ಸಿಗರೇಟ್ ಮತ್ತು ಸುಂದರಿ ; ದುಶ್ಚಟಕ್ಕೆ ದಾಸಿಯಾಗಿದ್ಹೇಗೆ ವಿದ್ಯಾ ಬಾಲನ್ ?
ತಾವು ಒಪ್ಪಿಕೊಳ್ಳುವ ಸಿನಿಮಾಗಳಿಗೆ ತಕ್ಕಂತೆ ತಮಗಿರುವ ಪಾತ್ರಕ್ಕೆ ಜೀವ ತುಂಬಲು ಕಲಾವಿದರು ನಾನಾ ಕಸರತ್ತು ಮಾಡ್ತಾರೆ. ಪಾತ್ರಕ್ಕೆ ಅನುಗುಣವಾಗಿ ತಮ್ಮ ಜೀವನ ಶೈಲಿ ಬದಲಿಸಿಕೊಳ್ತಾರೆ. ಕೆಲವೊಮ್ಮೆ ದೇಹದ ತೂಕ ಹೆಚ್ಚಿಸಿಕೊಳ್ಳಬೇಕಾದರೆ, ಕೆಲವೊಮ್ಮೆ ದೇಹದ ತೂಕ ಇಳಿಸಿಕೊಳ್ಳಬೇಕಾಗುತ್ತೆ. ಇನ್ನೂ ಕೆಲವೊಮ್ಮೆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ದುಶ್ಚಟವನ್ನೂ ಕಲಿಯಬೇಕಾಗುತ್ತೆ. ಈ ಪೈಕಿ ವಿರಳಾತಿ ವಿರಳ ಪ್ರಕರಣದಲ್ಲಿ ಪಾತ್ರಕ್ಕೆ ಕಲಿತ ಹವ್ಯಾಸ, ಅಭ್ಯಾಸವಾಗಿ ಬಿಡುತ್ತೆ. ಇದಕ್ಕೆ ವಿದ್ಯಾ ಬಾಲನ್ ಹೇಳಿದ ಕಥೆ ಅತ್ಯುತ್ತಮ ಉದಾಹರಣೆ.
ಹೌದು, ನಿಮಗೆ ನೆನಪಿರಬೇಕು. ಎರಡು ದಶಕದ ಹಿಂದೆ.. ಡರ್ಟಿ ಪಿಕ್ಚರ್ ಸಿನಿಮಾ ತೆರೆಗೆ ಬಂದಿತ್ತು. ದಕ್ಷಿಣ ಭಾರತದ ಮೋಹಕ ನಟಿ ಸಿಲ್ಕ್ ಸ್ಮಿತಾ ಜೀವನ ಕತೆಯನ್ನಾಧರಿಸಿ ಈ ಸಿನಿಮಾದಲ್ಲಿ ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾ ಪಾತ್ರವನ್ನ ಸಂಪೂರ್ಣ ಜೀವಿಸಿದ್ದರು. ಇವರ ಅಭಿನಯಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.ಸದ್ಯದ ವಿಚಾರ ಏನೆಂದರೆ.. ಡರ್ಟಿ ಪಿಕ್ಚರ್ ನಂತರ, ತಮ್ಮ ಬದುಕಿನ ಮೇಲಾದ ಪರಿಣಾಮದ ಬಗ್ಗೆ ವಿದ್ಯಾ ಬಾಲನ್ ಮಾತನಾಡಿದ್ದಾರೆ. ಸಿಗರೇಟ್ ಸೇದುವ ಚಟ ಶುರುವಾಗಲು ಡರ್ಟಿ ಪಿಕ್ಚರ್ ಕಾರಣವಾಗಿದ್ದನ್ನ ವಿವರಿಸಿದ್ದಾರೆ.

