For Quick Alerts
  ALLOW NOTIFICATIONS  
  For Daily Alerts

  ಕೊರೊನಾಗೆ ಬಲಿಯಾದ ಚಲನಚಿತ್ರ ನಿರ್ಮಾಪಕ ವೀರ್ ಚೋಪ್ರಾ

  |

  ಬಾಲಿವುಡ್ ನಿರ್ಮಾಪಕ ವಿಧು ವಿನೋದ್ ಚೋಪ್ರಾರ ಹಿರಿಯ ಸಹೋದರ ಹಾಗೂ ನಿರ್ಮಾಪಕರಾಗಿದ್ದ ವೀರ್ ಚೋಪ್ರಾ ಕೊರೊನಾದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ವೀರ್ ಚೋಪ್ರಾ ನಿಧನದ ಬಗ್ಗೆ ಚಲನಚಿತ್ರ ವಿಮರ್ಶಕಿ ಹಾಗೂ ವಿನೋದ್ ಚೋಪ್ರಾ ಪತ್ನಿ ಅನುಪಮಾ ಚೋಪ್ರಾ ಇನ್ಸ್ಟಾಗ್ರಾಂನಲ್ಲಿ ಖಚಿತಪಡಿಸಿದ್ದಾರೆ.

  ಮೂಲಗಳ ಪ್ರಕಾರ, ವೀರ್ ಚೋಪ್ರಾರನ್ನು ಮುಂಬೈನ ಉಪನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 21 ದಿನಗಳ ಕಾಲ ಕೊರೊನಾ ವೈರಸ್‌ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.

  ಮಂದಿರ ಬೇಡಿ ಪತಿ, ನಿರ್ಮಾಪಕ ರಾಜ್ ಕೌಶಲ್ ನಿಧನಮಂದಿರ ಬೇಡಿ ಪತಿ, ನಿರ್ಮಾಪಕ ರಾಜ್ ಕೌಶಲ್ ನಿಧನ

  ಮುನ್ನಾ ಭಾಯ್ ಎಂಬಿಬಿಎಸ್, ಬ್ರೋಕನ್ ಹಾರ್ಸಸ್, ಲಗೆ ರಹೊ ಮುನ್ನಾ ಭಾಯ್, 3 ಈಡಿಯಟ್ಸ್ ಅಂತಹ ಚಿತ್ರಗಳಲ್ಲಿ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಅವರೊಂದಿಗೆ ದಿವಂಗತ ವೀರ್ ಚೋಪ್ರಾ ಕೆಲಸ ಮಾಡಿದ್ದರು.

  'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿರುವ ಪ್ರಕಾರ, ಕೊರೊನಾ ಭೀತಿಯ ನಡುವೆ ಮಾಲ್ಡೀವ್ಸ್‌ಗೆ ಹೋಗಿ ಬಂದಿದ್ದರು. ಅಲ್ಲಿಂದ ಬಂದ ನಂತರ ಸೋಂಕು ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

  ಸೋಂಕು ಕಾಣಿಸಿಕೊಂಡ ಬಳಿಕ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು ಮೂರು ವಾರ ಐಸಿಯುನಲ್ಲಿಸಿರಿ ಚಿಕಿತ್ಸೆ ನೀಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ.

  ಕೊನೆ ಕ್ಷಣದಲ್ಲಿ ಒಳಿತು ಮಾಡು ಮನುಷ್ಯ ಹಾಡು ಹಾಡಿದ ನವೀನ್ ಸಜ್ಜು | Filmibeat Kannada

  ವೀರ್ ಚೋಪ್ರಾ ಅವರ ಪತ್ನಿ ನಮಿತಾ ನಾಯಕ್ ಚೋಪ್ರಾ ಸಹ ಚಿತ್ರರಂಗದಲ್ಲಿ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

  English summary
  Filmmaker Vidhu Vinod Chopra's elder brother Vir Chopra passes away on monday due to covid19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X