ಭಾರಿ ನಿರಾಸೆ ಮೂಡಿಸಿದ 'ಸೇಕ್ರೆಡ್ ಗೇಮ್ಸ್-2'

ಇತ್ತೀಚಿಗೆ ವೆಬ್ ಸಿರೀಸ್ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತೀಯ ವೆಬ್ ಸಿರೀಸ್ ಲೋಕದಲ್ಲಿ ಭಾರಿ ಕುತೂಹಲ ಮೂಡಿಸಿದ ಸಿರೀಸ್ ಸೇಕ್ರೆಡ್ ಗೇಮ್ಸ್. ಸೇಕ್ರೆಡ್ ಗೇಮ್ಸ್ ವೆಬ್ ಸಿರೀಸ್ ಪ್ರಿಯರಿಗೆ ಭಾರಿ ಇಷ್ಟವಾದ ಸಿರೀಸ್ ಆಗಿತ್ತು. ವೆಬ್ ಸಿರೀಸ್ ಪ್ರಿಯರು ಭಾರಿ ಕುತೂಹಲದಿಂದ ನೋಡುತ್ತಿದ್ದ ಸೇಕ್ರೆಡ್ ಗೇಮ್ಸ್ ಮುಗಿಯುತ್ತಿದ್ದಂತೆ ನಿರಾಸೆ ಪಟ್ಟಿದ್ದರು.

ಆದ್ರೆ ಯಾವಾಗ 'ಸೇಕ್ರೆಡ್ ಗೇಮ್ಸ್-2' ಶುರುವಾಗಿತ್ತೋ ವೆಬ್ ಸಿರೀಸ್ ಪ್ರಿಯರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. 'ಸೇಕ್ರೆಡ್ ಗೇಮ್ಸ್-2' ನಿನ್ನೆ(ಆಗಸ್ಟ್ 15) ರಾತ್ರಿ ನೆಟ್ ಫ್ಲಿಕ್ಸ್ ಲ್ಲಿ ರಿಲೀಸ್ ಆಗಿದೆ.

ಬಹು ನಿರೀಕ್ಷಿತ ಸೇಕ್ರೆಡ್ ಗೇಮ್ಸ್ 2 ಲೀಕ್; ನೆಟ್ ಫ್ಲಿಕ್ಸ್ ಗೆ ಭಾರಿ ನಷ್ಟ

ಆದ್ರೆ ಕುತೂಹಲ, ಕಾತುರ ಹುಟ್ಟುಹಾಕಿದ್ದ ಮಟ್ಟಕ್ಕೆ ಪಾರ್ಟ್-2 ಮೂಡಿಬಂದಿಲ್ಲ ಎನ್ನುವುದು ಅಭಿಮಾನಿಗಳ ನಿರಾಸೆ. ಮೊದಲ ಆವೃತ್ತಿ ನೋಡಿದವರು ಎರಡನೆ ಪಾರ್ಟ್ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ.

ವೀರ್ ಸಾಂಗ್ವಿ ವಿಮರ್ಶೆ

ವೀರ್ ಸಾಂಗ್ವಿ ವಿಮರ್ಶೆ

ಸೇಕ್ರೆಡ್ ಗೇಮ್ಸ್-2 ಪಾರ್ಟ್ ನೋಡಿದ ಪತ್ರಕರ್ತ ವೀರ್ ಸಾಂಗ್ವಿ"ಮೊದಲ ಆವೃತ್ತಿ ತುಂಬಾ ಇಷ್ಟವಾಗಿತ್ತು. ಆದ್ರೆ ಎರಡನೆ ಆವೃತ್ತಿ ನೋಡಲು ತುಂಬ ಕಷ್ಟವಾಗುತ್ತಿದೆ. ಎಲ್ಲಾ ಎಪಿಸೋಡ್ ಅನ್ನು ನೋಡಿದೆ. ಆದ್ರೆ ನನಗೆ ಇಷ್ಟವಾಗಿಲ್ಲ. ಡೈಲಾಗ್ ಬರುವ ಮುನ್ನವೆ ಸಬ್ ಟೈಟಲ್ ಶೋ ಆಗುತ್ತೆ. ಮೊದಲ ಆವೃತ್ತಿಗೆ 10ಕ್ಕೆ 9 ಅಂಕ ಕೊಡುತ್ತೇನೆ. ಆದ್ರೆ ಎರಡನೆ ಆವೃತ್ತಿಗೆ 10ಕ್ಕೆ 4 ಅಂಕ ಕೊಡುತ್ತೇನೆ" ಎಂದು ಹೇಳಿದ್ದಾರೆ.

'ಸ್ಕ್ರಾಲ್' ವಿಮರ್ಶೆ

'ಸ್ಕ್ರಾಲ್' ವಿಮರ್ಶೆ

"ದೊಡ್ಡ ದೊಡ್ಡ ಕಲಾವಿದರು ಇದ್ದಾರೆ. ಆದ್ರೆ ಕಥಾವಸ್ತು ಬೇಸರ ತರಿಸುತ್ತೆ. ಕ್ಲೈಮ್ಯಾಕ್ಸ್ ಭಾರಿ ನಿರಾಸೆ ಮೂಡಿಸುತ್ತೆ" ಎಂದು 'ಸ್ಕ್ರಾಲ್' ವೆಬ್ ಪೋರ್ಟಲ್ ವರದಿ ಮಾಡಿದೆ.

ಅನುರಾಗ್ ಕಶ್ಯಪ್ ಮತ್ತು ನೀರಜ್ ಗಯವಾನ್

ಅನುರಾಗ್ ಕಶ್ಯಪ್ ಮತ್ತು ನೀರಜ್ ಗಯವಾನ್

ಸಿರೀಸ್ ನಲ್ಲಿ ಹಿಂದಿ ಮಾರಾಠಿ ಮತ್ತು ಬೇರೆ ಬೇರೆ ಭಾಷೆಯ ಮಿಶ್ರಿತ ಹಿಂದಿ ಇರುವುದರಿಂದ ಸಬ್ ಟೈಟಲ್ ಸಮಸ್ಯೆಯಾಗಿರುವುದು ವೀಕ್ಷಕರಿಗೆ ಕಷ್ಟವಾಗುತ್ತಿದೆ. ಅಂದ್ಹಾಗೆ ಸೇಕ್ರೆಟ್ ಗೇಮ್ಸ್-2 ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನೀರಜ್ ಗಯವಾನ್ ಸಾರಥ್ಯದಲ್ಲಿ ಮೂಡಿಬಂದಿದೆ.

ದೊಡ್ಡ ಕಲಾವಿದರು ಅಭಿನಯ

ದೊಡ್ಡ ಕಲಾವಿದರು ಅಭಿನಯ

ಸೇಕ್ರೆಟ್ ಗೇಮ್ಸ್ ಖ್ಯಾತಿ ಗಳಿಸಲು ಪ್ರಮುಖವಾದ ಕಾರಣ ಅಂದ್ರೆ ಬಾಲಿವುಡ್ ನ ಖ್ಯಾತ ಕಲಾವಿದರು ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿ ಖಾನ್, ನವಾಜುದ್ದಿನ್ ಸಿದ್ದಿಕಿ, ಕಲ್ಕಿ ಕೊಚ್ಚೀನ್, ರಾಧಿಕಾ ಆಪ್ಟೆ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಬಣ್ಣಹಚ್ಚಿದ್ದಾರೆ.

More from Filmibeat

English summary
Viewers are disappointing after watching sacred games-2. Most expected web series sacred games-2 released on August 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X