ್ನು ಹಾಡುತ್ತಿದ್ದಾನೆ, ಮುಗುಳ್ನಗುತ್ತಾ ರಿಶಿ ಕಪೂರ್ ಅವರು ಹಾಡನ್ನು ಆನಂದಿಸುತ್ತಿದ್ದಾರೆ. ಇದು ವಿಡಿಯೋದಲ್ಲಿರುವ ಚಿತ್ರ.

ಸಾಯುವ ಮುನ್ನಾ ತೆಗೆದ ವಿಡಿಯೋ ಇದು?

ಈ ವಿಡಿಯೋ ರಿಶಿ ಕಪೂರ್ ಸಾಯುವ ಕೆಲವೇ ಗಂಟೆಗಳ ಮುನ್ನಾ ತೆಗೆದಿದ್ದು ಎಂದು ಹೇಳಿ ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಹಲವು ಮಂದಿ ಶೇರ್ ಮಾಡಿದ್ದಾರೆ. ಆದರೆ ಈ ವಿಡಿಯೋ ರಿಶಿ ಕಪೂರ್ ಸಾಯುವ ಮುನ್ನಾ ಕ್ಷಣಗಳಲ್ಲಿ ತೆಗಿದ್ದಿದ್ದಲ್ಲ, ಬದಲಿಗೆ ಕೆಲ ದಿನಗಳ ಹಿಂದೆ ನಡೆದ ಘಟನೆ.

ಫೆಬ್ರವರಿ ತಿಂಗಳಲ್ಲಿ ತೆಗೆದ ವಿಡಿಯೋ ಇದು

ಫೆಬ್ರವರಿ ತಿಂಗಳಲ್ಲಿ ತೆಗೆದ ವಿಡಿಯೋ ಇದು

ಎರಡು ತಿಂಗಳ ಹಿಂದೆ ರಿಶಿ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅಲ್ಲಿಯೇ ಇದ್ದ ಒಬ್ಬ ಯುವ ಹಾಡುಗಾರ ಡಿಕೆ.ಕುಮಾರ್ ಸಾನು ಎಂಬಾತ ರಿಶಿ ಕಪೂರ್ ಅವರಿಗಾಗಿ ಹಾಡು ಹಾಡಿ ವಿಡಿಯೋ ಚಿತ್ರಿಕಿಸಿಕೊಂಡು ಅದನ್ನು ಫೆಬ್ರವರಿ 29 ರಂದು ಯೂಟ್ಯೂಬ್‌ ನಲ್ಲಿ ಪ್ರಕಟಿಸಿದ್ದ.

ಹಾಡುಗಾರನಿಗೆ ಮನದುಂಬಿ ಆಶೀರ್ವಾದ ಮಾಡಿದರು

ಹಾಡುಗಾರನಿಗೆ ಮನದುಂಬಿ ಆಶೀರ್ವಾದ ಮಾಡಿದರು

ವಿಡಿಯೋ ಸ್ವಲ್ಪ ಹಳೆಯದ್ದಾದರೂ ವಿಡಿಯೋ ಮಾಡುವ ಹೊತ್ತಿಗೆ ರಿಶಿ ಕಪೂರ್‌ ಗೆ ಅನಾರೋಗ್ಯ ಉಲ್ಬಣಿಸಿತ್ತು. ಆ ವಿಡಿಯೋದ ಅಂತ್ಯದಲ್ಲಿ ಯುವ ಹಾಡುಗಾರನ ತಲೆಯ ಮೇಲೆ ಕೈಯಿಟ್ಟು, ಶ್ರಮ ಪಡು, ಶ್ರಮ ಪಟ್ಟರೆ ಮಾತ್ರವೇ ಯಶಸ್ಸು ನಿನ್ನದಾಗುತ್ತದೆ, ಜೀವನದಲ್ಲಿ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ.

More from Filmibeat

English summary
A video getting viral in social media claiming that Rishi Kapoor's last video in the hospital. He seen enjoying a song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X