ಈ ಸಿನಿಮಾ ನೋಡಿ ಮೂರು ದಿನ ನಿದ್ದೆ ಮಾಡಿರಲಿಲ್ಲ ವಿಜಯ್ ದೇವರಕೊಂಡ
Recommended Video
ಕೆಲವು ಸಿನಿಮಾಗಳು ಚಿತ್ರಮಂದಿರದಿಂದ ಆಚೆ ಬಂದ ಮೇಲು ಕಾಡುತ್ತವೆ. ಅದರ ಬಗ್ಗೆಯೇ ಯೋಚನೆ ಮಾಡುವ ಹಾಗೆ ಮಾಡುತ್ತವೆ. ಆ ರೀತಿ ವಿಜಯ್ ದೇವರಕೊಂಡ ಕೂಡ ಒಂದು ಸಿನಿಮಾ ನೋಡಿ ತಲೆ ಕೆಡಿಸಿಕೊಂಡಿದ್ದರು.
ವಿಜಯ್ ದೇವರಕೊಂಡಗೆ ಈ ಮಟ್ಟಿಗೆ ಕಾಡಿದ ಸಿನಿಮಾ 'ಗಲ್ಲಿ ಬಾಯ್'. ಈ ಸಿನಿಮಾವನ್ನು ನೋಡಿದ ವಿಜಯ್ ದೇವರಕೊಂಡ ಮೂರು ದಿನ ನಿದ್ದೆ ಮಾಡಿರಲಿಲ್ಲವಂತೆ. ಈ ವಿಷಯವನ್ನು ಅವರೇ ಇತ್ತೀಚಿಗಷ್ಟೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈ ಸಂದರ್ಶನದಲ್ಲಿ ರಣ್ವೀರ್ ಸಿಂಗ್ ಕೂಡ ಭಾಗಿಯಾಗಿದ್ದರು. ರಣ್ವೀರ್ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದ ವಿಜಯ್ ದೇವರಕೊಂಡ 'ಗಲ್ಲಿ ಬಾಯ್' ಸಿನಿಮಾದ ಬಗ್ಗೆ ಮಾತನಾಡಿದರು. ''ಆ ಸಿನಿಮಾ ನೋಡಿದ ಮೇಲೆ ನನಗೆ ಮೂರು ದಿನ ನಿನ್ನೆ ಬರಲಿಲ್ಲ. ನಾನು ಜೀವನದಲ್ಲಿ ಏನು ಮಾಡುತ್ತಿದ್ದೇನೆ. ಯಾವ ಸಿನಿಮಾ ಮಾಡುತ್ತಿದ್ದೇನೆ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿತು'' ಎಂದು ಹೇಳಿದ್ದಾರೆ.
ರಣ್ವೀರ್ ಸಿಂಗ್ ಸಿನಿಮಾಗಳ ಆಯ್ಕೆ, ಪಾತ್ರ ನಿರ್ವಹಣೆ ನೋಡಿ ವಿಜಯ್ ದೇವರಕೊಂಡ ಬಹಳ ಖುಷಿಯಾಗಿದ್ದಾರೆ. ಅದರಲ್ಲಿಯೂ 'ಗಲ್ಲಿ ಬಾಯ್' ಸಿನಿಮಾ ಅವರಿಗೆ ಸ್ಫೂರ್ತಿ ನೀಡಿದೆ.

'ಗಲ್ಲಿ ಬಾಯ್' ಒಬ್ಬ Rapper ಕಥೆಯಾಗಿದೆ. ಹೇಗೆ ಒಬ್ಬ ಸಾಮಾನ್ಯ ಹುಡುಗ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾನೆ ಎನ್ನುವುದನ್ನು ತುಂಬ ಚೆನ್ನಾಗಿ ತೋರಿಸಿದ್ದಾರೆ. ರಣ್ವೀರ್ ಸಿಂಗ್ ನಟನೆ ಸಿನಿಮಾದ ಹೈಲೈಟ್ ಆಗಿದೆ. ಈ ಸಿನಿಮಾ ಈ ವರ್ಷ ಆಸ್ಕರ್ ಗೆ ಆಯ್ಕೆ ಆದ ಭಾರತೀಯ ಸಿನಿಮಾ ಆಗಿತ್ತು.


Click it and Unblock the Notifications











