For Quick Alerts
  ALLOW NOTIFICATIONS  
  For Daily Alerts

  ಮಧ್ಯ ಪ್ರದೇಶದಲ್ಲಿ ಚಿತ್ರೀಕರಣ ಆರಂಭಿಸಿದ ನಟಿ ವಿದ್ಯಾ ಬಾಲನ್

  |

  ಕೊರೊನಾ ಲಾಕ್‌ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ಚಿತ್ರಗಳು ಮತ್ತೆ ಚಿತ್ರೀಕರಣ ಅರಂಭಿಸುತ್ತಿವೆ. ಈಗ ವಿದ್ಯಾ ಬಾಲನ್ ನಟಿಸುತ್ತಿರುವ ಶೆರ್ನಿ ಸಿನಿಮಾದ ಶೂಟಿಂಗ್ ಪುನಾರರಂಭವಾಗಿದೆ.

  ಮಧ್ಯ ಪ್ರದೇಶದಲ್ಲಿ ಶೆರ್ನಿ ಚಿತ್ರೀಕರಣಕ್ಕೆ ಮರು ಚಾಲನೆ ನೀಡಲಾಗಿದ್ದು, ಸಂಪ್ರದಾಯವಾಗಿ ಪೂಜೆ ಮಾಡುವ ಮೂಲಕ ಕೆಲಸ ಆರಂಭಿಸಲಾಗಿದೆ. ಈ ಪೂಜೆಯಲ್ಲಿ ನಟಿ ವಿದ್ಯಾ ಬಾಲನ್ ಹಾಗೂ ಚಿತ್ರತಂಡ ಭಾಗಿಯಾಗಿದೆ.

  ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಖ್ಯಾತ ನಟಿಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಖ್ಯಾತ ನಟಿ

  ಶೆರ್ನಿ ಚಿತ್ರದ ಪೂಜೆಯ ಸಂದರ್ಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾ ಬಾಲನ್ ಮಾಸ್ಕ್ ಹಾಕಿರುವುದನ್ನು ನೋಡಬಹುದು.

  ನಟಿಯ ಪಕ್ಕದಲ್ಲಿ ನಿರ್ಮಾಪಕರು ಪಿಪಿಇ ಕಿಟ್ ಧರಿಸಿ ಸ್ವಲ್ಪ ಅಂತರ ಕಾಯ್ದುಕೊಂಡು ಕುಳಿತುಕೊಂಡಿದ್ದಾರೆ. ಅವರ ಹಿಂದೆ ಚಿತ್ರತಂಡದ ಉಳಿದ ಸದಸ್ಯರು ಪಿಪಿಇ ಕಿಟ್ ಧರಿಸಿ ನಿಂತಿದ್ದಾರೆ.

  ಕೊರೊನಾ ಲಾಕ್‌ಡೌನ್ ಕಾರಣ ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ನಿಂತಿತ್ತು. ಅಮಿತ್ ಮಸೂರ್ಕರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅಮಿತ್ ಈ ಹಿಂದೆ ನ್ಯೂಟನ್ ಸಿನಿಮಾ ಡೈರೆಕ್ಟ್ ಮಾಡಿದ್ದರು. ಶೆರ್ನಿ ಚಿತ್ರದಲ್ಲಿ ವಿದ್ಯಾ ಬಾಲನ್ ಅವರು ಅರಣ್ಯ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ.

  English summary
  After lockdown opens, Bollywood actress Vidya Balan Resumes Shoot For Sherni In Madhya Pradesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X