For Quick Alerts
  ALLOW NOTIFICATIONS  
  For Daily Alerts

  'ಲೈಗರ್‌'ಗೆ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ರಮ್ಯಾ ಕೃಷ್ಣ ಪಡೆದ ಸಂಭಾವನೆ ಎಷ್ಟು?

  |

  ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ. ಈಗ ಮತ್ತೊಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಬರ್ತಿದೆ. ಅದುವೇ 'ಲೈಗರ್'. ಈ ಚಿತ್ರದ ಪ್ರಚಾರ ಕಾರ್ಯ ಅದ್ಧೂರಿಯಾಗಿ ನಡೆಯುತ್ತಿದೆ.

  'ಲೈಗರ್' ರಿಲೀಸ್‌ಗಾಗಿ ಸಿನಿಮಾ ಪ್ರೇಕ್ಷಕರು ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾದ ಹಾಡು, ಟೀಸರ್, ಟ್ರೈಲರ್ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಆಗಸ್ಟ್ 25ಕ್ಕೆ 'ಲೈಗರ್' ಸಿನಿಮಾದ ರಿಲೀಸ್ ದಿನಾಂಕ ಫಿಕ್‌ ಆಗಿದೆ.

  ಆಮಿರ್ ಖಾನ್ ಜೊತೆ ನಟಿಸಲು ನಾಗಚೈತನ್ಯ ಪಡೆದ ಸಂಭಾವನೆ ಎಷ್ಟು?ಆಮಿರ್ ಖಾನ್ ಜೊತೆ ನಟಿಸಲು ನಾಗಚೈತನ್ಯ ಪಡೆದ ಸಂಭಾವನೆ ಎಷ್ಟು?

  ಸಿನಿಮಾ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಹಲವು ವಿಚಾರಗಳು ರಿವೀಲ್ ಆಗುತ್ತಿವೆ. ಈ ಚಿತ್ರಕ್ಕಾಗಿ ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ ಮತ್ತು ರಮ್ಯಾ ಕೃಷ್ಣ ಪಡೆದಿರುವ ಸಂಭಾವನೆ ಎಷ್ಟು ಎನ್ನುವುದು ರಿವೀಲ್ ಆಗಿದೆ.

  ಸಂಭಾವನೆ ಹೆಚ್ಚಿಸಿಕೊಂಡ ವಿಜಯ್!

  ಸಂಭಾವನೆ ಹೆಚ್ಚಿಸಿಕೊಂಡ ವಿಜಯ್!

  ನಟ ವಿಜಯ್ ದೇವರಕೊಂಡ ತೆಲುಗು ಸಿನಿಮಾರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ. ಆದರೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಮಾತ್ರ 'ಅರ್ಜುನ್ ರೆಡ್ಡಿ' ಸಿನಿಮಾದಿಂದ. ಈ ಚಿತ್ರದ ಬಳಿಕ ನಟ ವಿಜಯ್ ದೇವರಕೊಂಡ ರೆಂಜೇ ಬದಲಾಗಿದೆ. ಇದು ಅವರ ಸಂಭಾವನೆಗೂ ಅನ್ವಯವಾಗುತ್ತದೆ. ಸಾಲು, ಸಾಲು ಹಿಟ್ ಕೊಟ್ಟ ವಿಜಯ್ ದೇವರಕೊಂಡ ಸಂಭಾವನೆ ಕೂಡ ಹೆಚ್ಚಾಗಿದೆ. ಕೊನೆಯದಾಗಿ ತೆರೆಕಂಡ ವಿಜಯ್ ಸಿನಿಮಾ 'ವರ್ಲ್ಡ್ ಫೇಮಸ್ ಲವ್ವರ್' ಸಿನಿಮಾದ ತನಕ ವಿಜಯ್ ದೇವರಕೊಂಡ ಸಂಭಾವನೆ 10 ಕೋಟಿ ರೂಪಾಯಿಯ ಒಳಗೆ ಇತ್ತು. ಆದರೆ 'ಲೈಗರ್' ಚಿತ್ರಕ್ಕೆ ಸಂಭಾವನೆಯನ್ನು ಹೆಚ್ಚಾಗಿದೆ.

  ನಾನು ಅಷ್ಟು ಸಂಭಾವನೆ ಕೇಳಿಲ್ಲ: 'ಸೀತಾ' ಬಗ್ಗೆ ಕರೀನಾ ಕಪೂರ್ ಸ್ಪಷ್ಟನೆನಾನು ಅಷ್ಟು ಸಂಭಾವನೆ ಕೇಳಿಲ್ಲ: 'ಸೀತಾ' ಬಗ್ಗೆ ಕರೀನಾ ಕಪೂರ್ ಸ್ಪಷ್ಟನೆ

  35 ಕೋಟಿ ರೂ. ಪಡೆದ ವಿಜಯ್ ದೇವರಕೊಂಡ!

