For Quick Alerts
  ALLOW NOTIFICATIONS  
  For Daily Alerts

  ಉತ್ತರದಲ್ಲಿ ವಿಜಯ್ ದೇವರಕೊಂಡ ಸುನಾಮಿ: ಬಾಲಿವುಡ್ಡಿಗರಿಗೆ ಹೊಟ್ಟೆ ಉರಿ!

  |

  ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿವೆ. 'ಪುಷ್ಪ', 'RRR', 'ಕೆಜಿಎಫ್ 2' ಸಿನಿಮಾಗಳು ದೊಡ್ಡ ಅಲೆಯನ್ನೇ ಎಬ್ಬಿಸಿವೆ. ಇದೆಲ್ಲ ಒತ್ತಟ್ಟಿಗಾದರೆ ವಿಜಯ್ ದೇವರಕೊಂಡ ಹವಾ ಬೇರೆ ರೇಂಜಿಗೇ ಇದೆ.

  ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಮೇಲೆ ಅವುಗಳ ಕಂಟೆಂಟ್ ಆಧಾರದ ಮೇಲೆ ಹವಾ ಸೃಷ್ಟಿಯಾಗುತ್ತಿದೆ. ಆದರೆ ವಿಜಯ್ ದೇವರಕೊಂಡ ಸ್ಟೈಲೇ ಬೇರೆ. ಅವರ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಅವರ ಹೆಸರಿನ ಹವಾ ಸೃಷ್ಟಿಯಾಗಿಬಿಟ್ಟಿದೆ.

  ವಿಜಯ್ ದೇವರಕೊಂಡ ಹೋದಲ್ಲೆಲ್ಲ ಜನಸಾಗರವೇ ಸೇರುತ್ತಿದೆ. ಉತ್ತರ ಭಾರತದಲ್ಲಿ ದಕ್ಷಿಣದ ನಟನೊಬ್ಬನಿಗೆ ಈ ಮಾದರಿಯ ಫ್ಯಾನ್ ಫಾಲೋವಿಂಗ್ ಬಾಲಿವುಡ್ಡಿಗರ ಹೊಟ್ಟೆ ಉರಿವಂತೆ ಮಾಡಿರುವುದು ಪಕ್ಕಾ. ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಭಾಗವಹಿಸಿದ್ದರು ಆ ಕಾರ್ಯಕ್ರಮಕ್ಕೆ ಅದೆಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದರೆಂದರೆ ನೂಕು ನುಗ್ಗಲಿನಿಂದಾಗಿ ವಿಜಯ್ ದೇವರಕೊಂಡ ವೇದಿಕೆ ಬಿಟ್ಟು ತೆರಳಬೇಕಾಯಿತು.

  ಪಾಟ್ನಾದಲ್ಲಿ ಮುಗಿಬಿದ್ದ ಅಭಿಮಾನಿಗಳು

  ಪಾಟ್ನಾದಲ್ಲಿ ಮುಗಿಬಿದ್ದ ಅಭಿಮಾನಿಗಳು

  ಮುಂಬೈ ಬಳಿಕ ಈಗ ಪಾಟ್ನಾದಲ್ಲಿಯೂ ಇದೇ ರೀತಿ ಆಗಿದೆ. ವಿಜಯ್ ದೇವರಕೊಂಡ, ಪಾಟ್ನಾದ ಕಾಲೇಜೊಂದಕ್ಕೆ ತಮ್ಮ 'ಲೈಗರ್' ಸಿನಿಮಾದ ಪ್ರಚಾರಕ್ಕೆಂದು ವಿಜಯ್ ದೇವರಕೊಂಡ ಹೋಗಿದ್ದರು. ಆ ವೇಳೆ ಭಾರಿ ಸಂಖ್ಯೆಯ ಕಾಲೇಜು ಯುವಕ-ಯುವತಿಯರು ಅಲ್ಲಿ ನೆರೆದ ಕಾರಣ ವಿಜಯ್ ದೇವರಕೊಂಡ ಹೆಚ್ಚು ಸಮಯ ಇರಲಾರದೆ ವೇದಿಕೆ ಬಿಟ್ಟು ತೆರಳಬೇಕಾಯಿತು. ವಿಜಯ್ ದೇವರಕೊಂಡ ಅವರನ್ನು ಅಭಿಮಾನಿಗಳು ಮುತ್ತಿಕೊಂಡು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಸುರಕ್ಷಿತವಾಗಿ ಮನೆ ಸೇರಿದೆ ಎಂದ ವಿಜಯ್

