ನಕಲಿ..ನಕಲಿ.. ಇಲ್ಲಿ ಎಲ್ಲವೂ ನಕಲಿ ; ವಿದ್ಯಾ ಬಾಲನ್ ಹೆಸರಿನಲ್ಲಿ ಪಂಗನಾಮ..!

ಸಿನಿಮಾ ನಟ-ನಟಿಯರ ಫೇಸ್ ಬುಕ್ ಪೇಜುಗಳನ್ನು ಕಬಳಿಸಲು ಕಳ್ಳಗಣ್ಣುಗಳು ಸದಾ ಜಾಗೃತವಾಗಿರುತ್ತವೆ. ಹೀಗೆ ಮಾಡುವುದರಿಂದ ಏನು ಸಿಗುತ್ತದೋ ಗೊತ್ತಿಲ್ಲ. ಈ ಹಿಂದೆ ಕೂಡಾ ಸಾಕಷ್ಟು ಹೀರೋ ಹೀರೋಯಿನ್ನುಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಕಳೆದುಕೊಂಡು ಅವಾಂತರ ಪಟ್ಟಿದ್ದಾರೆ.

ಆದರೆ ಈಗ ಸೆಲೆಬ್ರಿಟಿಗಳ ಹೆಸರಿನಲ್ಲಿ ಜನಸಾಮಾನ್ಯರನ್ನ ವಂಚಿಸಲು ಕಿರಾತಕರು ಇನ್ನೊಂದು ಮಾರ್ಗ ಕಂಡುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವಿದ್ಯಾ ಬಾಲನ್ ಹೆಸರಿನಲ್ಲಿ ಹಾಕಲಾಗ್ತಿದ್ದ ಉಂಡೆ ನಾಮದ ಹೊಸ ಸ್ಕೀಮ್ ವೊಂದು ಜಗಜ್ಜಾಹೀರಾಗಿದೆ.

Vidya Balan files FIR against her fake social media accounts

ವಿದ್ಯಾ ಬಾಲನ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯೊಂದನ್ನ ತೆರೆಯಲಾಗಿದೆ. ಇದು ಸಾಲದು ಎಂಬಂತೆ ಏನೂ ಅರಿಯದ ಮುಗ್ದರನ್ನ ನಂಬಿಸಿ ಅವರಿಂದ ಹಣ ವಸೂಲಿ ಮಾಡುವ ದಂಧೆಯನ್ನೂ ಕೂಡ ನಡೆಸಲಾಗಿದೆ.

ಆದರೆ ಕಿಡಿಗೇಡಿಗಳ ದುರಾದೃಷ್ಟಕ್ಕೆ, ಈ ವಿಚಾರ ಬಾಲಿವುಡ್ ನ ಕಾಸ್ಟ್ಯೂಮ್​ ಡಿಸೈನರ್ ಅವರ ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ಆ ಕಾಸ್ಟ್ಯೂಮ್ ಡಿಸೈನರ್ , ವಿದ್ಯಾ ಬಾಲನ್ ಗೆ ವಿಷಯ ತಲುಪಿಸಿದ್ದಾರೆ. ವಿಷಯವನ್ನರಿತ ವಿದ್ಯಾ ಬಾಲನ್​ ಸದ್ಯಕ್ಕೆ ಕಾನೂನಿನ ಮೊರೆ ಹೋಗಿದ್ದಾರೆ. ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

Vidya Balan files FIR against her fake social media accounts

ತಮ್ಮ ಹೆಸರನ್ನು ಬಳಸಿಕೊಂಡು ಕೆಲವರು ಹಣ ಪೀಕುತ್ತಿದ್ದಾರೆ. ನನ್ನ ಹೆಸರನ್ನು ಅವರು ದುರ್ಬಳಕ್ಕೆ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಾತೆ ತೆರೆದು ಇಂತಹ ಕೆಲಸ ಮಾಡುತ್ತಿರುವವರನ್ನು ಪತ್ತೆ ಮಾಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ನಕಲಿ ಇನ್‌ಸ್ಟಾಗ್ರಾಮ್ ಐಡಿ ಜೊತೆ ಜಿಮೇಲ್ ಖಾತೆಯನ್ನು ಸಹ ರಚಿಸಲಾಗಿದೆ ಎಂದು ಈ ಎಫ್‌ ಐ ಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

Vidya Balan files FIR against her fake social media accounts

ತನ್ನ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಐಡಿ ಮತ್ತು ಜಿಮೇಲ್ ಖಾತೆಯನ್ನು ತೆರೆದಿರುವ ಅಪರಿಚಿತ ವ್ಯಕ್ತಿ, ಬಾಲಿವುಡ್ ಇಂಡಸ್ಟ್ರಿಗೆ ಸಂಬಂಧಿಸಿದ ಜನರನ್ನು ಸಂಪರ್ಕಿಸುತ್ತಿದ್ದರು ಅಲ್ಲದೇ ಉದ್ಯೋಗದ ಭರವಸೆ ನೀಡಿ ಹಲವರಿಂದ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದರು ಎಂದು ದೂರಿನಲ್ಲಿ ವಿದ್ಯಾ ಬಾಲನ್ ಹೇಳಿದ್ದಾರೆ.

ವಿದ್ಯಾ ಬಾಲನ್ ಅವರ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ರಂಭಿಸಿದ್ದಾರೆ.ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

More from Filmibeat

English summary
Bollywood actress Vidya Balan had lodged an FIR against an unknown person with Mumbai Police for creating a fake Instagram account in her name and asking for money from people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X