For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್ ಬಳಿ 'ರೂಂಮಿಗೆ ಬಾ' ಎಂದಿದ್ದರಂತೆ ತಮಿಳು ನಿರ್ದೇಶಕ

  |

  'ದಿ ಡರ್ಟಿ ಫಿಕ್ಚರ್ಸ್' ಚಿತ್ರದ ಮೂಲಕ ಸಖತ್ ಸದ್ದು ಮಾಡಿದ್ದ ವಿದ್ಯಾ ಬಾಲನ್ ಈಗ ತಮ್ಮ ಸಿನಿ ಜರ್ನಿಯಲ್ಲಿ ಎದುರಾದ ಕೆಟ್ಟ ಅನುಭವವೊಂದನ್ನ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ವಿದ್ಯಾ ಬಾಲನ್ ತಮಿಳು ನಿರ್ದೇಶಕರೊಬ್ಬರ ಜೊತೆ ಎದುರಾದ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ.

  ಹಿಂದಿ ಜೊತೆಗೆ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿರುವ ವಿದ್ಯಾ ಬಾಲನ್ ಸೌತ್ ಇಂಡಸ್ಟ್ರಿಯಲ್ಲಿ ಹಲವು ಪ್ರಾಜೆಕ್ಟ್ ಗಳನ್ನ ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ತಮಗಾದ ಕೆಟ್ಟ ಅನುಭವ ಎಂದಿದ್ದಾರೆ.

  ಸಖತ್ ವೈರಲ್ ಆಗ್ತಿದೆ ವಿದ್ಯಾ ಬಾಲನ್ ಹಾಟ್ ಫೋಟೋಸಖತ್ ವೈರಲ್ ಆಗ್ತಿದೆ ವಿದ್ಯಾ ಬಾಲನ್ ಹಾಟ್ ಫೋಟೋ

  ''ಒಮ್ಮೆ ನಿರ್ದೇಶಕರೊಬ್ಬರು ಕಥೆ ಹೇಳುವ ಸಲುವಾಗಿ ಭೇಟಿಯಾಗಿದ್ದರು. ಪ್ರೈವೇಟ್ ಆಗಿ ಚರ್ಚೆ ಮಾಡಬೇಕು ಎಂದರು. ಸರಿ ಕಾಫಿ ಶಾಪ್ ನಲ್ಲಿ ಕಾಯಿರಿ ಬರ್ತೀನಿ ಎಂದೆ. ಅದಕ್ಕೆ ಒಪ್ಪದ ನಿರ್ದೇಶಕ ಬೇಡ ನಮ್ಮ ರೂಂಮಿಗೆ ಹೋಗೋಣ ಅಂದರು. ನನಗೆ ಸಹಜವಾಗಿ ಕೋಪ ಬಂತು. ಆದರೂ ಆ ವ್ಯಕ್ತಿ ಅದನ್ನೇ ಹೇಳುತ್ತಿದ್ದ. ನಾನು ಬಾಗಿಲು ತೆಗೆದು ಮನೆಯಿಂದ ಹೊರಗೆ ಹೋಗು ಎಂಬ ಅರ್ಥದಲ್ಲಿ ಸುಮ್ಮನೆ ನಿಂತೆ. ಐದು ನಿಮಿಷಗಳ ಬಳಿಕ. ಆತ ಹೊರಗೆ ಹೋದ' ಎಂದು ಹೇಳಿಕೊಂಡಿದ್ದಾರೆ.


  ''ಇಂತಹ ಘಟನೆಗಳು ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ನನಗೆ ಎದುರಾಗಿದೆ. ಅನೇಕ ಸಿನಿಮಾಗಳಿಗೆ ನನ್ನನ್ನು ಆಯ್ಕೆ ಮಾಡಿಕೊಂಡರು. ನಂತರ ಈ ರೀತಿ ಕಾರಣಾಗಳಿಂದ ನನ್ನನ್ನು ರಿಜೆಕ್ಟ್ ಮಾಡಿ ಬೇರೆ ನಟಿಯರಿಗೆ ಅವಕಾಶ ಕೊಟ್ಟಿರುವ ಘಟನೆಗಳಿವೆ'' ಎಂದು ಕಹಿ ಘಟನೆಗಳನ್ನ ಮೆಲುಕು ಹಾಕಿದರು.

  ಬಾಲಿವುಡ್ ನಟಿ ವಿದ್ಯಾಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್ಬಾಲಿವುಡ್ ನಟಿ ವಿದ್ಯಾಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್

  ಅಕ್ಷಯ್ ಕುಮಾರ್ ಜೊತೆ 'ಮಿಷನ್ ಮಂಗಲ್' ಚಿತ್ರದಲ್ಲಿ ವಿದ್ಯಾ ಬಾಲನ್ ನಟಿಸಿದ್ದರು. ಈ ಸಿನಿಮಾ 100 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಇದೀಗ, ಕಿರುಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅದಕ್ಕೆ ತಾವೇ ನಿರ್ಮಾಪಕರು ಕೂಡ ಆಗಿದ್ದಾರೆ.

  English summary
  Bollywood actress vidya balan expressed her bad experience about tamil director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X