ಹೌದು, ಅಸಲಿಗೆ ವಿದ್ಯಾ ಬಾಲನ್.. ಪಾತ್ರಕ್ಕೆ ಬೇಕಾದ ತಯಾರಿಯನ್ನ ಮಾಡಿಕೊಳ್ಳುವ ಕೆಲವೇ ಕೆಲ ನಟಿಯರಲ್ಲಿ ಒಬ್ಬರು. ಈ ಕಾರಣಕ್ಕೆ .. ಚಿತ್ರದಲ್ಲಿ ಸಿಗರೇಟ್ ಸೇದಬೇಕು ಎಂದಾಗ,ವಿದ್ಯಾ ಬಾಲನ್ ನಿಜವಾಗಿಯೂ ಸಿಗರೇಟ್ ಸೇದಿ ಅಭಿನಯಿಸಲು ಮುಂದಾದರು. ಯಾಕೆಂದರೆ ಇದಕ್ಕೂ ಮೊದಲು, ಧೂಮಪಾನದ ಕಲೆ ವಿದ್ಯಾಗೆ ಕರಗತವಾಗಿತ್ತು.ಆದರೆ.. ವಿದ್ಯಾ ಎಲ್ಲೆಂದರಲ್ಲಿ, ಮನಸಾದಾಗೆಲ್ಲ ಸಿಗರೇಟ್ ಸೇದುತ್ತಿರಲಿಲ್ಲ. ಯಾವಾಗಲೂ ಬಾಯಿಂದ ಹೊಗೆ ಬಿಡುತ್ತಿರಲಿಲ್ಲ. ಯಾಕೆಂದರೆ ಧೂಮಪಾನ ಮಾಡುವ ಮಹಿಳೆಯರ ಬಗ್ಗೆ ಸಮಾಜದ ದೃಷ್ಟಿಕೋನ ಬೇರೆ. ಆದರೆ.. ಡರ್ಟಿ ಪಿಕ್ಚರ್ ಚಿತ್ರ ಮಾಡಿದ ನಂತರ ವಿದ್ಯಾ ಬಾಲನ್ ಸಂಪೂರ್ಣವಾಗಿ ಸಿಗರೇಟ್ ಸೇದುವ ಚಟಕ್ಕೆ ಅಂಟಿಕೊಂಡು ಬಿಟ್ಟರು. ದಿನಕ್ಕೆ ಎರಡು ಮೂರು ಸಿಗರೇಟ್ ಸೇದಲು ಆರಂಭ ಮಾಡಿದ್ದರು.
ಅವತ್ತು ಆರಂಭವಾದ ಈ ಚಟ ಇವತ್ತು ಇದೆಯಾ ಇಲ್ಲವಾ ಗೊತ್ತಿಲ್ಲ. ಯಾಕೆಂದರೆ.. ಸಂದರ್ಶನದಲ್ಲಿ ಸಮದೀಶ್ ಕೇಳಿದ ಪ್ರಶ್ನೆಗೆ ವಿದ್ಯಾ ಉತ್ತರವನ್ನ ಕೊಟ್ಟಿಲ್ಲ. ಬದಲಿಗೆ ಕ್ಯಾಮರಾದಲ್ಲಿ ಉತ್ತರ ಕೊಡುವುದು ಸರಿಯಲ್ಲ ಅನ್ನುವುದು ನನ್ನ ಭಾವನೆ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಇನ್ನೂ ಇದೇ ಸಂದರ್ಶನದಲ್ಲಿ ಸಿಗರೇಟ್ ಮೇಲೆ ತಮ್ಮ ವ್ಯಾಮೋಹವನ್ನ ಹೇಳಿರುವ ವಿದ್ಯಾ ಸಿಗರೇಟ್ ಹೊಗೆ ಮತ್ತು ವಾಸನೆ ಮೊದಲಿಂದ ಅಂದರೆ ಕಾಲೇಜ್ ದಿನಗಳಿಂದನೇ ನನಗೆ ಇಷ್ಟ ಅಂದಿದ್ದಾರೆ. ಸಿಗರೇಟು ಸೇದುವುದರಿಂದ ಏನೂ ತೊಂದರೆ ಇಲ್ಲ ಎಂದಾಗಿದ್ದರೆ ನಾನು ಇಷ್ಟೊತ್ತಿಗೆಲ್ಲ ಚೈನ್ ಸ್ಮೋಕರ್ ಆಗುತ್ತಿದ್ದೆ ಅಂದಿದ್ದಾರೆ. ಇಷ್ಟೇ ಅಲ್ಲ ಕಾಲೇಜು ದಿನಗಳಲ್ಲಿ ಯಾರಾದರೂ ಅಂಗಡಿಯಲ್ಲಿ ಸಿಗರೇಟ್ ಸೇದುತ್ತಿದ್ದರೆ ಅವರ ಬಳಿ ಹೋಗಿ ನಾನು ಕುಳಿತುಕೊಳ್ಳುತ್ತಿದ್ದೆ ಎಂದಿದ್ದಾರೆ ವಿದ್ಯಾ ಬಾಲನ್.
ಸಿಗರೇಟ್ ಹೊರತು ಪಡಿಸಿ, ಡರ್ಟಿ ಪಿಕ್ಚರ್ ಚಿತ್ರದಲ್ಲಿ ತುಂಡುಡುಗೆ ಹಾಕಿಕೊಳ್ಳುವುದು ಮತ್ತು ಅಂಗಾಂಗ ಪ್ರದರ್ಶಿಸುವುದು ನನ್ನ ಪಾಲಿಗೆ ತುಸು ಕಷ್ಟವಾಗಿತ್ತು ಎಂದು ಹೇಳಿರುವ ವಿದ್ಯಾ ಬಾಲನ್ ಡರ್ಟಿ ಪಿಕ್ಚರ್ ನನ್ನ ಚಿತ್ರ ಜೀವನದ ಬಹುಮುಖ್ಯ ಸಿನಿಮಾ ಅಂದಿದ್ದಾರೆ. ಯಾವತ್ತು ಮರೆಯಲಾಗದ ಸಿನಿಮಾ ಅಂದಿದ್ದಾರೆ.

ಸದ್ಯಕ್ಕೆ ವಿದ್ಯಾ ಬಾಲನ್ ಅವರ ಈ ಸಿಗರೇಟ್ ಸ್ಟೇಟ್ಮೆಂಟ್ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಪರ-ವಿರೋಧದ ಚರ್ಚೆ ಕೂಡ ನಡೆಯುತ್ತಿದೆ. ಇದರ ನಡುವೆ ಬಿಡುಗಡೆಯಾಗಿರುವ ವಿದ್ಯಾ ಬಾಲನ್ ದೋ ಔರ್ ದೋ ಪ್ಯಾರ್' ಚಿತ್ರಮಂದಿರದಲ್ಲಿ ತೆವಳುತ್ತಾ ಸಾಗಿದೆ. ಒಂದು ವಾರದಲ್ಲಿ 03 ಕೋಟಿಯನ್ನ ಗಳಿಸಿದೆ


Click it and Unblock the Notifications











