»   » ಡೇಟಿಂಗ್ ಮಾತ್ರ, ಹೆಚ್ಚೇನೂ ಇಲ್ಲ: ವಿದ್ಯಾ ಬಾಲನ್

ಡೇಟಿಂಗ್ ಮಾತ್ರ, ಹೆಚ್ಚೇನೂ ಇಲ್ಲ: ವಿದ್ಯಾ ಬಾಲನ್

Posted By:
Subscribe to Filmibeat Kannada
Vidya Balan
ಸದ್ಯ ಕಹಾನಿ ಮೂಲಕ ಸುದ್ದಿಯಾಗಿರುವ ಡರ್ಟಿ ಬೆಡಗಿ ವಿದ್ಯಾ ಬಾಲನ್ ತಮ್ಮ ರಿಯಲ್ ಲೈಫ್ ಕಹಾನಿಯನ್ನು ಒಪ್ಪಿಕೊಂಡಿದ್ದಾರೆ. ಸಿದ್ಧಾರ್ಥ್ ರಾಯ್ ಕಪೂರ್ ಜೊತೆಗೆ ತಾವು ಡೇಟಿಂಗ್ ಮಾಡುತ್ತಿರುವುದನ್ನು ಒಪ್ಪಿಕೊಂಡಿರುವ ವಿದ್ಯಾ "ಕೇವಲ ಡೇಟಿಂಗ್, ಅದಕ್ಕಿಂತ ಹೆಚ್ಚಿಗೆ ಇನ್ನೇನೂ ಇಲ್ಲ" ಎಂದೂ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಯುಟಿವಿ ಮುಖ್ಯಸ್ಥ ಸಿದ್ಧಾರ್ಥ್ ಹಾಗೂ ವಿದ್ಯಾ ಬಹುಕಾಲದ ಸ್ನೇಹಿತರು.

ಇಷ್ಟೇ ಅಲ್ಲ, ತಮಗೆ ಮದುವೆ ಬಗ್ಗೆ ಗಡಿಬಿಡಿಯೇನೂ ಇಲ್ಲ. "ನಾನು ಸದ್ಯಕ್ಕೆ ಮದುವೆಯ ಯಾವ ಯೋಜನೆಯನ್ನೂ ಹಾಕಿಕೊಂಡಿಲ್ಲ. ನಾವಿಬ್ಬರೂ ಪರಸ್ಪರ ಎಂಗೇಜ್ ಮೆಂಟ್ ರಿಂಗ್ ಕೂಡ ಹಾಕಿಕೊಂಡಿಲ್ಲ. ಮುಂದೊಂದು ದಿನ ಪ್ಲಾನ್ ಮಾಡಲೇಬೇಕೆಂಬ ಅರಿವು ತಮಗಿದೆ" ಎಂದಿದ್ದಾರೆ. ಒಟ್ಟಿನಲ್ಲಿ ವಿದ್ಯಾರದ್ದು ಕದ್ದುಮುಚ್ಚಿ ಮಾಡುವ ವ್ಯವಹಾರವಲ್ಲ ಎಂದಂತಾಯ್ತು.

ಏನೇ ಆಗಲಿ, ಈಗ ವಿದ್ಯಾ ಬಾಲಿವುಡ್ ಹಾಟ್ ಸೆನ್ಸೇಷನಲ್ ಬ್ಯೂಟಿ ಎಂಬುದನ್ನು ಮರೆಯಲಾಗದು. ವಿದ್ಯಾ ಕುಂತರೂ ಸುದ್ದಿ, ನಿಂತರೂ ಸುದ್ದಿ. ಹಾಗಿದ್ದ ಮೇಲೆ ಸಿದ್ಧಾರ್ಥ್ ಜೊತೆ ಓಡಾಡಿದರೆ ಸುದ್ದಿಯಾಗದಿರುತ್ತದೆಯೇ? ಆದರೆ ವಿದ್ಯಾ ಅದನ್ನು ಅಲ್ಲಗಳೆಯದೇ ಒಪ್ಪಿಕೊಂಡು 'ಎದೆ'ಗಾರಿಕೆ ತೋರಿಸಿದ್ದಾರೆ, ಭಲೆ ಭಲೇ ವಿದ್ಯಾ... (ಏಜೆನ್ಸೀಸ್)

English summary
The Dirty Picture actress, Vidya Balan has confirmed that she is dating UTV head Siddharth Roy Kapoor.
 
Please Wait while comments are loading...