ವೇದಿಕೆಯಲ್ಲಿಯೇ ಖಾನ್‌ಗಳಿಗೆ 'ಶಟ್ ಅಪ್' ಎಂದು ಕಿಡಿಕಾರಿದ್ದರು ಬಾಲಿವುಡ್ ನಟ

By Avani Malnad

ಬಾಲಿವುಡ್‌ಗೆ ಸಂಬಂಧಿಸಿದ ವಿವಿಧ ಹಳೆಯ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ಇವುಗಳಲ್ಲಿ ಹೆಚ್ಚಿನವು ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಸಂಬಂಧಿಸಿದ್ದು. ಸುಶಾಂತ್ ಸಿಂಗ್ ಜನರೊಂದಿಗೆ ಇರುತ್ತಿದ್ದ ರೀತಿ, ಅವರನ್ನು ವೇದಿಕೆಯೊಂದರಲ್ಲಿ ಶಾರುಖ್ ಖಾನ್ ಮತ್ತು ಶಾಹಿದ್ ಕಪೂರ್ ಅವಮಾನಿಸಿದ ವಿಡಿಯೋ ವೈರಲ್ ಆಗುತ್ತಿದೆ.

Recommended Video

ನೆಪಟಿಸಂನಿಂದ ಸುಶಾಂತ್ ಬದುಕಲಿಲ್ಲ ಆದ್ರೆ ಪ್ರಕಾಶ್ ರಾಜ್ ಬದುಕಿದ್ರು | Prakash Raj About Nepotism

ಅದೇ ರೀತಿ ಬಾಲಿವುಡ್‌ನ ಕುಟುಂಬಗಳಲ್ಲಿನ ಸ್ವಜನಪಕ್ಷಪಾತದ ಉದಾಹರಣೆಯೆಂಬಂತೆ ಮತ್ತೊಂದು ಹಳೆಯ ವಿಡಿಯೋ ವೈರಲ್ ಆಗಿದೆ. ಫಿಲಂ ಫೇರ್ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಹಾಗೂ ಸೈಫ್ ಅಲಿ ಖಾನ್ ನಟ ನೀಲ್ ನಿತಿನ್ ಮುಕೇಶ್ ಅವರನ್ನು ಅವಮಾನಿಸಿದ್ದರು. ಆಗ ನೀಲ್ ನಿತಿನ್ ಕೋಪದಿಂದ ಪ್ರತಿಕ್ರಿಯಿಸಿದ್ದರು.

ಬಾಲಿವುಡ್‌ನಲ್ಲಿ ಈಗ ಚರ್ಚೆಯಾಗುತ್ತಿರುವ ನೆಪೋಟಿಸಂ ಮತ್ತು ಅವರ ದಬ್ಬಾಳಿಕೆಯ ಕುರಿತಾದ ಚರ್ಚೆಗೆ ಪುಷ್ಟಿ ನೀಡುವಂತೆ ಹಳೆಯ ವಿಡಿಯೋ ಹಾಗೂ ಸುದ್ದಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮುಂದೆ ಓದಿ...

ನಿನ್ನ ಸರ್‌ ನೇಮ್ ಎಲ್ಲಿದೆ?

ನಿನ್ನ ಸರ್‌ ನೇಮ್ ಎಲ್ಲಿದೆ?

'ನಾನು ನಿನಗೆ ಪ್ರಶ್ನೆಯೊಂದನ್ನು ಕೇಳಬೇಕು. ನಿನ್ನ ಹೆಸರು ನೀಲ್ ನಿತಿನ್ ಮುಕೇಶ್. ಅಣ್ಣಾ, ಇದರಲ್ಲಿ ಸರ್ ನೇಮ್ ಎಲ್ಲಿ ಬರುತ್ತದೆ?' ಎಂದು ಶಾರುಖ್ ಖಾನ್, ನೀಲ್ ನಿತಿನ್ ಅವರನ್ನು ಕಿಚಾಯಿಸಿದ್ದರು. ಇದು ನೀಲ್ ಅವರಿಗೆ ಕಸಿವಿಸಿ ಉಂಟುಮಾಡಿತ್ತು.

