ಪೊರಕೆ ಹಿಡಿದ ಕತ್ರಿನಾ ಕೈಫ್, ರೇಗಿಸಿದ ಅಕ್ಷಯ್ ಕುಮಾರ್.!
ಬಾಲಿವುಡ್ ನಟಿ ಕತ್ರಿನಾ ಕೈಫ್ ಪೊರಕೆ ಹಿಡಿದಿದ್ದಾರೆ. ಕೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸಿದ್ದಾರೆ. ಹಾಗಂದ ಮಾತ್ರಕ್ಕೆ ಯಾವುದೋ ಸಾಮಾಜಿಕ ಕಾರ್ಯಕ್ರಮದಲ್ಲಿ ಕತ್ರಿನಾ ಕೈಫ್ ಹೀಗೆ ಮಾಡಿರಬೇಕು ಎಂದು ಭಾವಿಸಬೇಡಿ. ಬಿಳಿ ಬಣ್ಣದ ಸಲ್ವಾರ್ ತೊಟ್ಟು ನಟಿ ಕತ್ರಿನಾ ಕೈಫ್ ಕಸ ಗುಡಿಸಿರುವುದು ಶೂಟಿಂಗ್ ಸೆಟ್ ನಲ್ಲಿ.!
ಹೌದು, ನಟಿ ಕತ್ರಿನಾ ಕೈಫ್ ಮತ್ತು ಅಕ್ಷಯ್ ಕುಮಾರ್ ಕಾಂಬಿನೇಶನ್ ನಲ್ಲಿ 'ಸೂರ್ಯವಂಶಿ' ಸಿನಿಮಾ ತಯಾರಾಗುತ್ತಿದೆ. ಇದೇ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಕೈಯಲ್ಲಿ ಪೊರಕೆ ಹಿಡಿದು ನಟಿ ಕತ್ರಿನಾ ಕೈಫ್ ಕಸ ಗುಡಿಸಿರುವ ವಿಡಿಯೋನ ಅಕ್ಷಯ್ ಕುಮಾರ್ ಸೆರೆ ಹಿಡಿದಿದ್ದಾರೆ.

ಕತ್ರಿನಾ ಕೈಫ್ ಕಸ ಗುಡಿಸುತ್ತಿರುವ ವಿಡಿಯೋನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್, ''ಸೂರ್ಯವಂಶಿ' ಸೆಟ್ ನಲ್ಲಿ ಸ್ವಚ್ಛ ಭಾರತದ ನೂತನ ರಾಯಭಾರಿ'' ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ, 'ಸೂರ್ಯವಂಶಿ' ಚಿತ್ರಕ್ಕೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ದೇವ್ಗನ್, ರಣ್ವೀರ್ ಸಿಂಗ್, ಜಾಕಿ ಶ್ರಾಫ್ ರಂತಹ ದೊಡ್ಡ ತಾರಾಬಳಗ ಇರುವ ಈ ಮಲ್ಟಿ ಸ್ಟಾರರ್ ಚಿತ್ರ ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲಿದೆ.


Click it and Unblock the Notifications











