ತಡರಾತ್ರಿ ಜಂಟಿಯಾಗಿ ಕಾಣಿಸಿಕೊಂಡ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮಧ್ಯೆ ಪ್ರೀತಿ-ಪ್ರೇಮ-ಪ್ರಣಯ ಇರುವ ಬಗ್ಗೆ ಸುದ್ದಿಗಳು ಕಳೆದ ಒಂದೆರಡು ವರ್ಷಗಳಿಂದಲೂ ಹರಿದಾಡುತ್ತಲೇ ಇವೆ. ಈ ಸದ್ದಿಗಳನ್ನು ಈ ಜೋಡಿ ಸಹ ಅಲ್ಲಗಳೆದಿಲ್ಲ.
ಆಗಾಗ್ಗೆ ಈ ಜೋಡಿ ಪರಸ್ಪರ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತದೆ, ಮಾಧ್ಯಗಳ ಸುದ್ದಿ ಹಸಿವಿಗೆ ಆಹಾರವಾಗುತ್ತಲೇ ಇರುತ್ತದೆ.
ಇದೀಗ ಮುಂಬೈನ ಬಾಂದ್ರಾದ ಮತ್ತೊಮ್ಮೆ ಈ ಜೋಡಿ ಹೋಟೆಲ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದೆ. ಭಾನುವಾರ ತಡರಾತ್ರಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮುಂಬೈನ ಐಷಾರಾಮಿ ಹೋಟೆಲ್ ಒಂದರಲ್ಲಿ ಒಟ್ಟಿಗೆ ಡಿನ್ನರ್ ಡೇಟ್ ಮುಗಿಸಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬಹುಸಮಯದಿಂದ ಮುಂಬೈನಲ್ಲಿಯೇ ಇದ್ದಾರೆ. ರಶ್ಮಿಕಾ ಅಂತೂ ಮುಂಬೈನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ರಶ್ಮಿಕಾ ಮಂದಣ್ಣ ಈಗಾಗಲೇ ಬಾಲಿವುಡ್ ಸಿನಿಮಾಗಳಿಗೆ ಪಾದಾರ್ಪಣೆ ಮಾಡಿ ಎರಡು ಬಿಗ್ ಬ್ಯಾನರ್ ಸಿನಿಮಾಗಳಲ್ಲಿ ನಟಿಸಿ ಆಗಿದೆ. ಆದರೆ ವಿಜಯ್ ದೇವರಕೊಂಡ ಇನ್ನಷ್ಟೆ ಬಾಲಿವುಡ್ ಸಿನಿಮಾಕ್ಕೆ ಪದಾರ್ಪಣೆ ಮಾಡಬೇಕಿದೆ.
ಇಬ್ಬರೂ ಮುಂಬೈನಲ್ಲಿ ಹಲವು ಕಡೆಗಳಲ್ಲಿ ಒಟ್ಟಿಗೆ ಓಡಾಡುತ್ತಿದ್ದಾರೆ. ಈ ಹಿಂದೆ ಇಬ್ಬರೂ ಮುಂಬೈನ ಜಿಮ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನಾ ರೆಸ್ಟೊರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಜೋಡಿ ಪರಸ್ಪರ ಕೈ-ಕೈ ಹಿಡಿದುಕೊಂಡು ಮುಂಬೈನ ಚಳಿಯನ್ನು ಎಂಜಾಯ್ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ವಿಜಯ್ ದೇವರಕೊಂಡ ತಮ್ಮ 'ಲೈಗರ್' ಸಿನಿಮಾದ ಚಿತ್ರೀಕರಣಕ್ಕೆಂದು ಅಮೆರಿಕಕ್ಕೆ ತೆರಳಿದ್ದರು. ರಶ್ಮಿಕಾ ಮಂದಣ್ಣ ಸಹ ಅಮೆರಿಕಕ್ಕೆ ತೆರಳಿ ಅಲ್ಲಿ ವಿಜಯ್ ದೇವರಕೊಂಡ ಅವರನ್ನು ಭೇಟಿ ಆದರು ಎನ್ನಲಾಗುತ್ತಿದೆ.
ವೃತ್ತಿಯ ವಿಷಯಕ್ಕೆ ಮರಳುವುದಾದರೆ ರಶ್ಮಿಕಾ ಮಂದಣ್ಣ ನಟಿಸಿರುವ 'ಪುಷ್ಪ' ಸಿನಿಮಾ ನಾಲ್ಕು ದಿನಗಳ ಹಿಂದೆ ಬಿಡುಗಡೆ ಆಗಿದ್ದು ಸೂಪರ್ ಹಿಟ್ ಎನಿಸಿಕೊಂಡಿದೆ. ಅದರ ಜೊತೆಗೆ ಹಿಂದಿಯ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ 'ಗುಡ್ ಬೈ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ತೆಲುಗಿನ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಜಾರಿಯಲ್ಲಿದೆ. ಇನ್ನು ವಿಜಯ್ ದೇವರಕೊಂಡ 'ಲೈಗರ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸಿನಿಮಾವು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. 'ಲೈಗರ್' ಸಿನಿಮಾದ ಬಳಿಕ ಸುಕುಮಾರ್ ಜೊತೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.


Click it and Unblock the Notifications