  35 ಕೋಟಿ ರೂ. ಪಡೆದ ವಿಜಯ್ ದೇವರಕೊಂಡ!

  ವಿಜಯ್ ದೇವರಕೊಂಡ 'ಲೈಗರ್'‌ ಚಿತ್ರಕ್ಕೆ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ವಿಜಯ್ ಈ ಚಿತ್ರಕ್ಕೆ ತಮ್ಮ ಸಿನಿಮಾ ಜರ್ನಿಯಲ್ಲಿಯೇ ಮೊದಲ ಬಾರಿಗೆ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದಾರಂತೆ. 'ಲೈಗರ್'‌ ಚಿತ್ರಕ್ಕಾಗಿ ನಟ ವಿಜಯ್ ದೇವರಕೊಂಡ ಪಡೆದ ಸಂಭಾವನೆ 35 ಕೋಟಿ ರೂಪಾಯಿಯಂತೆ. ಈ ಚಿತ್ರದ ಮೂಲಕ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ವಿಜಯ್ ದೇವರಕೊಂಡ. ಇನ್ನು ಈ ಚಿತ್ರ ಸಕ್ಸಸ್ ಆದರೆ, ಮುಂದಿನ ಚಿತ್ರಕ್ಕೆ 50 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯಲಿದ್ದಾರೆ.

  ಅನನ್ಯಾ ಪಾಂಡೆ ಸಂಭಾವನೆ!

  ಅನನ್ಯಾ ಪಾಂಡೆ ಸಂಭಾವನೆ!

  'ಲೈಗರ್'‌ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆಗೆ, ನಟಿ ಅನನ್ಯಾ ಪಾಂಡೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಈ ಜೋಡಿ ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ. ಆನ್‌ಸ್ಕ್ರೀನ್ ಇವರ ಜೋಡಿ ಅದ್ಬುತ ಎನಿಸುತ್ತದೆ. ಇದು ಈಗಾಗಲೇ ರಿಲೀಸ್ ಆಗಿರುವ ಚಿತ್ರದ ತುಣುಕುಗಳಿಂದ ಸಾಬೀತಾಗಿದೆ. ಅನನ್ಯಾ ಪಾಂಡೆ ಬಾಲಿವುಡ್‌ ಚಿತ್ರಗಳಲ್ಲಿ ಪಡೆಯುತ್ತಿದ್ದ ಸಂಭಾವನೆಗಿಂತಲೂ ಅಧಿಕ ಸಂಭಾವನೆ ಪಡೆದುಕೊಂಡಿದ್ದಾರೆ. ಅನನ್ಯಾ ಪಾಂಡೆ 'ಲೈಗರ್'‌ ಚಿತ್ರಕ್ಕಾಗಿ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.

  'ಲೈಗರ್'‌ಗೆ ರಮ್ಯಾ ಕೃಷ್ಣ ಸಂಭಾವನೆ!

  'ಲೈಗರ್'‌ಗೆ ರಮ್ಯಾ ಕೃಷ್ಣ ಸಂಭಾವನೆ!

  'ಲೈಗರ್'‌ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೊತೆಗೆ ಇರುವ ಮತ್ತೊಂದು ಪ್ರಮುಖ ಪಾತ್ರ ಎಂದರೆ ಅದು ರಮ್ಯಾ ಕೃಷ್ಣ ಪಾತ್ರ. ನಟಿ ರಮ್ಯ ಕೃಷ್ಣ ನೂರಾರು ಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಅದರಲ್ಲೂ 'ಬಾಹುಬಲಿ'ಯಲ್ಲಿ ಶಿವಗಾಮಿಯಾಗಿ ನಟಿಸಿದ ಬಳಿಕ, ಅವರಿಗೆ ಬೇಡಿಕೆ ಹೆಚ್ಚಿದೆ. ಈ ಚಿತ್ರದಲ್ಲಿ ವಿಜಯ್ ದೇವಕೊಂಡ ತಾಯಿಯ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಇದೊಂದು ಪವರ್‌ಫುಲ್ ಪಾತ್ರ ಎನ್ನುವುದು ಟ್ರೈಲರ್‌ನಲ್ಲಿ ರಿವೀಲ್ ಆಗಿದೆ. 'ಲೈಗರ್'‌ ಚಿತ್ರದಲ್ಲಿ ನಟಿಸಲು ರಮ್ಯಾ ಕೃಷ್ಣ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.

  English summary
  Vijay Devarakonda, Ananya Panday, Ramya Krishna Shocking Remuneration For Liger Movie, know More,
  Monday, August 15, 2022, 11:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X