  ಸುರಕ್ಷಿತವಾಗಿ ಮನೆ ಸೇರಿದೆ ಎಂದ ವಿಜಯ್

  ಈ ಘಟನೆಯ ಬಳಿಕ ಟ್ವೀಟ್ ಮಾಡಿರುವ ವಿಜಯ್ ದೇವರಕೊಂಡ, ಸುರಕ್ಷಿತವಾಗಿ ಮನೆ ತಲುಪಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ಬಹಳ ಖುಷಿಯಾಗಿದೆ. ನಿಮ್ಮ ಪ್ರೀತಿ ನನ್ನನ್ನು ಮುಟ್ಟಿದೆ. ನೀವು ಸಹ ಸುರಕ್ಷಿತವಾಗಿದ್ದೀರಿ ಎಂದು ಭಾವಿಸಿದ್ದೇನೆ. ನಿಮ್ಮಗಳ ಬಗ್ಗೆಯೇ ಯೋಚಿಸುತ್ತಾ ನಾನು ನಿದ್ದೆಗೆ ಜಾರುತ್ತಿದ್ದೇನೆ, ಧನ್ಯವಾದ ಮುಂಬೈ ಎಂದು ಬರೆದುಕೊಂಡಿದ್ದಾರೆ.

  ಅಹ್ಮದಾಬಾದ್‌ನಲ್ಲೂ ಜನ ಸಾಗರ

  ಅಹ್ಮದಾಬಾದ್‌ನಲ್ಲೂ ಜನ ಸಾಗರ

  ಇಂದು ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅಹ್ಮದಾಬಾದ್‌ನಲ್ಲಿ 'ಲೈಗರ್' ಸಿನಿಮಾದ ಪ್ರಚಾರಕ್ಕೆ ತೆರಳಿದ್ದಾರೆ. ಮುಂಬೈ, ಪಾಟ್ನಾಗಳಂತೆ ಅಲ್ಲಿಯೂ ಭಾರಿ ಸಂಖ್ಯೆಯಲ್ಲಿ ಜನಸಾಗರವೇ ಸೇರಿದೆ. ಅಹ್ಮದಾಬಾದ್‌ನಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳು ವಿಜಯ್ ದೇವರಕೊಂಡ ಅವರನ್ನು ನೋಡಲು ನೆರೆದಿದ್ದಾರೆ. ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ ನಟನೆಯ 'ಲೈಗರ್' ಸಿನಿಮಾ ಆಗಸ್ಟ್ 25 ರಂದು ತೆರೆಗೆ ಬರಲಿದೆ.

  ವಿಜಯ್‌ಗಾಗಿ ನಟಿಯರ ಕಿತ್ತಾಟ

  ವಿಜಯ್‌ಗಾಗಿ ನಟಿಯರ ಕಿತ್ತಾಟ

  ಕೇವಲ ಅಭಿಮಾನಿಗಳು ಮಾತ್ರವಲ್ಲ ಬಾಲಿವುಡ್‌ನ ಯುವ ನಟಿಯರು ಸಹ ವಿಜಯ್ ದೇವರಕೊಂಡ ಕನಸು ಕಾಣುತ್ತಿದ್ದಾರೆ. ಕಾಫಿ ವಿತ್ ಕರಣ್‌ನಲ್ಲಿ ಭಾಗವಹಿಸಿದ್ದ ಬಾಲಿವುಡ್‌ನ ಹಾಟ್ ನಟಿಯರಾದ ಜಾನ್ಹವಿ ಕಪೂರ್ ಹಾಗೂ ಸಾರಾ ಅಲಿ ಖಾನ್ ವಿಜಯ್ ದೇವರಕೊಂಡಗಾಗಿ ಪರಸ್ಪರ ವಾಗ್ವಾದ ನಡೆಸಿದ ಘಟನೆ ನಡೆಯಿತು. ಅಲ್ಲದೆ, ವಿಜಯ್ ದೇವರಕೊಂಡ ಅನ್ನು ಚೀಸ್‌ಗೆ ಹೋಲಿಸಿದ್ದರು. ಇತರ ಕೆಲವು ನಟಿಯರು ಸಹ ವಿಜಯ್ ದೇವರಕೊಂಡ ತಮ್ಮ ಕ್ರಶ್ ಎಂದು ಹೇಳಿಕೊಂಡಿದ್ದಾರೆ.

  English summary
  Vijay Devarakonda Fans flooded in Mumbai Patna and Ahmadabad to see their fav actor. Vijay now doing Liger movie promotions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X