ಇದು ನನಗೆ ಮಾಡುತ್ತಿರುವ ಅವಮಾನ

ಇದು ನನಗೆ ಮಾಡುತ್ತಿರುವ ಅವಮಾನ

'ಏನಾದರೂ ಹೇಳಲು ಈ ಸ್ವಾತಂತ್ರ್ಯವನ್ನು ನಾನು ಬಳಸಿಕೊಳ್ಳಬಹುದೇ? ಇದು ನನಗೆ ಮಾಡುತ್ತಿರುವ ಅವಮಾನ. ಇದೊಂದು ಅವಮಾನ ಎಂದು ನನಗೆ ಅನಿಸುತ್ತಿದೆ. ಇದು ಸರಿಯಲ್ಲ. ನನ್ನ ತಂದೆ ಕೂಡ ಇಲ್ಲಿಯೇ ಕುಳಿತಿದ್ದಾರೆ. ಇದನ್ನು ನೀವು ನೋಡಿಲ್ಲ ಎನಿಸುತ್ತದೆ. ಇಂತಹ ಪ್ರಶ್ನೆಯನ್ನು ಕೇಳುವುದು ಹಾಸ್ಯಾಸ್ಪದ.

ಶಟ್ ಅಪ್ ಎಂದಿದ್ದ ನೀಲ್

ಶಟ್ ಅಪ್ ಎಂದಿದ್ದ ನೀಲ್

ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಈ ರೀತಿಯ ಪ್ರಶ್ನೆಗಳು ಯಾವಾಗಲೂ ಬರುತ್ತವೆ. ವೈಯಕ್ತಿಕವಾಗಿ ನಾನು ಇದನ್ನು ಅವಮಾನ ಎಂದೇ ಪರಿಗಣಿಸುತ್ತೇನೆ. ನೀವಿಬ್ಬರೂ ಈಗ ಬಾಯಿ ಮುಚ್ಚಿಕೊಳ್ಳುವುದು ಅಗತ್ಯವಾಗಿದೆ ಎಂದು ತೀಕ್ಷ್ಣವಾಗಿ ಹೇಳಿದ್ದರು. ಈ ವಿಡಿಯೋದ ತುಣುಕು ಈಗ ವೈರಲ್ ಆಗಿದೆ.

ಸ್ವತಃ ಶಾರುಖ್ ಒತ್ತಾಯಿಸಿದ್ದರು

ಸ್ವತಃ ಶಾರುಖ್ ಒತ್ತಾಯಿಸಿದ್ದರು

ಈ ಘಟನೆ ಬಾಲಿವುಡ್‌ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿತ್ತು. ಶಾರುಖ್ ಖಾನ್ ಮತ್ತು ಸೈಫ್ ಅಲಿ ಖಾನ್‌ಗೆ ಕ್ಷಮೆ ಕೋರುವಂತೆ ಅನೇಕರು ನೀಲ್ ನಿತಿನ್ ಮುಕೇಶ್ ಅವರಿಗೆ ಒತ್ತಾಯಿಸಿದ್ದರು. ಆದರೆ ಇದು ಮೊದಲೇ ಯೋಜಿಸಿದ್ದ ಪ್ರಹಸನ. ಶಾರುಖ್ ಖಾನ್ ಒತ್ತಾಯದ ಮೇರೆಗೇ ನಾನು ಆ ರೀತಿ ಹೇಳಿದ್ದು. ಹಾಗೆಯೇ ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಮೇಲೆ ಮೊಟ್ಟೆ ಎಸೆಯುವಂತೆಯೂ ಹೇಳಿದ್ದರು. ಬೇಡ ಎಂದು ಮನವಿ ಮಾಡಿದರೂ ಅವರು ಬಿಡಲಿಲ್ಲ ಎಂದು ನೀಲ್ ನಿತಿನ್ ವಿವರಣೆ ನೀಡಿದ್ದರು.

More from Filmibeat

English summary
An old video of Neil Nitin Mukesh saying 'shut up' to Shah Rukh Khan and Saif Ali Khan in a award show goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X