twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್‌ ಗೆ ಹೋಗಲು ಅರ್ಹತೆ ಗಿಟ್ಟಿಸಿದ ವಿದ್ಯಾ ಬಾಲನ್ ಸಿನಿಮಾ

    |

    ಸಿನಿಮಾ ಕ್ಕೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ ಆಸ್ಕರ್ ಅನ್ನು. ವಿಶ್ವದಲ್ಲೇ ಅತಿ ಹೆಚ್ಚು ಸಿನಿಮಾಗಳನ್ನು ತಯಾರಿಸುವ ಭಾರತದ ಒಂದು ಸಿನಿಮಾ ಸಹ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಈವರೆಗೆ ಆಸ್ಕರ್ ಪಡೆದಿಲ್ಲ!

    ಆಸ್ಕರ್ ಪ್ರಶಸ್ತಿಯನ್ನು ಸಿನಿಮಾ ಮಾತ್ರವಲ್ಲ, ಡಾಕ್ಯುಮೆಂಟರಿ, ಕಿರುಚಿತ್ರಗಳಿಗೂ ನೀಡಲಾಗುತ್ತದೆ. ಸಿನಿಮಾ ವಿಭಾಗದಲ್ಲಿ ಇರುವಷ್ಟೆ ತುರುಸಿನ ಸ್ಪರ್ಧೆ ಆ ವಿಭಾಗದಲ್ಲಿಯೂ ಇದೆ.

    ಭಾರತದಿಂದ ಈ ಬಾರಿ ಆಸ್ಕರ್ ಸ್ಪರ್ಧೆಗೆ ಕಿರುಚಿತ್ರವೊಂದು ಆಯ್ಕೆಗೊಂಡಿದೆ. ಹಲವು ಅಡೆ-ತಡೆಗಳನ್ನೆಲ್ಲಾ ಗೆದ್ದು ಈ ಕಿರುಚಿತ್ರ ಆಸ್ಕರ್‌ಗೆ ಆಯ್ಕೆ ಆಗಿದ್ದು, ಕಿರುಚಿತ್ರದ ನಾಯಕಿ, ನಿರ್ಮಾಪಕಿ ಬಾಲಿವುಡ್‌ನ ಖ್ಯಾತ ನಟಿ ವಿದ್ಯಾ ಬಾಲನ್.

    ಹೌದು, ವಿದ್ಯಾ ಬಾಲನ್ ನಟಿಸಿ, ನಿರ್ಮಿಸಿರುವ 'ನಟ್‌ಕಟ್' ಕಿರುಚಿತ್ರ ಆಸ್ಕರ್‌ ಸ್ಪರ್ಧೆಗೆ ಭಾರತದಿಂದ ಆಯ್ಕೆ ಆಗಿದೆ. ಆಸ್ಕರ್‌ನ ಕಿರುಚಿತ್ರ ವಿಭಾಗಕ್ಕೆ ನಾಮಿನೇಟ್ ಸುತ್ತಿಗೆ ಆಯ್ಕೆ ಆಗಿದೆ.

    ಮಗು-ತಾಯಿಯ ಸಂಬಂಧದ ಬಗ್ಗೆ ಸಿನಿಮಾ

    ಮಗು-ತಾಯಿಯ ಸಂಬಂಧದ ಬಗ್ಗೆ ಸಿನಿಮಾ

    ಮಗು ಹಾಗೂ ತಾಯಿಯ ನಡುವಿನ ಸಂಬಂಧ. ತಾಯಿಯ ಆತಂಕ, ಮಗನನ್ನು ಹಳ್ಳಿಯ ತಾಯಿ ಬೆಳೆಸುವ ರೀತಿ, ಮನೆಯ ವಾತಾವರಣ, ಅದು ಮಗನ ಮೇಲೆ ಬೀರುವ ಪರಿಣಾಮ ಹೀಗೆ ಹಲವು ವಿಷಯಗಳ ಬಗ್ಗೆ ನಟ್‌ಕಟ್ ಸಿನಿಮಾ ಮಾತನಾಡುತ್ತದೆ.

    ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿರುವ 'ನಟ್‌ಕಟ್'

    ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿರುವ 'ನಟ್‌ಕಟ್'

    'ನಟ್‌ಕಟ್' ಸಿನಿಮಾವು ಭಾರತದ ಹಲವು ಕಿರುಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದೆ. ಭಾರತೀಯ ಕಿರುಚಿತ್ರಗಳ ಚಿತ್ರೋತ್ಸವ, ಯುಟ್ಯೂಬ್ ಸಿನಿಮಾಗಳ ಚಿತ್ರೋತ್ಸವ, ವಿ ಆರ್ ಒನ್ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿದೆ. ಹಾಗಾಗಿ 'ನಟ್‌ಕಟ್' ನೇರವಾಗಿ ಆಸ್ಕರ್‌ನ ನಾಮಿನೇಶನ್‌ ಸುತ್ತಿಗೆ ಆಯ್ಕೆಯಾಗಿದೆ.

    'ನಟ್‌ಕಟ್' ಇನ್ನೂ ದೂರ ಕ್ರಮಿಸಬೇಕಿದೆ

    'ನಟ್‌ಕಟ್' ಇನ್ನೂ ದೂರ ಕ್ರಮಿಸಬೇಕಿದೆ

    ಆಸ್ಕರ್ ನಾಮಿನೇಟ್ ಸುತ್ತಿಗೆ 'ನಟ್‌ಕಟ್' ಆಯ್ಕೆ ಆಗಿದೆ. ಆದರೆ ಇನ್ನು ಮುಂದಿನ ಪಯಣ ಇನ್ನೂ ದೂರವಿದೆ. ಕಿರುಚಿತ್ರವು ಮೊದಲಿ ನಾಮಿನೇಟ್ ಆಗಿ ಅಂತಿಮ ಹಂತಕ್ಕೆ ಆಯ್ಕೆ ಆಗಬೇಕು. ಅಲ್ಲಿ ಮತ್ತೆ ಕೆಲವು ವಿಶ್ವದ ಅತ್ಯುತ್ತಮ ಕಿರುಚಿತ್ರಗಳೊಂದಿಗೆ ಸೆಣಸಿ ಆಸ್ಕರ್ ಜಯಿಸಬೇಕು ಇದು ಸುಲಭದ ಕಾರ್ಯವಂತೂ ಅಲ್ಲ.

    Recommended Video

    ಇವನ ಬೆನ್ನು ತಟ್ಟಿ ಆಶೀರ್ವಾದ ಮಾಡಿ | NodidavaruEnantare | Umapathy Srinivas | Filmibeat Kannada
    ಕಳೆದ ವರ್ಷ 'ಗಲ್ಲಿ ಬಾಯ್' ಅನ್ನು ಗಳಿಸಲಾಗಿತ್ತು

    ಕಳೆದ ವರ್ಷ 'ಗಲ್ಲಿ ಬಾಯ್' ಅನ್ನು ಗಳಿಸಲಾಗಿತ್ತು

    ಕಳೆದ ಬಾರಿ 'ಗಲ್ಲಿ ಬಾಯ್' ಸಿನಿಮಾವನ್ನು ಭಾರತದಿಂದ ಆಸ್ಕರ್‌ಗೆ ಕಳಿಸಲಾಗಿತ್ತು. ಅದು ನಾಮಿನೇಟ್ ಸಹ ಆಗಲಿಲ್ಲ. ಈ ಹಿಂದೆ 1957 ರಲ್ಲಿ ಮದರ್ ಇಂಡಿಯಾ ಹಾಗೂ 2002 ರಲ್ಲಿ ಲಗಾನ್ ಸಿನಿಮಾ ನಾಮಿನೇಟ್ ಆಗಿತ್ತಾದರೂ ಯಾವ ವಿಭಾಗದಲ್ಲಿಯೂ ಪ್ರಶಸ್ತಿ ಪಡೆಯಲಿಲ್ಲ.

    English summary
    Vidya Balan acted and produced short movie 'Natkat' got eligibility to enter Oscar nomination.
    Monday, November 9, 2020, 16:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X